ಸುದ್ದಿಮೂಲ ವಾರ್ತೆ
ಹೊಸಕೋಟೆ,6: ನಂದಗುಡಿಯ ಹೋಬಳಿಯ ಕಾಂಗ್ರೆಸ್, ಮಾಜಿ ತಾಲೂಕ ಪಂಚಾಯಿತಿ ಅಧ್ಯಕ್ಷ ಮತ್ತು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಬಿ.ವಿ. ರಾಜಶೇಖರ ಗೌಡರ ಹುಟ್ಟುಹಬ್ಬ ಆಚರಿಸಲಾಯಿತು.
ತಾವರೆಕೆರೆ ಗ್ರಾಮದ ವೀರಶೈವ ಮುಖಂಡರು ಹಾಗೂ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಟಿ.ಎಸ್. ಆರ್. ರಾಜಶೇಖರ್ ಅವರು ಹುಟ್ಟು ಹಬ್ಬದ ಅಂಗವಾಗಿ ಸನ್ಮಾನಿಸಿದರು.
ಬಳಿಕ ಮಾತನಾಡಿದ ಅವರು, ಮನುಷ್ಯನಿಗೆ ಅಧಿಕಾರ ಹಣ ಯಾವುದು ಶಾಶ್ವತವಲ್ಲ. ಅಧಿಕಾರ ಸಿಕ್ಕ ಸಮಯದಲ್ಲಿ ಸಾರ್ವಜನಿಕವಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ಜನರಲ್ಲಿ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಕೆಲಸವನ್ನು ಸುಮಾರು ವರ್ಷಗಳಿಂದ ನಂದಗುಡಿ ಹೋಬಳಿಯಲ್ಲಿ ಮುಖಂಡರಾದ ಬಿ.ವಿ ರಾಜಶೇಖರ್ ಗೌಡರು ನಿಭಾಯಿಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳು ವಿಜಯಕುಮಾರ್, ಉಪ ತಹಸಿಲ್ದಾರ್ ಚೈತ್ರ ನೆಲವಾಗಲು, ಎಸ್ ಎಫ್ ಸಿ ಎಸ್ ನಿರ್ದೇಶಕ ನಾರಾಯಣಗೌಡ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ರಾಜಶೇಖರ ಗೌಡರಿಗೆ ಅಭಿನಂದನೆಯನ್ನುಎಲ್ಸಲ್ಲಿಸಿದರು.