ಸುದ್ದಿಮೂಲ ವಾರ್ತೆ ರಾಯಚೂರು, ಜ.01:
ಸಮಗ್ರ ಕೃಷಿ ಪದ್ಧತಿಯು ಎಂದೆಂದಿಗೂ ಉತ್ತಮ ಕೃಷಿ ಪದ್ಧತಿಯಾಗಿದ್ದು, ವಿಶ್ವವಿದ್ಯಾಾಲಯದ ವಿಜ್ಞಾನಿಗಳು ಇದನ್ನು ಮನಗಂಡು ವಿಸ್ತರಣಾ ಚಟುವಟುಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಾಲಯ ಕುಲಪತಿ ಡಾ. ಎಂ. ಹನುಮಂತಪ್ಪ ಅವರು ಸಲಹೆ ನೀಡಿದರು.
ಡಿಸೆಂಬರ್ 31ರ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಾಲಯದ ಜಗಜ್ಯೋೋತಿ ಬಸವೇಶ್ವರ ಸಭಾಂಗಣದಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಾಲಯ, ರಾಷ್ಟ್ರೀಯ ಕೃಷಿ ಅಭಿವೃದ್ಧಿಿ ಸಹಕಾರಿ ನಿಯಮಿತ, ಬಾರಾಮುಲ್ಲಾ, ಜಮ್ಮು ಮತ್ತು ಕಾಶ್ಮೀರ ಇವರುಗಳ ಸಹಯೋಗದಲ್ಲಿ ಮೂರು ದಿನಗಳ ಅವಧಿಯ ಕೃಷಿ, ಪಶುವೈದ್ಯಕೀಯ ಮತ್ತು ಕೃಷಿಗೆ ಸಂಬಂಧಿತ ವಿಷಯಗಳಲ್ಲಿ ಸುಸ್ಥಿಿರ ನಾವಿನ್ಯತೆಗಳ ಕುರಿತಾದ ಅಂತರಾಷ್ಟ್ರೀಯ ಸಮ್ಮೇಳನದ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮ್ಮೇಳನಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಜ್ಞಾನ ಮತ್ತು ಕೌಶಲ್ಯಗಳನ್ನು ವಿನಿಮಯ ಮಾಡಿಕೊಳ್ಳಲು ಉತ್ತಮ ವೇದಿಕೆಯಾಗಿವೆ. ಯಾವುದೇ ವಿಷಯದಲ್ಲಿ ಪ್ರಸ್ತುತ ಜ್ಞಾನ ಪಡೆಯುವುದು ಅತ್ಯವಶ್ಯವಾಗಿದೆ. ಅದರಲ್ಲೂ ವಿದ್ಯಾಾರ್ಥಿಗಳು ಇಂತಹ ಸಮ್ಮೇಳನಗಳಲ್ಲಿ ತಪ್ಪದೇ ಭಾಗವಹಿಸಬೇಕೆಂದು ಕಿವಿಮಾತು ಹೇಳಿದರು.
ಒಂದು ಸಮೀಕ್ಷೆ ಪ್ರಕಾರ ಸಂಶೋಧನೆಯಲ್ಲಿ ಒಂದು ರೂಪಾಯಿ ಖರ್ಚು ಮಾಡಿದರೆ ಅದರಿಂದ ರೂ. 13.50 ಲಾಭ ಬರುವುದು, ವಿಸ್ತರಣೆಯಲ್ಲಿ 7.00 ರೂ.ಲಾಭ ಬರುವುದು ಮತ್ತು ಕೃಷಿ ಶಿಕ್ಷಣದಲ್ಲಿ ಒಂದು ರೂಪಾಯಿಯನ್ನು ವ್ಯಯಿಸಿದೆರೆ ಕೇವಲ 2.05 ರೂ.ಲಾಭ ಬರುವುದು. ಆದ್ದರಿಂದ ವಿದ್ಯಾಾರ್ಥಿಗಳಿಗಾಗಲೀ, ರೈತರಿಗಾಗಲೀ ಪರಿಪೂರ್ಣ ಮಟ್ಟದ ಕೃಷಿ ಶಿಕ್ಷಣವು ದೊರೆಯುವಂತಾಗಬೇಕೆಂದರು.
