ಸುದ್ದಿಮೂಲ ವಾರ್ತೆ ರಾಯಚೂರು, ಜ.04:
ರಾಯಚೂರು ಜಿಲ್ಲೆ, ತಾಲೂಕ ಹಾಗೂ ಹೋಬಳಿ ವ್ಯಾಾಪ್ತಿಿಯಲ್ಲಿ ಬರುವ ಎಲ್ಲ ನಗರ, ಪಟ್ಟಣ ಮತ್ತು ಗ್ರಾಾಮಗಳಲ್ಲಿ ದಲಿತರಿಗೆ ಸೇರಿದ ರುದ್ರಭೂಮಿಗಳನ್ನು ಪರಿಶೀಲಿಸಿ ಅಥವಾ ಇಲ್ಲವಾದಲ್ಲಿ ಹೊಸದಾಗಿ ರುದ್ರಭೂಮಿಗಳನ್ನು ಮಂಜೂರು ಮಾಡಬೇಕು, ರುದ್ರಭೂಮಿಗಳಿಗೆ ಮೂಲಭೂತ ಸೌಕರ್ಯಗಳು ಒದಗಿಸಿಕೊ ಡಲು ದಲಿತ ಸಂಘರ್ಷ ಸಮಿತಿ ಒತ್ತಾಾಯಿಸಿದೆ
ಇಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲರಿಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು ರಾಜ್ಯದಲ್ಲಿ ಹಿಂದೂ ರುದ್ರಭೂಮಿಗಳ ಮಾದರಿ ರೀತಿಯಲ್ಲಿ ನವೀಕರಣ ಮಾಡಲು ಸರಕಾರವು ಯೋಜನೆ ರೂಪಿಸಿದೆ ಅದರಂತೆ ಎಲ್ಲಿ ರುದ್ರಭೂಮಿಗಳಿಗೆ ಜಾಗ ಇದೆಯೋ ಅಲ್ಲಿ ಅವುಗಳನ್ನು ನವೀಕರಣ ಮಾಡಲು ಸರಕಾರ ಯೋಜನೆಯನ್ನು ರೂಪಿಸಿದೆ. ಎಲ್ಲಿ ರುದ್ರಭೂಮಿಗಳು ಇಲ್ಲವೋ ಅಂತ ಕಡೆ ರುದ್ರಭೂಮಿಗಾಗಿ ಸರಕಾರವು ಜಾಗವನ್ನು ಖರೀದಿಸಿ ನಿರ್ಮಿಸುವಂತೆ ಮತ್ತು ಅಭಿವೃದ್ಧಿಿ ಕೆಲಸಗಳನ್ನು ಮಾಡಲು ಸರಕಾರವು ಸೂಚಿಸಿದೆ ಹಾಗೂ ರುದ್ರಭೂಮಿಯನ್ನು ಕಬಳಿಸಿದವರಿಗೆ ಕಾನೂನು ಕ್ರಮಜರುಗಿಸಲು ಕಾಯಿದೆ ಬಳಸಲು ಆಗ್ರಹಿಸಿದರು.
ರುದ್ರಭೂಮಿಗಳನ್ನು ಅಭಿವೃದ್ಧಿಿ ಪಡಿಸಬೇಕೆಂದು ಸರಕಾರಕ್ಕೆೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಸಮಿತಿಯ ಭಾಸ್ಕರ್ ರಾಜ್, ಕೆ.ಸಂತೋಷ ಮಂಗಳಾರಪೇಟ್. ಬಿ. ಶ್ರೀನಿವಾಸ್ ಸರ್ತಿಗೇರಿ, ಮಂಜುನಾಥ್ ಆಸ್ಕಿಿಹಾಳ ಇದ್ದರು.

