ಸುದ್ದಿಮೂಲ ವಾರ್ತೆ ಬೆಂಗಳೂರು, ಅ.04:
ರಾಜ್ಯದಲ್ಲಿ ಕಾಂಗ್ರೆೆಸ್ ಸರ್ಕಾರ ಜಾರಿಗೊಳಿಸಿರುವ ಐದು ಪಂಚಗ್ಯಾಾರಂಟಿ ಯೋಜನೆಗಳನ್ನು ವಿರೋಧಿಸಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನೇ ಬಿಜೆಪಿ ಕಣಕ್ಕಿಿಳಿಸಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಗ್ಯಾಾರಂಟಿ ಯೋಜನೆಗಳು ಕೇವಲ ಜನಪರ ಯೋಜನೆಗಳಲ್ಲ. ಬದಲಿಗೆ ಇವು ‘ಸಾಮಾಜಿಕ ನ್ಯಾಾಯ’ವನ್ನು ಎತ್ತಿಿ ಹಿಡಿದು ಕೋಟ್ಯಂತರ ಜನರ ಜೀವನದಲ್ಲಿ ಬದಲಾವಣೆಯನ್ನು ತಂದಿವೆ. ಗ್ಯಾಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿಿತಿ ಹದಗೆಟ್ಟಿಿದೆ ಎಂದು ಎಚ್.ಡಿ. ದೇವೇಗೌಡರ ಹೇಳಿಕೆ ನೀಡುತ್ತಾಾರೆ. ಬಿಜೆಪಿ-ಜೆಡಿಎಸ್ ಮೈತ್ರಿಿಯ ದ್ವೇಷಕ್ಕೆೆ ಮಿತಿಯೇ ಇಲ್ಲ. ಜನರ ಬದುಕಿಗೆ ಬೆಳಕಾಗಿರುವ ಈ ಯೋಜನೆಗಳನ್ನು ವಿರೋಧಿಸಲು ದೇವೇಗೌಡರನ್ನೇ ಬಿಜೆಪಿ ಮುಂದೆ ಬಿಟ್ಟಿಿದೆ. ಇಂತಹ ‘ಕುರುಡು ದೃಷ್ಟಿಿಯುಳ್ಳ ಪಕ್ಷಗಳು’ ನಾಚಿಕೆಪಡಬೇಕು ಎಂದು ಖಂಡಿಸಿದ್ದಾರೆ.
ಮಹಿಳೆಯರು ಈಗಾಗಲೇ 526 ಕೋಟಿಗೂ ಹೆಚ್ಚು ಬಾರಿ ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. ಇದಕ್ಕಾಾಗಿ ಸರ್ಕಾರ ಅ.1ರವರೆಗೆ 14,274.32 ಕೋಟಿ ರೂ. ವ್ಯಯಿಸಿದೆ. ಬಹುಮುಖ್ಯವಾಗಿ ಶಕ್ತಿಿ ಯೋಜನೆ ಪ್ರತಿಷ್ಠಿಿತ ಗೋಲ್ಡನ್ ಬುಕ್ ಆ್ ರೆಕಾಡ್ಸರ್ ನಲ್ಲಿ ದಾಖಲಾಗಿರುವುದು ಮಹಿಳೆಯರ ಓಡಾಟ, ಸ್ವಾಾತಂತ್ರ್ಯ ಮತ್ತು ದುಡಿಯುವ ಸಾಮರ್ಥ್ಯವನ್ನು ಹೆಚ್ಚಿಿಸಿ ‘ಹೊಸ ವಿಶ್ವ ದಾಖಲೆ’ ಸೃಷ್ಟಿಿಸಿದೆ.