ಇಂದಿನ ವಿದ್ಯಾಾರ್ಥಿಗಳು ಕೃಷಿ ಶಿಕ್ಷಣ ಪರಿಪೂರ್ಣತೆಯಿಂದ ಪಡೆದು ಉತ್ತಮ ಉದ್ಯಮಿದಾರರಾಗಿ ಹತ್ತಾಾರು ಜನಕ್ಕೆೆ ಉದ್ಯೋೋಗ ಕೊಡುವಂತಾಗಬೇಕೆಂದು ವಿದ್ಯಾಾರ್ಥಿಗಳಿಗೆ ಸಲಹೆ ನೀಡಿದರು.
ಕೃತಕ ಬುದ್ಧಿಿಮತ್ತೆೆ, ಯಂತ್ರ ಕಲಿಕೆ, ಡ್ರೋೋನ್ ಬಳಕೆ ಇತ್ಯಾಾದಿಗಳನ್ನು ವಿದ್ಯಾಾರ್ಥಿಗಳು ಹಾಗೂ ವಿಜ್ಞಾನಿಗಳು ಕರಗತಮಾಡಿಕೊಂಡು ಕಾರ್ಯಸಾಧುವಾದ ತಂತ್ರಜ್ಞಾನ, ಸುಸ್ಥಿಿರ ಆರ್ಥಿಕತೆ ಹಾಗೂ ಸಮಾಜ ನಿರೀಕ್ಷಿತ ಅಂಶಗಳಿಗೆ ಹೆಚ್ಚಿಿನ ಆದ್ಯತೆ ನೀಡಬೇಕು ಎಂದರು.
ಈ ವೇಳೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ವಿಶ್ವವಿದ್ಯಾಾಲಯದ ಶಿಕ್ಷಣ ನಿರ್ದೇಶಕ ಡಾ. ಗುರುರಾಜ ಸುಂಕದ ಮಾತನಾಡಿ, ಕೃಷಿಯೇ ನಮ್ಮೆೆಲ್ಲರ ಜೀವಾಳವಾಗಿದ್ದು, ಶೇ.48 ರಷ್ಟು ಜನ ನೇರವಾಗಿ ಕೃಷಿ ಅವಲಂಬಿತರಾಗಿರುವರು. ನಮ್ಮ ದೇಶದ ಜಿ.ಡಿ.ಪಿ ಗೆ ಶೇ. 17 ರಷ್ಟು ಕೊಡುಗೆಯು ಕೃಷಿಯದ್ದಾಗಿದೆ. ಆದಾಗ್ಯೂ ಹೆಚ್ಚು ಸಂಕೀರ್ಣವಾದ ಈ ಕ್ಷೇತ್ರ ಕಡೆಗಣಿಸಲ್ಪಟ್ಟಿಿರುವುದು ವಿಷಾದನೀಯವೆಂದರು.
ರೈತರೇ ಮೊದಲು ಎಂಬ ಸಿದ್ಧಾಾಂತದೊಂದಿಗೆ ನಾವೆಲ್ಲರೂ ಕೆಲಸಮಾಡಬೇಕಾಗಿದೆ. ವಿದ್ಯಾಾರ್ಥಿಗಳೂ ಕೂಡ ಕೃಷಿ ಶಿಕ್ಷಣ ಪರಿಪೂರ್ಣತೆಯಿಂದ ಕಲಿತರೆ ಮಾತ್ರ ಉತ್ತಮ ಉದ್ಯೋೋಗ ಅವಕಾಶಗಳು ದೊರೆಯುವವು ಎಂದು ಕಿವಿಮಾತು ಹೇಳಿದರು.
