ಸುದ್ದಿಮೂಲ ವಾರ್ತೆ ಮಾನ್ವಿ, ಜ.03:
ಹುಬ್ಬಳ್ಳಿಿ ತಾಲೂಕಿನ ಇನಾಮ ವೀರಾಪುರ ಗ್ರಾಾಮದಲ್ಲಿ ವಿವೇಕಾನಂದ ಮಾದಿಗ ಅವರೊಂದಿಗೆ ವಿವಾಹವಾದ ಮಾನ್ಯಳನ್ನು ಅವರ ತಂದೆ ಅವರ ಕುಟುಂಬದವರು ಅಮಾನವೀಯವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಖಂಡಿಸಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಶುಕ್ರವಾರ ತಹಸೀಲ್ದಾಾರ್ ಮೂಲಕ ಮುಖ್ಯಮಂತ್ರಿಿ ಇವರಿಗೆ ಮನವಿ ಸಲ್ಲಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ಧ್ವನಿ ಚಂದ್ರಕಾಂತ ಎಸ್.ಕಂದ್ರೋಳ್ಳಿಿ ಬಣದ ಜಿಲ್ಲಾಧ್ಯಕ್ಷ ಅಬ್ರಾಾಹಂ ಪನ್ನೂರು, ದಲಿತ ಮುಖಂಡ ರವೀಂದ್ರ ಜಾನೇಕಲ್ ಮಾತನಾಡಿ, ಇನಾಮ್ ವೀರಾಪೂರ ಗ್ರಾಾಮದಲ್ಲಿ ವಿವೇಕಾನಂದ ಮಾದಿಗ ಅವರೊಂದಿಗೆ ವಿವಾಹವಾದ ಮಾನ್ಯಳನ್ನು ಈ ಹುಡುಗಿ ತಂದೆ ಅವರ ಕುಟುಂಬದವರು ಅಮಾನವೀಯವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವುದನ್ನು ನಮ್ಮ ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ.
ಇದುವರೆಗೂ ಆರೋಪಿಗಳನ್ನು ಬಂಧಿಸದೆ ಇರುವುದು ಕಂಡರೆ ನಮ್ಮ ರಾಜ್ಯದಲ್ಲಿ ಯಾವ ರೀತಿ ಕಾನೂನು ಕ್ರಮಗಳು ತಕ್ಷಣಕ್ಕೆೆ ನ್ಯಾಾಯ ಕೊಡಿಸುತ್ತದೆ ಎನ್ನುವುದು ಎದ್ದು ಕಾಣುತ್ತದೆ. ಈ ರೀತಿಯ ಅಸ್ಪ್ರಶ್ಯತೆ ಆಚರಣೆಯ ಘಟನೆಗಳು ರಾಜ್ಯಾಾದಾದಂತ ನಡೆಯುತ್ತಿಿರುವುದು ವಿಷಾದನೀಯ ಸಂಗತಿಯಾಗಿದೆ. ಆಡಳಿತ ಸರ್ಕಾರವು ಈ ಕೃತ್ಯದ ಕುರಿತು ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಜರುಗಿಸಿ ನ್ಯಾಾಯ ಒದಗಿಸಬೇಕು ಎಂದು ಒತ್ತಾಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕಾಧ್ಯಕ್ಷ ಸದಾನಂದ ಪನ್ನೂರು, ಪದಾಧಿಕಾರಿಗಳಾದ ವಸಂತ ಕೊಟ್ನೆೆಕಲ್, ತಿಮಲಮ್ಮ, ನರಸಿಂಹಲು, ವಿಜಯಲಕ್ಷ್ಮಿಿ, ರಾಜಕುಮಾರ ಕುರ್ಡಿ, ಸ್ವಾಾಮಿದಾಸ ಕುರ್ಡಿ, ಶಿವರಾಜ, ಬಸವರಾಜ ಬಲ್ಲಟಗಿ, ಹೊನ್ನಪ್ಪ, ಹನುಮಂತ ಕೊಟ್ನೆೆಕಲ್, ವೆಂಕಟೇಶ ಉಪಸ್ಥಿಿತರಿದ್ದರು.
ಮಾನ್ಯಳ ಕೊಲೆ ಘಟನೆಗೆ ಖಂಡನೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ ಮನವಿ