ರಾಜ್ಯದ 1.23 ಕೋಟಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2,000 ವರ್ಗಾವಣೆಯಾಗುತ್ತಿಿದ್ದು, ಶೇ. 94ರಷ್ಟು ಕುಟುಂಬಗಳ ಆರ್ಥಿಕ ಮಟ್ಟ ಸುಧಾರಿಸಿದೆ. ಗೃಹಲಕ್ಷ್ಮಿಿ ಯೋಜನೆಗೆ ರಾಜ್ಯ ಸರ್ಕಾರ ಇದುವರೆಗೆ 50,005 ಕೋಟಿ ರೂ. ಹಣ ವ್ಯಯಿಸಿದೆ.
1.64 ಕೋಟಿ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಿದ್ದರಿಂದ ಶೇ. 90ರಷ್ಟು ಕುಟುಂಬಗಳು ಹಣ ಉಳಿಸಿ, ಅದನ್ನು ’ಮನೆಯ ಇತರ ಅಗತ್ಯಗಳಿಗೆ’ ಬಳಸುತ್ತಿಿವೆ. ಈ ಯೋಜನೆಗಾಗಿ 18,139 ಕೋಟಿ ರೂ. ಹಣವನ್ನು ಕಾಂಗ್ರೆೆಸ್ ಸರ್ಕಾರ ವ್ಯಯಿಸಿದೆ.
ಗೃಹ ಲಕ್ಷ್ಮಿಿ, ಗೃಹ ಜ್ಯೋೋತಿ ಮತ್ತು ಅನ್ನ ಭಾಗ್ಯ (4.49 ಕೋಟಿ ಕನ್ನಡಿಗರಿಗೆ 10 ಕೆಜಿ ಅಕ್ಕಿಿ) ಯೋಜನೆಗಳು ಕುಟುಂಬದ ಉಳಿತಾಯವನ್ನು ಹೆಚ್ಚಿಿಸಿ ಆರ್ಥಿಕ ಸಮೃದ್ಧಿಿಗೆ ಬಲ ನೀಡಿವೆ.15000 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ನಿರುದ್ಯೋೋಗಿ ಯುವಕರಿಗೆ ಮಾಸಿಕ 1,500-3,000 ರೂ. ಭತ್ಯೆೆ ನೀಡಿ ಸಬಲೀಕರಣ ಮಾಡಿದೆ. 2.55 ಲಕ್ಷ ಲಾನುಭವಿಗಳಿಗೆ 623 ಕೋಟಿ ರೂ. ಹಣವನ್ನು ಸರ್ಕಾರ ನೀಡಿದೆ.
ಪಂಚಗ್ಯಾಾರಂಟಿ ಯೋಜನೆಗಳಿಗಾಗಿಯೇ ರಾಜ್ಯ ಸರ್ಕಾರ 97 ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು ವ್ಯಯಿಸುತ್ತಿಿರುವಾಗ ಆರ್ಥಿಕ ಪರಿಸ್ಥಿಿತಿ ಹೇಗೆ ಹದಗೆಟ್ಟಿಿದೆ?
ಕಾಂಗ್ರೆೆಸ್ನ ಸಾಮಾಜಿಕ ನ್ಯಾಾಯದ ಉದ್ದೇಶವನ್ನು ಹತ್ತಿಿಕ್ಕುವ ಮೂಲಕ ಗ್ಯಾಾರಂಟಿಗಳನ್ನು ಸ್ಥಗಿತಗೊಳಿಸಲು ಬಿಜೆಪಿ-ಜೆಡಿಎಸ್ ಬಯಸುತ್ತಿಿವೆ ಎಂಬುದು ಪ್ರತಿ ಕನ್ನಡಿಗನಿಗೂ ತಿಳಿದಿದೆ. ಆದರೆ ನಮ್ಮ ಸರ್ಕಾರ ಕರ್ನಾಟಕದ ಪ್ರತಿಯೊಬ್ಬ ನಾಗರಿಕರ ಪರವಾಗಿದ್ದು, ಇಂತಹ ದುಷ್ಟ ಯತ್ನವನ್ನು ತಡೆಯುತ್ತೇವೆ ಎಂದು ಸುರ್ಜೇವಾಲಾ ಹೇಳಿದ್ದಾರೆ.