ಸುದ್ದಿಮೂಲ ವಾರ್ತೆ ಬೀದರ್, ಡಿ.21
2013 ಹಾಗೂ 2023ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆೆಸ್ ಪಕ್ಷವು ದಲಿತರ ಮತ ಕಬಳಿಸಲು ಒಳ ಮೀಸಲಾತಿ ಜಾರಿ ಮಾಡುವುದಾಗಿ ಹೇಳಿ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಅದನ್ನು ಸೇರಿಸಿರುವ ಕಾಂಗ್ರೆೆಸ್ ಪಕ್ಷ ಅದನ್ನು ಇಲ್ಲಿಯ ವರೆಗೂ ಒಂದಾದರ ಮೇಲೊಂದು ಗೊಂದಲ ಸೃಷ್ಟಿಿಸಿಟ್ಟು ಜಾತಿ ಜಾತಿಗಳ ನಡುವ ಸಂಘರ್ಷ ಏರ್ಪಡಲು ವೇದಿಕೆ ಸಿದ್ದಪಡಿಸಿ ದಲಿತರಿಗೆ ಮಹಾ ಮೋಸ ಮಾಡಿದೆ ಎಂದು ಮಾಜಿ ಉಪ ಮುಖ್ಯಮಂತ್ರಿಿ ಹಾಗೂ ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
ರವಿವಾರ ನಗರದ ಜಿಲ್ಲಾ ಪತ್ರಿಿಕಾ ಭವನದಲ್ಲಿ ಪತ್ರಿಿಕಾಗೋಷ್ಟಿಿ ಉದ್ದೇಶಿಸಿ ಮಾತನಾಡಿ, 1950ರಲ್ಲಿ ಪರಿಶಿಷ್ಟ ಜಾತಿ ಪಟ್ಟಿಿಯಲ್ಲಿ 6, ಪರಿಶಿಷ್ಟ ಪಂಗಡ ಯಾದಿಯಲ್ಲಿ 3 ಜಾತಿಗಳನ್ನು ಮಾತ್ರ ಸೇರಿಸಲಾಗಿತ್ತು. ಆದರೆ ಈಗ ಎಸ್.ಸಿ ಜಾತಿಯಲ್ಲಿ 101 ಹಾಗೂ ಎಸ್.ಟಿ ಜಾತಿಯಲ್ಲಿ 56 ಜಾತಿಗಳನ್ನು ಸೇರಿಸಲಾಗಿದೆ. ಸರ್ವೋಚ್ಛ ನ್ಯಾಾಯಾಲಯದ ಆದೇಶದಂತೆ ಹರಿಯಾಣ, ತೆಲಂಗಾಣಾ, ಪಂಜಾಬ, ತಮಿಳುನಾಡು ಹಾಗೂ ಆಂದ್ರ ಪ್ರದೇಶ ಸರ್ಕಾರಗಳು ಒಳ ಮೀಸಲಾತಿ ಜಾರಿ ಮಾಡಿವೆ. ಆದರೆ ಇಲ್ಲಿಯ ರಾಜ್ಯ ಸರ್ಕಾರ ಮೀನಾಮೇಷ ಏಣಿಸುತ್ತ 25 ಆಗಸ್ಟ್ಗೆ ಕ್ಯಾಾಬಿನೆಟ್ನಲ್ಲಿ ಜಾರಿ ಮಾಡಿದರೂ ಒಂದಲ್ಲೊಂದು ಗೊಂದಲ ಸೃಷ್ಟಿಿ ಮಾಡಿಟ್ಟಿಿದ್ದಾರೆ. ಎ.ಕೆ, ಎ.ಡಿ ಅವರ ಮೀಸಲಾತಿ ಪ್ರಮಾಣ 1 ಪ್ರತಿಶತ ಇದ್ದದು ತೆಗೆದು ಹಾಕಿ ಅವರಿಗೆ ಅನ್ಯಾಾಯ ಎಸಗಲಾಗಿದೆ. 