ಸುದ್ದಿಮೂಲವಾರ್ತೆ
ಕೊಪ್ಪಳ ಮೇ 25: ಮೆದುಳು ನಿಷ್ಕ್ರಿಯ ಗೊಂಡಿದ್ದ ಮಗನ ಅಂಗಾಂಗವನ್ನು ದಾನ ಮಾಡಿದ ಹ್ಯಾಟಿ ಗ್ರಾಮದ ದಂಪತಿಗಳ ಮನೆಗೆ ಬಿಜೆಪಿ ಪರಾಜಿತ ಅಭ್ಯರ್ಥಿ ಮಂಜುಳಾ ಕರಡಿ ಭೇಟಿ ಸಾಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೂರು ದಿನಗಳ ಹಿಂದೆ ಕೊಪ್ಪಳದ ತಾಲೂಕಿನ ಹ್ಯಾಟಿ ಗ್ರಾಮದ ಯುವಕ ಮಹೇಶ್ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಮೆದುಳು ನಿಶ್ಚಿಯಗೊಂಡಿದ್ದರು. ಯುವಕನ ತಂದೆ ಕನಕಪ್ಪ ತಾಯಿ ಸುಮಿತ್ರ ಅವರು ಕೊಪ್ಪಳದ ಅಭಿನವ ಶ್ರೀಗಳ ನುಡಿಯಿಂದ ಪ್ರೇರಣೆಗೊಂಡು ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದು ಮಗನ ಅಂಗಾಂಗವನ್ನು ದಾನ ಮಾಡಿ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ಮಾರ್ಗದಂತೆ ನುಡಿದ ದಂಪತಿ ಕಾರ್ಯ ಎಲ್ಲರಿಗೂ ಅನುಕರಣೀಯವಾಗಿದೆ. ಅಂಗಾಂಗ ದಾನದಿಂದ ಐದಾರು ಮಂದಿಯ ಜೀವ ಉಳಿಸಬಹುದು. ಇನ್ನು ಜನರು ಕೂಡ ರಕ್ತದಾನ ಮಾಡಲು ಮುಂದಾಗಬೇಕು. ಈ ಮೂಲಕವೂ ಜನರ ಜೀವ ಉಳಿಸಬಹುದು. ಆರು ತಿಂಗಳಿಗೊಮ್ಮೆ ರಕ್ತ ನೀಡಬಹುದು ಎಂದರು.
ಯಾರಾದರೂ ಅಪಘಾತ ಕ್ಕೀಡಾಗಿ ಮೆದುಳು ನಿಷ್ಕ್ರಿಯ ಗೊಂಡರೆ, ಗವಿಶ್ರೀ ನುಡಿಯಂತೆ ಅಂಗಾಂಗ ದಾನ ಮಾಡಲು ಮುಂದಾಗಬೇಕು. ಇದರಿಂದ ವ್ಯಕ್ತಿ ಮೃತಪಟ್ಟರು ಅಂಗಾಂಗ ಜೀವದಿಂದ ಇರಲಿವೆ. ಹಲವರ ಜೀವನಕ್ಕೆ ಬೆಳಕಾದಂತೆ ಆಗುತ್ತದೆ ಎಂದು ಗವಿಶ್ರೀ ಅವರನ್ನು ಸ್ಮರಿಸಿದರು.