ಸುದ್ದಿಮೂಲ ವಾರ್ತೆ ರಾಯಚೂರು, ಡಿ.31:
ಅನಧಿಕೃತ ತರಕಾರಿ ಮಾರುಕಟ್ಟೆೆ ಸ್ಥಳಾಂತರ ಮಾಡುವಲ್ಲಿ ಸಂಪೂರ್ಣ ವಿಳಂಬ ಧೋರಣೆ ಅನುಸರಿಸುತ್ತಿಿರುವುದರಿಂದ ಬೇಸತ್ತು ಉಸ್ಮಾಾನಿಯ ತರಕಾರಿ ಮಾರಾಟಗಾರರ ಸಂಘವನ್ನೆೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್.ಮಹಾವೀರ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಅನಧಿಕೃತ ತರಕಾರಿ ಮಾರುಕಟ್ಟೆೆ ಸ್ಥಳಾಂತರಿಸುವಲ್ಲಿ ಅಧಿಕಾರಿಗಳು ವಿಳಂಬ, ನಿರ್ಲಕ್ಷ ವಹಿಸಿದ್ದರಿಂದ ಅಧಿಕೃತ ತರಕಾರಿ ಮಾರಾಟಗಾರರ ಹಿತ ಕಾಯಲು ಆಗದೆ ಬೇಸರವಾಗಿದ್ದರಿಂದ ಈ ತೀರ್ಮಾನಕ್ಕೆೆ ಬಂದಿದ್ದಾಾಗಿ ಹೇಳಿದರು.
ಮಾರುಕಟ್ಟೆೆ ಸ್ಥಳಾಂತರ ರಾಜಕೀಯ ನಡೆಯುತ್ತಿಿದೆ ಎಂದು ದೂರಿದ ಅವರು ಅತ್ತ ಎಪಿಎಂಸಿಯಲ್ಲೀ ನಿವೇಶನ ಹಂಚಿಕೆ ನಿಂತಿದ್ದು ಶಾಸಕರು, ಎಪಿಎಂಸಿ ಅಧ್ಯಕ್ಷರಿಗೂ ಮನವಿ ಸಲ್ಲಿಸಿದರೂ ಉಪಯೋಗವಾಗಿಲ್ಲಘಿ. ಹೀಗಾಗಿ, ಎಸ್ಸಿಎಸ್ಟಿ ನ್ಯಾಾಯಾಲಯದಲ್ಲಿ ದೂರು ಸಲ್ಲಿಸಲಾಗುವುದು ಎಂದರು.
ಕಳೆದ 15 ವರ್ಷಗಳಿಂದ ನಾವು ಮಾಡಿದ ಕೆಲಸ ಮಾಡದೆ ಇಕ್ಬಾಾಲ್ ತಮ್ಮ ಸಂಘ ಮಾಡುತ್ತಿಿದೆ ಎಂದು ಹೇಳುತ್ತಿಿದ್ದಾಾರೆ.ಹಾಗಾಗಿ, ಗೊಂದಲ ಮಾಡಬಾರದು ಎನ್ನುವ ಕಾರಣಕ್ಕೆೆ ಅವರು, ಅವರ ಸಂಘದವರೆ ಕೆಲಸ ಮಾಡಲಿ ನಮ್ಮ ಸಂಘ ರದ್ದು ಮಾಡಿಕೊಳ್ಳುತ್ತೇವೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ಪ್ರಭು ನಾಯಕ, ಉದಯ್ ಇತರರಿದ್ದರು.

