ಸುದ್ದಿಮೂಲ ವಾರ್ತೆ ಬೆಂಗಳೂರು, ಜ.06:
ಬಳ್ಳಾರಿ ಘರ್ಷಣೆಯಲ್ಲಿ ಮೃತಪಟ್ಟ ಕಾಂಗ್ರೆೆಸ್ ಕಾರ್ಯಕರ್ತನ ಕುಟುಂಬಕ್ಕೆೆ ಬಳ್ಳಾಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು 25 ಲಕ್ಷ ರೂ. ನಗದು ನೀಡಿರುವುದನ್ನು ಪ್ರಶ್ನಿಿಸಿ ಹಿಂದೂ ಕಾರ್ಯಕರ್ತ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಹಿಂದೂ ಕಾರ್ಯಕರ್ತ ತೇಜಸ್ ಗೌಡ ಎಂಬಾತ ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಕಚೇರಿಗೆ ಮಂಗಳವಾರ ಲಿಖಿತ ದೂರು ಸಲ್ಲಿಸಿದರು.
ಭಾರತೀಯ ರಿಸರ್ವ್ ಬ್ಯಾಾಂಕ್ ನಿಯಮವಳಿ ಪ್ರಕಾರ ದೊಡ್ಡ ಮೊತ್ತದ ಹಣವನ್ನು ನಗದು ರೂಪದಲ್ಲಿ ನೀಡುವಂತಿಲ್ಲ. ಚೆಕ್ ಅಥವಾ ಡಿಡಿ ಮೂಲಕ ನೀಡಬೇಕು ಎಂದಿದೆ. ಆದರೆ ಈ ನಿಯಮ ಉಲ್ಲಂಘಿಸಿ ಕಾಂಗ್ರೆೆಸ್ ಕಾರ್ಯಕರ್ತರನ ಕುಟುಂಬಕ್ಕೆೆ ಜಮೀರ್ 25 ಲಕ್ಷ ರೂ. ಮೊತ್ತದ ನಗದನ್ನು ನೀಡಿದ್ದಾರೆ. ಇವರ ವಿರುದ್ಧ ಕ್ರಮ ಜರುಗಿಸಬೆಕು ಎಂದು ಅವರು ದೂರು ನೀಡಿದ್ದಾರೆ.
ಬಳ್ಳಾಾರಿಯ ಜನಾರ್ದನರೆಡ್ಡಿಿ ಮನೆ ಮುಂದೆ ಬ್ಯಾಾರ್ನ ಕಟ್ಟು ವೇಳೆ ಉಂಟಾದ ಘರ್ಷಣೆಯಲ್ಲಿ ಸಿಡಿದ ಗುಂಡಿಗೆ ಕಾಂಗ್ರೆೆಸ್ ಕಾರ್ಯಕರ್ತ ಮೃತಪಟ್ಟಿಿದ್ದ. ಘಟನೆ ಬಳಿಕ ಅವರ ಮನೆಗೆ ತೆರಳಿದ ಸಚಿವ ಜಮೀರ್ಅಹಮ್ಮದ್ ಖಾನ್ ವೈಯಕ್ತಿಿವಾಗಿ ಮೃತ ಕುಟುಂಬದ ಸದಸ್ಯರಿಗೆ ನಗದು ನೀಡಿದ್ದರು. ಈ ಘಟನೆ ಈಗ ರಾಜಕೀಯ ವಿವಾದ ಪಡೆದುಕೊಂಡು ಆದಾಯ ತೆರಿಗೆ ಇಲಾಖೆ ಮೆಟ್ಟಿಿಲೇರಿದೆ.
ಬಾಕ್ಸ್
ನಗದು ಕುರಿತು ಆರ್ಬಿಐ ನಿಯಮ ಏನು ಹೇಳುತ್ತದೆ
ಭಾರತೀಯ ರಿಸರ್ವ್ ಬ್ಯಾಾಂಕ್ನ ನಗದು ವಿತರಣೆ ನಿಯಮಗಳ ಪ್ರಕಾರ, ಬ್ಯಾಾಂಕೇತರ ಹಣಕಾಸು ಸಂಸ್ಥೆೆಗಳು 20 ಸಾವಿರ ರೂ.ಗಿಂತ ಹೆಚ್ಚು ನಗದು ರೂಪದಲ್ಲಿ ಸಾಲ ವಿತರಿಸುವಂತಿಲ್ಲ. ದೊಡ್ಡ ಮೊತ್ತದ ಸಾಲಗಳು 1 ಲಕ್ಷ ರೂ. ಮತ್ತು ಅದಕ್ಕಿಿಂತ ಹೆಚ್ಚು ಚೆಕ್ ಅಥವಾ ಬ್ಯಾಾಂಕ್ ವರ್ಗಾವಣೆ ಮೂಲಕವೇ ಆಗಬೇಕು, ಆದಾಯ ತೆರಿಗೆ ಕಾಯಿದೆ ಸೆಕ್ಷನ್ 269 ಎಸ್ಎಸ್ ಮತ್ತು 269 ಟಿ ಅನ್ವಯ ಈ ನಿಯಮ ಕಡ್ಡಾಾಯವಾಗಿದ್ದು, ನಗದು ವಹಿವಾಟುಗಳನ್ನು ತಡೆಯುವುದು ಮುಖ್ಯ ಉದ್ದೇಶವಾಗಿದೆ. ಇದರ ಜೊತೆಗೆ, ಬ್ಯಾಾಂಕಿಂಗ್ ವಹಿವಾಟುಗಳಲ್ಲಿ ಪಾರದರ್ಶಕತೆಗಾಗಿ ನಗದು ಪೇ-ಇನ್ ಮತ್ತು ಪೇ-ಔಟ್ ದಾಖಲೆಗಳನ್ನು ಪ್ರತ್ಯೇಕವಾಗಿ ಇಡುವಂತೆ ಆರ್ಬಿಐ ಸೂಚನೆ ಇದೆ.
ಇದನ್ನು ಮೀರಿ ಜಮೀರ್ ಅಹ್ಮದ್ ಖಾನ್ 25 ಲಕ್ಷ ರೂ. ನಗದನ್ನು ನೀಡಿದ್ದಾರೆ.

