ಸುದ್ದಿಮೂಲ ವಾರ್ತೆ ಬೀದರ್, ಜ.06:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಜಿಲ್ಲಾ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ನಾಗಶೆಟ್ಟಿಿ ಧರಂಪುರ ಮಂಗಳವಾರ ಹೃದಯಘಾತದಿಂದ ನಿಧನರಾಗಿದ್ದಾರೆ.
ನಗರದ ಚಿದ್ರಿಿ ಬಡಾವಣೆ ನಿವಾಸಿಯಾಗಿದ್ದ ಧರಂಪುರ ವಾರಪತ್ರಿಿಕೆ, ಸ್ಥಳೀಯ ಚಾನೆಲ್, ದಿನಪತ್ರಿಿಕೆಗಳಲ್ಲಿ ದಶಕಗಳ ಕಾಲದಿಂದ ಸೇವೆ ಸಲ್ಲಿಸಿದ್ದಾರೆ. ಸದಾ ಕ್ರಿಿಯಾಶೀಲತೆ ಎಲ್ಲರೊಂದಿಗೂ ಬೆರೆಯುತ್ತಿಿದ್ದ ಧರಂಪುರ ನಿಧನದಿಂದ ಜಿಲ್ಲೆಯ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆೆ, ಶಾಸಕ ಶೈಲೇಂದ್ರ ಬೆಲ್ದಾಾಳೆ ಸೇರಿದಂತೆ ಜಿಲ್ಲೆಯ ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.
ಪತ್ರಕರ್ತ ಧರಂಪುರ ನಿಧನ – ಗಣ್ಯರ ಸಂತಾಪ

