ಮದೀನಾ (ಸೌದಿ ಅರೇಬಿಯಾ) , ನ.17:
ಮುಸ್ಲಿಿಂ ಧರ್ಮದ ಪವಿತ್ರ ಸ್ಥಳ ಮೆಕ್ಕಾಾದಿಂದ ಮದೀನಾಗೆ ಉಮ್ರಾಾ ಯಾತ್ರಿಿಕರು ಪ್ರಯಾಣಿಸುತ್ತಿಿದ್ದ ಬಸ್ ಅಪಘಾತಕ್ಕೆೆ ತುತ್ತಾಾಗಿ ಬೆಂಕಿ ತಗುಲಿ ಕನಿಷ್ಟ 42 ಮಂದಿ ಭಾರತೀಯರು ಮೃತಪಟ್ಟಿಿದ್ದಾರೆ.
ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡು ಅವರನ್ನು ಚಿಕಿತ್ಸೆೆಗೆ ಆಸ್ಪತ್ರೆೆಗೆ ದಾಖಲಿಸಲಾಗಿದೆ.
ಸೋಮವಾರ ನಸುಕಿನ 1.30ರಲ್ಲಿ ಮುಫ್ರಿಿಹತ್ ಬಳಿ ಡೀಸೆಲ್ ಟ್ಯಾಾಂಕರ್ಗೆ ಬಸ್ ಡಿಕ್ಕಿಿ ಹೊಡೆದ ಪರಿಣಾಮ ಬೆಂಕಿ ತಗುಲಿ ಇಡೀ ಬಸ್ಗೆ ಹರಡಿತು. ದುರಂತದಲ್ಲಿ ಸದ್ಯ 42 ಮಂದಿ ತೆಲಂಗಾಣದ ಉಮ್ರಾಾ ಯಾತ್ರಿಿಕರು ಮೃತಪಟ್ಟಿಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಾವಿನ ಸಂಖ್ಯೆೆ ಇನ್ನಷ್ಟು ಹೆಚ್ಚಾಾಗಲಿದೆ ಎಂದು ತಿಳಿದು ಬಂದಿದೆ.
ಗಾಢ ನಿದ್ರೆೆಯಲ್ಲಿದ್ದ ಯಾತ್ರಿಿಕರು:
ಬಸ್ ಡಿಸೇಲ್ ಟ್ಯಾಾಂಕರ್ಗೆ ಡಿಕ್ಕಿಿ ಹೊಡೆದ ವೇಳೆ ಎಲ್ಲ ಪ್ರಯಾಣಿಕರು ಗಾಢ ನಿದ್ರೆೆಯಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹೈದ್ರಾಾಬಾದಿನ 20 ಮಹಿಳೆಯರು ಹಾಗೂ 11 ಮಕ್ಕಳು ಸಜೀವ ದಹನವಾಗಿದ್ದಾರೆ.
ಸಂತ್ರಸ್ತರಿಗೆ ಅಗತ್ಯ ನೆರವು:
ಅಪಘಾತದಲ್ಲಿ ಮೃತಪಟ್ಟ ಭಾರತೀಯರಿಗಾಗಿ ಪ್ರಧಾನಿ ನರೇಂದ್ರ ಮೋದಿ ಶೋಕ ವ್ಯಕ್ತಪಡಿಸಿದ್ದಾರೆ. ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಮತ್ತು ಜೆಡ್ಡಾಾದ ಕಾನ್ಸುಲೇಟ್ ಸಂತ್ರಸ್ತರಿಗೆ ಎಲ್ಲ ನೆರವನ್ನು ನೀಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಅಪಘಾತದಿಂದ ತೀವ್ರ ದುಃಖವಾಗಿದೆ. ತಮ್ಮ ಪ್ರೀೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ನಾವಿದ್ದೇವೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಪ್ರಾಾರ್ಥಿಸುತ್ತೇನೆ. ನಮ್ಮ ಅಧಿಕಾರಿಗಳು ಸಹ ಸೌದಿ ಅರೇಬಿಯಾದ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಾಕ್ಸ್
ಸಿಎಂ ರೇವಂತ್ ರೆಡ್ಡಿಿ ದಿಗ್ಭ್ರಮೆ
ಸೌದಿ ಅರೇಬಿಯಾದ ಮೆಕ್ಕಾಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಹೈದ್ರಾಾಬಾದಿನ ಪ್ರಯಾಣಿಕರು ಸಜೀವ ದಹನವಾಗಿರುವುದಕ್ಕೆೆ ತೆಲಂಗಾಣ ಮುಖ್ಯಮಂತ್ರಿಿ ರೇವಂತ್ ರೆಡ್ಡಿಿ ದಿಗ್ರ್ಭಮೆ ವ್ಯಕ್ತಪಡಿಸಿದ್ದಾರೆ.
ಅಪಘಾತದ ಸುದ್ದಿ ತಿಳಿಯುತ್ತಿಿದ್ದಂತೆ ದೆಹಲಿಯಲ್ಲಿರುವ ರಿಯಾದ್ ರಾಯಭಾರ ಕಚೇರಿಯೊಂದಿಗೆ ಮಾತುಕತೆ ನಡೆಸಲಾಗಿದೆ. ಅಪಘಾತದಲ್ಲಿ ಮೃತಪಟ್ಟವರ ಹಾಗೂ ಗಾಯಗೊಂಡವರ ಸಂಪೂರ್ಣ ವಿವರ ನೀಡುವಂತೆ ಮನವಿ ಮಾಡಲಾಗಿದೆ. ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

