ಸುದ್ದಿಮೂಲ ವಾರ್ತೆ ರಾಯಚೂರು, ಜ.10:
ಸರ್ಕಾರಿ ಸ್ವಾಾಮ್ಯದ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಮಿತಿ ಪ್ರತಿಶತ ಶೇ.100ರಷ್ಟು ಹೆಚ್ಚಳ ವಿರೋಧಿಸಿ ವಿಮಾ ನೌಕರರ ಸಂಘ ಪ್ರತಿಭಟನೆ ನಡೆಸಿತು.
ಇಂದು ನಗರದ ಭಾರತೀಯ ಜೀವ ವಿಮಾ ಕಚೇರಿ ಬಳಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ನೌಕರರು, ಸಿಬ್ಬಂದಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋೋಶ ವ್ಯಕ್ತಪಡಿಸಿದರು. ಪ್ರಧಾನ ಮಂತ್ರಿಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳದ ಮಿತಿಯನ್ನು ಶೇ.100ಕ್ಕೆೆ ಹೆಚ್ಚಿಿಸಿದ್ದು ಮತ್ತು ವಿಮಾ ಕಾನೂನುಗಳು (ತಿದ್ದುಪಡಿ) ಮಸೂದೆಗೆ ಒಪ್ಪಿಿಗೆ ನೀಡಲು ಸೇರಿದಂತೆ ಹಲವಾರು ಬಂಡವಾಳಶಾಹಿ ಪರ ಬಂಡವಾಳ ಹಾಗೂ ದೇಶದ ಆರ್ಥಿಕ ಸ್ವಾಾಯತ್ತೆೆತೆಗೆ ಪ್ರತಿಕೂಲ ಪರಿಣಾಮ ಬೀರುವ ಕ್ರಮಗಳಿಗೆ ಕೇಂದ್ರ ಸರಕಾರದ ಈ ನಡೆಗೆ ವಿರೋಧಿಸಿದರು.
ವಿಮೆಯಲ್ಲಿನ ಒಟ್ಟು ವಿದೇಶಿ ಬಂಡವಾಳದ ಹೂಡಿಕೆ ಕೇವಲ ಶೇ. 32 ರಷ್ಟಿಿದೆ. ಹೀಗಿರುವಾಗ, ಸರ್ಕಾರವು ಮಿತಿಯನ್ನು ಶೇ.100ಕ್ಕೆೆ ಹೆಚ್ಚಿಿಸಿ, ಭಾರತದಲ್ಲಿ ಕಾರ್ಯನಿರ್ವಹಿಸಲು ವಿದೇಶಿ ಬಂಡವಾಳಕ್ಕೆೆ ಸಂಪೂರ್ಣ ಸ್ವಾಾತಂತ್ರ್ಯ ನೀಡುವುದು ಅಸಮಂಜಸವಾಗಿದೆ. ಈ ನಿರ್ಧಾರ ಭಾರತೀಯ ಆರ್ಥಿಕತೆಯ ಮೇಲೆ ಮಾತ್ರವಲ್ಲದೆ ಭಾರತೀಯ ವಿಮಾ ಕಂಪನಿಗಳ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎಂದು ಆಪಾದಿಸಿದರು.
ಭಾರತೀಯ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳ ಹಿತಾಸಕ್ತಿಿಗಳ ಮೇಲೆ ದುರಂತ ಪರಿಣಾಮ ಬೀರಲಿದೆ. ವಿಮಾ ಕಾಯಿದೆ 1938, ಎಲ್ಐಸಿ ಕಾಯಿದೆ 1956 ಮತ್ತು ಐಆರ್ಡಿಎ ಕಾಯಿದೆ 1999 ರಂತಹ ವಿಮಾ ಕಾನೂನುಗಳಿಗೆ ತಿದ್ದುಪಡಿ ತರುವ ಹಿಮ್ಮೆೆಟ್ಟಿಿಸುವ ಪ್ರಸ್ತಾಾವನೆ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು, ನೌಕರರು ಪಾಲ್ಗೊೊಂಡಿದ್ದರು.
ವಿಮಾ ಕ್ಷೇತ್ರದಲ್ಲಿ ಎ್ಡಿಐ ಮಿತಿ ಹೆಚ್ಚಳಕ್ಕೆ ಖಂಡನೆ