ಈ ವೇಳೆ ಸಮ್ಮೇಳನದ ಸಂಯೋಜಕ ಡಾ.ಆರ್.ಎ. ಶಾಹ ಬಾರಾಮುಲ್ಲ ಅವರು ಮಾತನಾಡಿ, ಇಂತಹ ಸಮ್ಮೇಳನಗಳು ಜ್ಞಾನಾರ್ಜನೆ, ಮತ್ತು ಕೌಶಲ್ಯಭಿವೃದ್ಧಿಿಗೆ ಪೂರಕವಾಗಿವೆ. ಆದ್ದರಿಂದ ವಿದ್ಯಾಾರ್ಥಿಗಳು ಇವುಗಳಲ್ಲಿ ಭಾಗವಹಿಸಿ ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದ ನಿರಂತರ ಬೆಳವಣಿಗೆಗೆ ಸಹಕಾರಿಯಾಗಬೇಕೆಂದು ಹೇಳಿದರು.
ಈ ವೇಳೆ ಅಂತರಾಷ್ಟ್ರೀಯ ಸಮ್ಮೇಳನದ ಆಯೋಜನಾ ಸಂಘಟಕರಾದ ಡಾ. ಜಾಗೃತಿ ಬಿ. ದೇಶಮಾನ್ಯ ಅವರು ಸಮಾರೋಪ ಸಮಾರಂಭದಲ್ಲಿ ಹಾಜರಿದ್ದ ಎಲ್ಲರನ್ನು ಸ್ವಾಾಗತಿಸಿ, ಸಮ್ಮೇಳನದಲ್ಲಿ ಕ್ರಿಿಯಾಶೀಲವಾಗಿ ಭಾಗವಹಿಸಿದ್ದ ಎಲ್ಲ ಸಮ್ಮೇಳನಾರ್ಥಿಗಳಿಗೆ ವಿಶ್ವವಿದ್ಯಾಾಲಯದ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಹಾಗೂ ಮುಂಬರುವ 2026ಕ್ಕೆೆ ಶುಭಕಾಮನೆಗಳನ್ನು ಕೋರಿದರು.
ಈ ವೇಳೆ ಕೃಷಿ ಅರ್ಥಶಾಸ್ತ ವಿಭಾಗದ ಪ್ರಾಾಧ್ಯಾಾಪಕರು ಮತ್ತು ಮುಖ್ಯಸ್ಥರಾದ ಡಾ.ಜಿ.ಬಿ. ಲೋಕೆಶ್ ಅವರು ಮೂರು ದಿನಗಳ ಅವಧಿಯ ಸಮ್ಮೇಳನದ ವರದಿ ಮಂಡಿಸಿದರು.
ಕಾರ್ಯಕ್ರಮದಲ್ಲಿ ಉತ್ತಮ ರೀತಿಯಲ್ಲಿ ಸಂಶೋಧನಾ ಲಿತಾಂಶಗಳನ್ನು ಮಂಡಿಸಿದ ಹಾಗೂ ಉತ್ತಮ ರೀತಿಯಲ್ಲಿ ಭಿತ್ತಿಿಚಿತ್ರಗಳನ್ನು ಪ್ರದರ್ಶಿಸಿದ ಸಮ್ಮೇಳನಾರ್ಥಿಗಳಿಗೆ ಪ್ರಶಸ್ತಿಿಗಳನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಕೃಷಿ ಅರ್ಥಶಾಸ್ತ ವಿಭಾಗದ ಸಹ ಪ್ರಾಾಧ್ಯಾಾಪಕ ಡಾ. ಸುರೇಶ್ ಅವರು ಸಮಾರೋಪ ಸಮಾರಂಭಕ್ಕೆೆ ವಂದಿಸಿದರು.
ಅಂತರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಗ್ರ ಕೃಷಿ ಪದ್ಧತಿ ಎಂದೆಂದಿಗೂ ಉತ್ತಮ: ಕುಲಪತಿ ಡಾ.ಎಂ.ಹನುಮಂತಪ್ಪ

