ಸುದ್ದಿಮೂಲ ವಾರ್ತೆ ರಾಯಚೂರು, ನ.12:
ರಾಯಚೂರು ಮಹಾನಗರ ಪಾಲಿಕೆ, ಸಮಾಜ ಕಲ್ಯಾಾಣ, ಹಿಂದುಳಿದ ವರ್ಗಗಳ ಇಲಾಖೆ, ತಹಶೀಲ್ದಾಾರ್ ಕಚೇರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಜಿಲ್ಲೆಯ 19 ಇಲಾಖೆ ಮುಖ್ಯ ಅಧಿಕಾರಿಗಳು ಸೇರಿ 114 ಜನ ಅಧೀನ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಲೋಕಾಯುಕ್ತ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾಾರೆ.
ಕಳೆದ ಆಗಸ್ಟ್ 28ರಿಂದ 30ರವರೆಗೆ ರಾಯಚೂರು ನಗರದಲ್ಲಿ ಮಿಂಚಿನ ಸಂಚಾರ ನಡೆಸಿದ ಉಪಲೋಕಾಯುಕ್ತ ನ್ಯಾಾ. ಬಿ. ವೀರಪ್ಪ ಅವರು ವಿವಿಧ ಕಡೆ ಸಂಚಾರ ಮಾಡಿ, ಭೇಟಿ ನೀಡಿದ ವೇಳೆ ತಾವು ಕಂಡ ನ್ಯೂನ್ಯತೆ, ಕುಂದು ಕೊರತೆ ಶಿಬಿರದಲ್ಲಿ ಸಾರ್ವಜನಿಕರ ದೂರುಗಳ ಗಂಭೀರವಾಗಿ ಪರಿಗಣಿಸಿ ರಾಯಚೂರಿನಲ್ಲಿ ಯಾವ ಅಧಿಕಾರಿಯ ವಿರುದ್ಧ,ಯಾವ ಕರ್ತವ್ಯ ಲೋಪ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬ ಪಟ್ಟಿಿಯನ್ನು ಬಿಡುಗಡೆ ಮಾಡಲಾಗಿದೆ.
ಅಂದು ಉಪಲೋಕಾಯುಕ್ತರ ಭೇಟಿ ವೇಳೆ ಕಂಡು ಬಂದಿದ್ದ ಲೋಪಗಳ ಪೈಕಿ ಕೆಲವುಗಳನ್ನು ಸರಿಪಡಿಸಿ ವರದಿ ಸಲ್ಲಿಸಲು ಸೂಚಿಸಿದ್ದರಾದರೂ ಉಪ ಲೋಕಾಯುಕ್ತರು ಬೆಂಗಳೂರಿಗೆ ತೆರಳಿದ ಮೇಲೆ ಅವರ ಸೂಚನೆಗಳನ್ನು ಅಧಿಕಾರಿ, ಸಿಬ್ಬಂದಿ ಪಾಲಿಸದೆ ಇರುವುದು ಕಂಡು ಬಂದಿದೆ. ಹೀಗಾಗಿ,ಲೋಕಾಯುಕ್ತ ಕಚೇರಿಯ ಅಧಿಕಾರಿಗಳು ಯಾವ ಅಧಿಕಾರಿ, ಸಿಬ್ಬಂದಿಯ ಕರ್ತವ್ಯ ಲೋಪ, ವ್ಯವಸ್ಥೆೆಗೆ ಹೊಣೆಯಾರೆಂಬ ವಿವರವಾದ 110 ಪುಟಗಳ ಪಟ್ಟಿಿಯನ್ನು ಜಿಲ್ಲಾಾಧಿಕಾರಿಗೆ ರವಾನಿಸಿದ್ದು ಆಯಾ ಇಲಾಖೆಗೂ ಪ್ರತ್ಯೇಕವಾಗಿ ದೂರಿನ ಪ್ರತಿ, ಆದ ಲೋಪದ ಬಗ್ಗೆೆಯೂ ವಿವರವಾಗಿ ಕಳುಹಿಸಲಾಗುವುದು ಎಂಬ ಸಂದೇಶ ರವಾನಿಸಿದ್ದಾಾರೆ.
