ಸುದ್ದಿಮೂಲ ವಾರ್ತೆ ರಾಯಚೂರು, ಜ.19:
ವೀರಶೈವ ಲಿಂಗಾಯತ ಸಮುದಾಯ ಸಂಘಟಿಸುವಲ್ಲಿ ಈ ಭಾಗದ ನಾಯಕರಾಗಿದ್ದ ಭೀಮಣ್ಣ ಖಂಡ್ರೆೆ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಬಸವ ಕೇಂದ್ರದ ಗೌರವಾಧ್ಯಕ್ಷ ಹರವಿ ನಾಗನಗೌಡ ಹೇಳಿದರು.
ನಗರದ ಬಸವ ಕೇಂದ್ರದಲ್ಲಿ ಲಿಂ. ಭೀಮಣ್ಣ ಖಂಡ್ರೆೆ ಅವರ ನಿಧನದ ಹಿನ್ನೆೆಲೆಯಲ್ಲಿ ಸಂತಾಪ ಸಭೆಯಲ್ಲಿ ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿ ವೌನಾಚರಣೆ ಸಲ್ಲಿಸಿ ನುಡಿನಮನ ಸಲ್ಲಿಸಿದರು. ನಾಲ್ಕು ಬಾರಿ ಶಾಸಕರಾಗಿ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ ಅಖಿಲ ಭಾರರ ವೀರಶೈವ ಲಿಂಗಾಯತ ಸಭಾ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆಂದು ಹೇಳಿದರು.
ಲಿಂಗಾಯತ ಸಮಾಜವನ್ನು ಒಂದುಗೂಡಿಸುವ ಉದ್ದೇಶದಿಂದ ಪಂಚಪೀಠ , ವಿರಕ್ತ ಮಠಾಧೀಶರರನ್ನು ಒಂದೇ ಸಮಾನ ವೇದಿಕೆಯಲ್ಲಿ ಕೂಡಿಸಿ ಅಧಿವೇಶನ ಕೂಡಲ ಸಂಗಮದಲ್ಲಿ ನಡೆಸಿದ್ದನ್ನು ನೆನಪಿಸಿದರು.
ಸಿ ಬಿ.ಪಾಟೀಲ ವಕೀಲರು ಮಾತನಾಡಿ ಖಂಡ್ರೆೆ ಅವರು ಲಿಂ. ಶಾಮನೂರ ಶಿವಶಂಕರಪ್ಪ ಅವರೊಂದಿಗೆ ಸೇರಿ ರಾಜ್ಯದಲ್ಲಿ ಸಂಚರಿಸಿ ಸುಮಾರು 5 ಕೋಟಿ ಹಣ ಸಂಗ್ರಹಿಸಿ ಬೆಂಗಳೂರಿನ ಪ್ರತಿಷ್ಠಿಿತ ಬಡಾವಣೆ ಸದಾಶಿವ ನಗರದಲ್ಲಿ ವೀರಶೈವ- ಲಿಂಗಾಯತ ಭವನ ಕಟ್ಟಿಿಸಿದ ಶ್ರೇಯಸ್ಸು ಸಲ್ಲುತ್ತದೆ ಎಂದರು.
ಚನ್ನಬಸವ ಇಂಜಿನಿಯರ ಮಾತನಾಡಿ ಖಂಡ್ರೆೆಯವರು ಶಾಸಕರಾಗಿದ್ದಾಗ ರಾಜ್ಯದಲ್ಲಿ ರೈತರಿಗೆ ಬಿತ್ತಲು ಬೀಜದ ಕೊರತೆ ಉಂಟಾದಾಗ ವ್ಯಾಾಪಾರಸ್ಥರು ಬೀಜ ಸಂಗ್ರಹಿಸಿಟ್ಟಿಿದ್ದ ಗೋದಾಮುಗಳ ಬೀಗ ಮುರಿದು ಬೀಜ ಪೂರೈಸಿದ ಅವರ ಶ್ರಮ ರೈತ ಪರ ಕಾಳಜಿ ತೋರಿಸುತ್ತದೆ ಎಂದರು.
ಅಮರೇಗೌಡ ಪಾಟೀಲ್, ಶರಣಬಸವ ಜಾಡಲದಿನ್ನಿಿ, ಜೆ. ಬಸವರಾಜ ವಕೀಲರು, ಚನ್ನಬಸವ ಮಾಹಾಜನ ಶೆಟ್ಟಿಿ ಸೇರಿ ಹಲವರಿದ್ದರು.
ಬಸವ ಕೇಂದ್ರದಲ್ಲಿ ಭೀಮಣ್ಣ ಖಂಡ್ರೆಗೆ ಸಂತಾಪ ಸಮುದಾಯದ ಜೊತೆ ರೈತ ಪರ ಕಾಳಜಿ ಸ್ಮರಣೆ

