ಸುದ್ದಿಮೂಲ ವಾರ್ತೆ ಮಾನ್ವಿ, ಜ.20:
ಅಟಲ್ಜೀ ಜನಸ್ನೇಹಿ ಕೇಂದ್ರ ಯೋಜನೆ ಅಡಿಯಲ್ಲಿ ರಾಜ್ಯದ ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳ ಸೇವೆಯನ್ನು ನೀಡಲು ರಾಯಚೂರು ಜಿಲ್ಲೆಯ ಮಾನ್ವಿಿ ನಗರದ ನಾಡ ಕಚೇರಿಯಲ್ಲಿ ಡಿಸೆಂಬರ್-2025 ರ ತಿಂಗಳಲ್ಲಿ ಸ್ವೀಕರಿಸಲಾಗಿರುವ 1615 (1000 ಕ್ಕಿಿಂತ ಹೆಚ್ಚು) ಅರ್ಜಿಗಳನ್ನು ನಿಗದಿತ ಅವಧಿಗಿಂತ ಮೊದಲೇ ಶೇ. 100 ರಷ್ಟು ವಿಲೇವಾರಿ ಮಾಡಿದ ನಿಮಿತ್ಯ ಮಾನ್ವಿಿ ನಾಡ ಕಚೇರಿಯು ರಾಜ್ಯ ಮಟ್ಟದಲ್ಲಿ ದ್ವಿಿತೀಯ ಸ್ಥಾಾನ ಪಡೆದಿದೆ.
ಈ ಕುರಿತು ಮಾನ್ವಿಿ ನಾಡ ಕಚೇರಿಯ ಉಪ ತಹಸೀಲ್ದಾಾರ್ ವಿರುಪಣ್ಣ ಇವರಿಗೆ ಕಂದಾಯ ಇಲಾಖೆಯ ಆಯುಕ್ತರಾದ ಸಿ.ಎನ್.ಮೀನಾ ನಾಗರಾಜ ಇವರು ಅಭಿನಂದನಾ ಪತ್ರ ಕಳಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಸ್ವೀಕೃತವಾಗಿರುವ 1615 ಅರ್ಜಿಗಳನ್ನು ನಿಗದಿತ ಅವಧಿಗಿಂತ ಮೊದಲೇ ಶೇ.100 ರಷ್ಟು ವಿಲೇವಾರಿ ಮಾಡಿ 10 ಸಿಗ್ಮಾಾ ಮೌಲ್ಯವನ್ನು ಪಡೆದಿರುತ್ತೀರಿ. 12.50 ವಿಲೇವಾರಿ ಸೂಚ್ಯಾಾಂಕದ ಪ್ರಕಾರ ತಮ್ಮ ನಾಡ ಕಚೇರಿಯಲ್ಲಿ 13.50 ಪಟ್ಟು ನಿಗದಿತ ಅವಧಿಗಿಂತ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿ ಡಿಸೆಂಬರ್-2025 ರ ಮಾಹೆಯಲ್ಲಿ ನಿಮ್ಮ ನಾಡ ಕಚೇರಿಯು ರಾಜ್ಯ ಮಟ್ಟದಲ್ಲಿ ದ್ವಿಿತೀಯ ಸ್ಥಾಾನ ಪಡೆದಿರುವುದು ಶ್ಲಾಾಘನೀಯ.
ಮಾನ್ವಿಿ ನಾಡ ಕಚೇರಿಯ ಈ ಕಾರ್ಯ ಸಾಧನೆಗೆ ನಿಮ್ಮ ಹಾಗೂ ಮಾನ್ವಿಿ ನಾಡ ಕಚೇರಿ, ಅಟಲ್ ಜೀ ಜನಸ್ನೇಹಿ ಕೇಂದ್ರದ ಸಿಬ್ಬಂದಿಗಳ ಸಹಕಾರ ಮತ್ತು ಕಾರ್ಯತತ್ಪರತೆ ಕಾರಣವಾಗಿರುತ್ತದೆ. ಆದ್ದರಿಂದ, ಅಟಲ್ಜೀ ಜನಸ್ನೇಹಿ ನಿರ್ದೇಶನಾಲಯದ ಪರವಾಗಿ ನಿಮಗೆ ಹಾಗೂ ಮಾನ್ವಿಿ ನಾಡ ಕಚೇರಿಯ ತಂಡಕ್ಕೆೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಸಹ ನಿಮ್ಮ ನಾಡ ಕಚೇರಿಯಿಂದ ಇದೇ ರೀತಿ ಸಹಕಾರ ಹಾಗೂ ಕಾರ್ಯಕ್ಷಮತೆಯನ್ನು ನಿರೀಕ್ಷಿಸುವುದಾಗಿ ಉಪ ತಹಸೀಲ್ದಾಾರ್ ವಿರುಪಣ್ಣ ಅವರಿಗೆ ಜ.19 ರಂದು ಇಮೇಲ್ ಮೂಲಕ ಕಳಿಸಿದ ಅಭಿನಂದನಾ ಪತ್ರದಲ್ಲಿ ಕಂದಾಯ ಆಯುಕ್ತರು ತಿಳಿಸಿ ಅಭಿನಂದಿಸಿದ್ದಾರೆ.
ಸನ್ಮಾಾನ: ಅರ್ಜಿ ವಿಲೇವಾರಿಗಳಲ್ಲಿ ಮಾನ್ವಿಿ ನಾಡ ಕಚೇರಿಯು ರಾಜ್ಯ ಮಟ್ಟದಲ್ಲಿ ದ್ವಿಿತೀಯ ಸ್ಥಾಾನ ಪಡೆದ ನಿಮಿತ್ಯ ನಾಡ ಕಚೇರಿಯ ಉಪ ತಹಸೀಲ್ದಾಾರ್ ವಿರುಪಣ್ಣ ಇವರನ್ನು ಸಾಮಾಜಿಕ ಕಾರ್ಯಕರ್ತರಾದ ಸುರೇಶ ಕಾತರಕಿ, ಸೂಗಪ್ಪಗೌಡ ಹರವಿ ಹಾಗೂ ಸಿಬ್ಬಂದಿಗಳು, ಸಾರ್ವಜನಿಕರು ಸನ್ಮಾಾನಿಸಿ ಅಭಿನಂದಿಸಿದರು.
ಸಾರ್ವಜನಿಕ ಅರ್ಜಿಗಳ ವಿಲೇವಾರಿಯಲ್ಲಿ ಮಾನ್ವಿ ನಾಡ ಕಚೇರಿಗೆ ದ್ವಿತೀಯ ಸ್ಥಾನ ಉಪ ತಹಸೀಲ್ದಾರ್ ವಿರುಪಣ್ಣಗೆ ಕಂದಾಯ ಆಯುಕ್ತರಿಂದ ಅಭಿನಂದನಾ ಪತ್ರ