59 ಪಂಗಡಗಳು ತಮಗೆ ಮೋಸ ಆಗಿದೆ ಎಂದು ಕೋರ್ಟ್ ಮೆಟ್ಟಿಿಲೇರಿರುವರು. ಹೀಗೆ ದಿನಕ್ಕೊೊಬ್ಬರು ಕೋರ್ಟ್ ಹೋಗಲಿ, ಪರಸ್ಪರ ಜಗಳಾಡಲಿ ಇದರಿಂದ ತಮಗೆ ಲಾಭ ಎಂದುಕೊಂಡು ಕಾಂಗ್ರೆೆಸ್ ಸರ್ಕಾರ ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಸಮಾಜ ಕಲ್ಯಾಾಣ ಸಚಿವ ಮಹಾದೇವಪ್ಪ ಅಣತಿಯಂತೆ ಸಿದ್ಧರಾಮಯ್ಯ ನಡೆದುಕೊಳ್ಳುತ್ತಿಿದ್ದಾರೆ. ಈ ತಿಂಗಳ 18ರಂದು ಬೆಳಗಾವಿ ಅಧಿವೇಶನದಲ್ಲಿ ಇದಕ್ಕೆೆ ಸಂಬಂಧಪಟ್ಟಂತೆ ಪ್ರತ್ಯೇಕ್ ಬಿಲ್ ಮಂಡಿಸಿ ಚರ್ಚೆ ಮಾಡದೇ ಪಾಸ್ ಮಾಡಿರುವುದು ಅತ್ಯಂತ ದುರಂತದ ಸಂಗತಿ ಎಂದು ದೂರಿದರು.
ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಾಮಿ ಈ ಸಂದರ್ಭದಲ್ಲಿ ಮಾತನಾಡಿ, ಈ ಸರ್ಕಾರಕ್ಕೆೆ ದಲಿತರ ಬಗ್ಗೆೆ ಎಳ್ಳಷ್ಟು ಕಾಳಜಿ ಇಲ್ಲ. ದಲಿತರ ಮತ ಬೇಕು. ಆದರೆ ಅವರ ಏಳಿಗೆ ಬೇಕಿಲ್ಲ. ದಲಿತ ಸಿಎಂ ಮಾಡುವ ಪ್ರಸಂಗ ಬಂದಾಗ ಪರಸ್ಪರ ಕಚ್ಚಾಾಟ ಮಾಡಿ ಜನರಿಗೆ ಮಳ್ಳು ಮಾಡುವ ಗೋಜಿಗೆ ಹೋಗುವ ಈ ಸರ್ಕಾರಕ್ಕೆೆ ಮುಂಬರುವ 2028ರ ಸಾರ್ವತ್ರಿಿಕ ವಿಧಾನ ಸಭೆ ಚುನಾವಣೆಯಲ್ಲಿ ಜನ ತಕ್ಕ ಪಠ ಕಲಿಸಬೇಕಿದೆ ಎಂದರು.
ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ರ್ನಾಂಡಿಸ್ ಹಿಪ್ಪಳಗಾಂವ, ಜಿಲ್ಲಾಧ್ಯಕ್ಷ ವಿಜಯಕುಮಾರ ಹಿಪ್ಪಳಗಾಂವ, ಜಿಲ್ಲಾ ಉಪಾಧ್ಯಕ್ಷ ಕಮಲಾಕರ ಹೆಗಡೆ, ಸಮಿತಿ ಇತರೆ ಪದಾಧಿಕಾರಿಗಳಾದ ಶಿವಣ್ಣ ಹಿಪ್ಪಳಗಾಂವ, ಹರೀಶ ಗಾಯಕವಾಡ, ದೇವದಾಸ ಹಿಪ್ಪಳಗಾಂವ, ಸನ್ನಿಿ ವಕೀಲಸಾಬ್ ಸೇರಿದಂತೆ ಇತರರು ಪತ್ರಿಿಕಾಗೋಷ್ಟಿಿಯಲ್ಲಿದ್ದರು.
ಒಳ ಮೀಸಲಾತಿ ಹೆಸರಲ್ಲಿ ಕಾಂಗ್ರೆಸ್ ಗೊಂದಲ : ಗೋವಿಂದ ಕಾರಜೋಳ

