ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.06:
ತಾಲೂಕಿನ ಕೆಲವು ಮದ್ಯದ ಅಂಗಡಿಗಳಲ್ಲಿ ಬಿಲ್ನೀಡದೆ ನಕಲಿ ಮದ್ಯಗಳನ್ನು ಮಾರಾಟ ಮಾಡುತ್ತಿಿದ್ದು ಕ್ರಮ ಕೈಗೊಳ್ಳದ ಅಬಕಾರಿ ಸಿಪಿಐ ವಿರುದ್ಧ ಕ್ರಮ ಕೈಗೊಳುವಂತೆ ಅಂಬೇಡ್ಕರ್ ಸೇನೆ ಪದಾಧಿಕಾರಿಗಳು ಸುಣಕಲ್ ಗ್ರಾಾಮದ ಆರ್.ಬಿ.ಶುಗರ್ ಕಾರ್ಖಾನೆಗೆ ಭೇಟಿನೀಡಿದ ಅಬಕಾರಿ ಸಚಿವ ಆರ್.ಬಿ ತಿಮ್ಮಾಾಪುರ ಅವರಿಗೆ ಮನವಿ ಸಲ್ಲಿಸಿದರು.
ಸೇನೆ ಕಾರ್ಯದರ್ಶಿ ಅಮರೇಶ, ಶಶಿಕುಮಾರ ಕೆಸರಹಟ್ಟಿಿ, ಭೀಮಣ್ಣ, ಸುದೀಪ್, ರಾಜು ಇತರರರು ಉಪಸ್ಥಿಿತರಿದ್ದರು.
ನಕಲಿ ಮದ್ಯ ಮಾರಾಟ : ಅಧಿಕಾರಿ ವಿರುದ್ಧ ಅಬಕಾರಿ ಸಚಿವರಿಗೆ ದೂರು

