ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.24:
ಬಾಂಗ್ಲಾಾ ದೇಶದಲ್ಲಿಯ ಹಿಂದೂಗಳ ಮೇಲೆ ನಡೆಯುತ್ತಿಿರುವ ಹತ್ಯೆೆಗಳನ್ನು ಮತ್ತು ದೌರ್ಜನ್ಯಗಳನ್ನು ಖಂಡಿಸಿ ಪ್ರಜ್ಞಾವಂತ ನಾಗರೀಕ ವೇದಿಕೆ ಡಾ. ರಾಜಕುಮಾರ್ ಪಾರ್ಕ್ನ ಮಹಾತ್ಮಾಾ ಗಾಂಧಿ ಪ್ರತಿಮೆ ಬಳಿ ಬುಧವಾರ ಪ್ರತಿಭಟನೆ ನಡೆಸಿ, ವಿಶ್ವಸಂಸ್ಥೆೆಗೆ ದೂರು ಸಲ್ಲಿಸಿದೆ.
ವೇದಿಕೆಯ ಮುಖಂಡರಾದ ಕೆ.ಎಂ. ಮಹೇಶ್ವರಸ್ವಾಾಮಿ ಅವರು ಪ್ರತಿಭಟನೆಯ ನೇತೃತ್ವವಹಿಸಿ, ಬಾಂಗ್ಲಾಾ ದೇಶದಲ್ಲಿ ಧರ್ಮದ ಆಧಾರದ ಮೇಲಿನ ಹಿಂಸಾಚಾರಗಳು ವಿಶ್ವದ ಮಾನವೀಯತೆಗೆ ವಿರುದ್ಧವಾಗಿದ್ದು, ವಿಶ್ವಸಂಸ್ಥೆೆಯು ತಕ್ಷಣವೇ ಮಧ್ಯಪ್ರವೇಶಿಸಿ ಈ ದೊಂಬಿಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಬಾಂಗ್ಲಾಾ ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಿಂಮರ ಮೇಲೆ ಹಲ್ಲೆೆ-ದೌರ್ಜನ್ಯಗಳು ನಡೆಯುತ್ತಿಿವೆ. ಹತ್ಯೆೆಗಳಾಗುತ್ತಿಿವೆ. ಮಾನವೀಯತೆಯ ಕಗ್ಗೊೊಲೆ ನಡೆದಿದೆ. ಮುಗ್ಧ ಕಂದಮ್ಮಗಳನ್ನೂ ಹತ್ಯೆೆ ಮಾಡುತ್ತಿಿರುವುದು ಅಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಜಿಲ್ಲಾಾಡಳಿತದ ಮೂಲಕ ಕೇಂದ್ರ ಸರ್ಕಾರ ಮತ್ತು ವಿಶ್ವಸಂಸ್ಥೆೆಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಿಂಧುವಾಳ ಮಹೇಶಗೌಡ, ನಟರಾಜ್, ಸಿ.ಎಂ. ಗಂಗಾಧರಯ್ಯ, ನಿವೃತ್ತ ಪೊ್ರೆಸರ್ ಲಿಂಗನಗೌಡ, ಎಣ್ಣೆೆ ಎರಿಸ್ವಾಾಮಿ, ಬಂಡೆಗೌಡ, ವಿ.ಎಸ್. ಪ್ರಭಯ್ಯ, ನಾಗಭೂಷಣಗೌಡ, ಡಾ. ದರೂರು ಪುರುಷೋತ್ತಮಗೌಡ, ಶಿವಾರೆಡ್ಡಿಿ, ಅಶೋಕ್ ದಿನ್ನಿಿ, ಆನೆ ಗಂಗಣ್ಣ, ಜಿ. ನೀಲಕಂಠಪ್ಪ, ಎಸ್. ಮಲ್ಲನಗೌಡ, ಕೋಳೂರು ಚಂದ್ರಶೇಖರಗೌಡ, ಎಚ್.ಎಂ. ರುದ್ರಯ್ಯ, ಜಾನೆಕುಂಟೆ ಮಂಜುನಾಥ್, ಸೋಮನಗೌಡ, ಎಚ್.ಎಂ. ಕೊಟ್ರೇೇಶ್, ಹಂಪೇರು ಹಾಲೇಶ್ವರಗೌಡ ಇನ್ನಿಿತರರು ಪಾಲ್ಗೊೊಂಡಿದ್ದರು.
ಬಾಂಗ್ಲಾದಲ್ಲಿ ಹಿಂದು ಹತ್ಯೆಗೆ ಖಂಡನೆ, ವಿಶ್ವಸಂಸ್ಥೆಗೆ ದೂರು

