ಸುದ್ದಿಮೂಲವಾರ್ತೆ
ಕಾರಟಗಿ,ಏ.೨- ಇದೆ ಮೆ.೧೦ರಂದು ಜರುಗಲಿರುವ ರಾಜ್ಯದ ವಿಧಾನ ಸಭಾ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಐದೂ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವುದು ನಿಶ್ಚಿತ ಎಂದು ಮಾಜಿ ಸಚಿವ ಕೊಪ್ಪಳ ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು.
ಸಮೀಪದ ದೇವಿಕ್ಯಾಂಪ್ನ ರತ್ನಗಿರಿ ಪರ್ವತದ (ದೇವಿಕ್ಯಾಂಪ್)ನ ಬೀರೇಶ್ವರಿ ದೇವಸ್ಥಾನದ ಆವರಣದಲ್ಲಿ ಹನುಮಮಾಲಾ ಧರಿಸಿದ ನಂತರ ಸುದ್ದಿಗಾರರ ಜೋತೆ ಮಾತನಾಡಿದರು.
ಜಿಲ್ಲೆಯಾದ್ಯಂತ ಕಾಂಗ್ರೆಸ್ ಗಾಳಿ ಬೀಸಿದ್ದು ಮತದಾರರು ಕೂಡ ಸ್ವಯಂ ಪ್ರೇರಣೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆ ಭಾರಿಯ ಚುನಾವಣೆಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗುವುದು ಖಚಿತವಾಗಿದೆ ಎಂದರು.
ಅಲ್ಲದೆ ಬಿಜೆಪಿಯ ದುರಾಡಳಿತಕ್ಕೆ ಬೇಸತ್ತು ಬರೀ ಜಿಲ್ಲೆಯಲ್ಲಷ್ಟೇ ಅಲ್ಲ, ಇಡೀ ರಾಜ್ಯಾದ್ಯಂತ ಕಾಂಗ್ರೆಸ್ಗೆ ಮತದಾರರು ಸಂಪೂರ್ಣ ಬೆಂಬಲ ನೀಡುತ್ತಿದ್ದು, ರಾಜ್ಯದ್ಯಾಂತ ಈ ಭಾರಿ ೧೩೦ರಿಂದ ೧೩೫ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳನ್ನು ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ತಿಳಿದು ಬಂದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮ್ಮ ಭಾಗದ ಹಿರಿಯ ನಾಯಕ ಖರ್ಗೆ ಅವರೇ ರಾಷ್ಟಿçÃಯ ಅಧ್ಯಕ್ಷ ಆಗಿರುವುದರಿಂದ ಕಳೆದ ಬಾರಿಗಿಂತ ಈ ಭಾರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ ಎಂದರು.
ಕಳೆದ ಒಂದೂವರೆ ತಿಂಗಳಿನಿOದ ಕ್ಷೇತ್ರದ ಪ್ರತಿ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ತಿರುಗಾಟ ನಡೆಸಿದ್ದು, ಮನೆ ಮನ ತಲಪೋಣ ಎನ್ನುವ ಕಾರ್ಯಕ್ರಮದ ಮೂಲಕ ಮತದಾರರನ್ನು ಭೇಟಿಯಾದ ಸಂದರ್ಭದಲ್ಲಿ ಪ್ರತಿಯೊಬ್ಬರು ಅತ್ಯಂತ ಪ್ರೀತಿ ಪೂರ್ವಕವಾಗಿ ಆತ್ಮಿಯವಾಗಿ ಸ್ವಾಗತಿಸುವ ಜೋತೆಗೆ ಈ ಭಾರಿ ನಿಮಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಮತದಾರರು ಭರವಸೆ ನೀಡುತ್ತಿದ್ದಾರೆ.
ಇಲ್ಲಿಯವರೆಗೂ ಬಿಜೆಪಿ ಅಭ್ಯರ್ಥಿ ಘೋಷಣೆಯಾಗದ ಕಾರಣ ನನ್ನ ವಿರುದ್ಧ ಯಾರು ಯಾರು ಎದುರಾಳಿಗಳು ಎನ್ನುವುದು ಇನ್ನೂ ನಿಗೂಢವಾಗಿದೆ. ಅದರೆ ಯಾರು ನಿಂತರೂ ಸರಿ ಈ ಬಾರಿ ಮಾತ್ರ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವುದಾಗಿ ಆತ್ಮ ವಿಶ್ವಾಸದ ಮಾತುಗಳನ್ನು ಆಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಶೀವರೆಡ್ಡಿ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ಮುಖಂಡರಾದ ಶಶಿಧರಗೌಡ ಪಾಟೀಲ್, ಕೆ.ಸಿದ್ದನಗೌಡ, ಗದ್ದೆಪ್ಪ ನಾಯಕ್, ತಾಯಪ್ಪ ಕೋಟ್ಯಾಳ, ಸುರೇಶ್ ಗೋನಾಳ, ಶರಣಪ್ಪ ಕಾಯಿಗಡ್ಡಿ, ಸೋಮನಾಥ ದೊಡ್ಡಮನಿ, ಮಲ್ಲಿಕಾರ್ಜುನ ತೊಂಡಿಹಾಳ, ಬಸವರಾಜ ಗುಂಡೂರು, ಉದಯ ಈಡಿಗೇರ್, ಶ್ರೀಕಾಂತ್ ಈಳಿಗೇರ್, ಹೆಚ್. ವೀರೇಂದ್ರ ಪಾಟೀಲ್, ಬಾಪುಗೌಡ ಹುಳ್ಕಿಹಾಳ, ಗಂಗಾಧರಗೌಡ ನವಲಿ, ವಿರುಪಣ್ಣ ಮರಕುಂಬಿ, ಬಸವರಾಜ ಪಗಡದಿನ್ನಿ, ಶರಣಪ್ಪ ಕಡೇಮನಿ ಅನೇಕರಿದ್ದರು.