ಅಲ್ಲದೆ, ರಾಯಚೂರು ಮಹಾನಗರ ಪಾಲಿಕೆಯ ವಲಯ ಆಯುಕ್ತರ, ಕಚೇರಿ ಸಹಾಯಕರು, ಇಂಜಿನಿಯರ್, ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ, ಪತ್ರಾಾಂಕಿತ, ಬಿಸಿಯೂಟ ಅಧಿಕಾರಿ ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ನೀಡಿಲ್ಲ ಎಂಬ ದೂರುಗಳ ಜೊತೆಗೆ ಶಿಕ್ಷಕರ ಹಾಜರಾತಿ, ಸಮಯ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ವಹಿಸಿದ ದಾಖಲೆಗಳ ನೀಡದ ಬಗ್ಗೆೆ ಮತ್ತು ಗಣಿ ಭೂ ವಿಜ್ಞಾನ ಲಾಖೆಯಲ್ಲಿ ಕಲ್ಲು ಕ್ವಾಾರಿ, ಕ್ರಷರ್ಗಳನ್ನು ಪಟ್ಟಾಾ ಭೂಮಿಯಲ್ಲಿ ಒತ್ತುವರಿ ದೂರಿನ ಬಗ್ಗೆೆ ದಾಖಲೆ ನೀಡದ ಕಾರಣ ಭೂ ವಿಜ್ಞಾನಿ ಮುತ್ತಪ್ಪ ಮ ಮಹಾದೇವಸ್ವಾಾಮಿ, ನಿಯಮ ಉಲ್ಲಂಘಿಸಿ ಕ್ವಾಾರಿ ಅಗೆದು ಭೂಮಿ ಸಮತಟ್ಟು ಮಾಡದಿರುವುದು ಪರಿಶೀಲಿಸದೆ ನಿರ್ಲಕ್ಷಿಿಸಿದ ಬಗ್ಗೆೆಯೂ ಗಮನಿಸಿದ ನ್ಯೂನ್ಯತೆ ಸರಿಪಡಿಸದ ಕಾರಣ ಇವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.
ಬಸ್ ನಿಲ್ದಾಾಣದಲ್ಲಿನ ವಾಹನಗಳ ನಿಲುಗಡೆ ನಿಯಮ ಪಾಲಿಸದ ಗುತ್ತಿಿಗೆದಾರನ ನಡೆ, ಸಿಸಿ ಕ್ಯಾಾಮರಾ ಅಳವಡಿಸದ, ಆವರಣ ಸ್ವಚ್ಛತೆ ಇಲ್ಲದ, ಕಸದ ಡ್ರಮ್ಗಳಿಗೆ ಮುಚ್ಚಳವಿಲ್ಲದೆ, ಕುಡಿಯುವ ನೀರಿನ ಘಟಕ, ಮಹಿಳಾ ಶೌಚಾಲಯದ ಅಸ್ವಚ್ಛತೆ ಶುಲ್ಕ 10 ರೂ ಬದಲಿಗೆ 3 ರೂ ಪಡೆಯಲು ಸೂಚಿಸಿದ್ದಲ್ಲದೆ ಅಲ್ಲಿನ ವೈಲ್ಯಗಳ ಪಟ್ಟಿಿ ಮಾಡಿ ಸರಿಪಡಿಸಿ ವರದಿ ಸಲ್ಲಿಸದ ಕಾರಣ ದೂರು ದಾಖಲಿಸಿಕೊಳ್ಳಲಾಗಿದೆ.
ಡಾ.ಅಂಬೇಡ್ಕರ್ ಬಾಲಕರ ವಸತಿ ನಿಲಯದಲ್ಲಿ ವಿದ್ಯಾಾರ್ಥಿಗಳ ಪ್ರವೇಶ, ಇರುವ ಬಗ್ಗೆೆ ವಾರ್ಡನ್ ಹೇಳಿದ ಸಂಖ್ಯೆೆ ಬಗ್ಗೆೆ ಸುಳ್ಳು ಮಾಹಿತಿ ನೀಡಿದ್ದು ಬಯೋಮೆಟ್ರಿಿಕ್ನಲ್ಲಿ ದಾಖಲಾದ ಸಹಿಗೂ ಅಜಗಜಾಂತರ ವ್ಯತ್ಯಾಾಸ, ಸ್ವಚ್ಛತೆಯ ಕೊರತೆ, ಚಿಕಿತ್ಸೆೆ ಕಿಟ್ ಇಲ್ಲದಿರುವುದು, ಪುಸ್ತಕಗಳ ಕೊರತೆ ಇತರ ಅಂಶಗಳ ಪರಿಶೀಲಿಸಿ ನಿಲಯ ಪಾಲಕ ದೇವರಾಜ್, ಇಲಾಖೆ ಎಡಿ ಶಿವಪ್ಪಘಿ, ಉಪನಿರ್ದೇಶರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾಾರೆ.ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕರಾದ ನವೀನ್ ಕುಮಾರ ಹಿಂದುಳಿದ ವರ್ಗಗಳ ಅಭಿವೃದ್ಧಿಿ ಇಲಾಖೆಯ ಸುನಿತಾ, ನಿರ್ಮಿತಿ ಕೇಂದ್ರದ ಅಧಿಕಾರಿ ಮೋಹನ್ ಕೃಷ್ಣ ,ಕೊಳಚೆ ನಿರ್ಮಾಣ ಮಂಡಳಿಯ ಶೈಲಜಾ ಹಾಗೂ ಚಿಕ್ಕಸೂಗೂರು ಪಿಡಿಓ ಹೀಗೆ 19 ಇಲಾಖೆ ಅಧಿಕಾರಿಗಳು ಮತ್ತು ಅವರ ಅಧೀನದಲ್ಲಿ ಬರುವ ಅಧಿಕಾರಿಗಳು ಸೇರಿ ಒಟ್ಟು 112 ಜನ ಅಧಿಕಾರಿಗಳ ವಿರುದ್ಧವೂ ಲೋಕಾಯುಕ್ತದಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಉಪ ಲೋಕಾಯುಕ್ತರ ಭೇಟಿ ಸಂದರ್ಭದಲ್ಲಿ ಕೆಲ ಅಧಿಕಾರಿಗಳ ವಿರುದ್ಧದ ದೂರನ್ನು ಖುದ್ದಾಗಿ ಪರಿಶೀಲಿಸಿ ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡು ಸ್ವಯಂ ಪ್ರೇರಿತ ದೂರಿನ ಎಚ್ಚರಿಕೆ ನೀಡಿದ್ದರು
ಬೆಂಗಳೂರಿನ ಕೇಂದ್ರ ಕಾರ್ಯಾಲಯಕ್ಕೆೆ ಮರಳಿದ ನಂತರ ಸಾರ್ವಜನಿಕರ ಕುಂದು ಕೊರತೆ ನಿರ್ವಹಿಸುವಲ್ಲಿ ವಿಲ ಮತ್ತು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ ಬಿಸಿ ಮುಟ್ಟಿಿಸಿದ್ದಾಾರೆ.
ಈ ಸ್ವಯಂ ಪ್ರೇರಿತ ದೂರಿನಲ್ಲಿ ಕೇವಲ ಇಲಾಖೆಯ ಮುಖ್ಯಸ್ಥರು ಮಾತ್ರವಲ್ಲದೆ, ಸಂಬಂಧಪಟ್ಟ ಸಿಬ್ಬಂದಿಯ ವಿರುದ್ಧವೂ ದೂರು ದಾಖಲಿಸಿಕೊಳ್ಳಲಾಗಿದೆ.
ಅಧಿಕಾರಿಗಳು ಮತ್ತು ಅಧೀನ ಅಧಿಕಾರಿಗಳ ವಿರುದ್ಧ ಈಗ ಪ್ರಕರಣ ದಾಖಲಾಗಿದ್ದು, ಲೋಕಾಯುಕ್ತರು ಈ ಪ್ರಕರಣಗಳಿಗೆ ಸಂಬಂಧಿಸಿ ವಿಚಾರಣೆ ನಡೆಸಲಿದೆ.
——————
ಇಲಾಖೆವಾರು ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತರು ದಾಖಲಿಸಿದ ದೂರುಗಳು
1) ರಿಮ್ಸ್ ಆಸ್ಪತ್ರೆೆ-13
2) ಗಣಿ ಮತ್ತು ಭೂ ವಿಜ್ಞಾನ-32
3)ಮಹಾನಗರ ಪಾಲಿಕೆ-04
4) ಶಿಕ್ಷಣ ಇಲಾಖೆ-04
5) ಸಮಾಜ ಕಲ್ಯಾಾಣ ಇಲಾಖೆ- 6
6) ಉಪ ನೋಂದಣಿ ಕಚೇರಿ-02
7) ಮಹಿಳಾ ಮಕ್ಕಳ ಕಲ್ಯಾಾಣ ಇಲಾಖೆ-04
8) ಬಿಸಿಎಂ -04
9) ಆರ್ಟಿಓ-06
10) ಎಪಿಎಂಸಿ-07
11) ಪರಿಸರ, ಕೈಗಾರಿಕೆ, ಪಂಚಾಯತ್-06
12) ನಿರ್ಮಿತಿ ಕೇಂದ್ರ-01
13) ಆಹಾರ ಇಲಾಖೆ-04
14) ಘನತ್ಯಾಾಜ್ಯ ನಿರ್ವಹಣೆ-06
15) ಕಂದಾಯ,ತಾಪಂ- 08
16 ) ಭೂ ದಾಖಲೆ-02

