ಸುದ್ದಿಮೂಲ ವಾರ್ತೆ ಮೈಸೂರು, ನ.23:
ಅಧಿಕಾರಕ್ಕಾಾಗಿ ನಡೆಯುತ್ತಿಿರುವ ಬೆಳವಣಿಗೆಗಳನ್ನು ಗಮನಿಸಿದರೆ ಕಾಂಗ್ರೆೆಸ್ ಮನೆಗೆ ಎಷ್ಟು ಬಾಗಿಲುಗಳಿವೆ ಎಂಬುದೇ ಗೊತ್ತಾಾಗುವುದಿಲ್ಲ. ಒಬ್ಬೊೊಬ್ಬರದು ಒಂದೊಂದು ದಿಕ್ಕು ಎಂದು ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ನಾಯಕರದು ಒಂದೊಂದು ಬಾಗಿಲು ಇದೆ. ಕಾಂಗ್ರೆೆಸ್ ಛಿದ್ರವಾಗಿ ಹೋಗಿದೆ. ಸಿಎಂ ಸಿದ್ದರಾಮಯ್ಯ ಅವರು ದಿಕ್ಕುದೆಸೆ ಇಲ್ಲದೆ ಸರ್ಕಾರ ನಡೆಸುತ್ತಿಿದ್ದಾರೆ. ಭ್ರಷ್ಟರೂ ಆಗಿಹೋಗಿದ್ದಾರೆ. ಅಧಿಕಾರದ ಹುಚ್ಚು ಹಾಗೂ ದರ್ಪ ಹೆಚ್ಚಾಾಗಿದೆ ಎಂದು ಆರೋಪಿಸಿದರು.
ರಾಜ್ಯದ ಮತದಾರರು ಕಾಂಗ್ರೆೆಸ್ಗೆ ಉತ್ತಮ ಆಡಳಿತ ನಡೆಸಲಿ ಎಂದು ಬಹುಮತ ಕೊಟ್ಟಿಿದ್ದಾರೆ. ಆದರೆ ಇದನ್ನು ಅವರು ಧಿಕ್ಕರಿಸಿ ಅಧಿಕಾರಕ್ಕಾಾಗಿ ಚೆಲ್ಲಾಟ ಆಡುತ್ತಿಿದ್ದಾರೆ. ರಾಜ್ಯದ ಅಭಿವೃದ್ಧಿಿ ಕಾರ್ಯಗಳೇ ನಡೆಯುತ್ತಿಿಲ್ಲ. ಕ್ರಾಾಂತಿ ಹಾಗೂ ಭ್ರಾಾಂತಿಯಲ್ಲೇ ಕಾಂಗ್ರೆೆಸ್ ನಾಯಕರು ಮುಳುಗಿದ್ದಾರೆ. ಇಂತಹ ಲಂಗ ಸರ್ಕಾರದ ಬಗ್ಗೆೆ ಮಾತನಾಡಲು ಬೇಸರ ಆಗುತ್ತದೆ ಎಂದು ಹೇಳಿದರು.
ನಾನು ನೋಡಿದ ಸಿದ್ದರಾಮಯ್ಯ ಈ ರೀತಿ ಇರಲಿಲ್ಲ. ಅವರೀಗ ಬಹಳ ಬದಲಾಗಿದ್ದಾರೆ. ಕಾಂಗ್ರೆೆಸ್ನಲ್ಲಿ ಕುದುರೆ ವ್ಯಾಾಪಾರ ಜೋರಾಗಿ ನಡೆಯುತ್ತಿಿದೆ. ಇಂದಿರಾಗಾಂಧಿ ಕಾಲದಿಂದಲೂ ಅದೇ ವ್ಯವಸ್ಥೆೆ ಇದೆ. ಕಳೆದೊಂದು ವರ್ಷದಿಂದ ಕುದುರೆ ವ್ಯಾಾಪಾರ ಜೋರು ಮಾಡಿಕೊಂಡಿದ್ದಾರೆ, ನಾನೆಷ್ಟು ಖರೀದಿಸಿದೆ ಎಂದು ಸಿದ್ದರಾಮಯ್ಯ ಅವರು ಲೆಕ್ಕ ಹಾಕುತ್ತಿಿದ್ದಾರೆ. ತಮ್ಮ ಬಳಿ ಎಷ್ಟು ಕುದುರೆಗಳು ಇವೆ ಎಂದು ಮತ್ತೊೊಂದ ಬಣ ಲೆಕ್ಕ ಹಾಕುತ್ತಿಿದೆ ಎಂದು ಟೀಕಿಸಿದರು.
ಕಾಂಗ್ರೆೆಸ್ನ ಈಗಿನ ಲಾಭವನ್ನು ಬಿಜೆಪಿ ಪಡೆಯುವುದಿಲ್ಲ. ನಮಗೆ ಅದರ ಆಸೆಯೂ ಇಲ್ಲ. ಜನರೇ ಅವರಿಗೆ ಬುದ್ಧಿಿ ಕಲಿಸಿ ನಮಗೆ ಅಧಿಕಾರ ನೀಡುತ್ತಾಾರೆ ಎಂದರು.

