ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.6: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಸೌಮ್ಯಾರೆಡ್ಡಿ ಚುನಾವಣ ಹಿನ್ನೆಲೆ ಮತದಾರರಿಗೆ ಸೀರೆ ಹಂಚಲು ಮುಂದಾಗಿದ್ದ ಸೌಮ್ಯ ರೆಡ್ಡಿ ಅವರ ಕಾರನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಚುನಾವಣೆ ಹಿನ್ನೆಲೆ ಬೆಂಗಳೂರು ಜಯ ನಗರದಲ್ಲಿ ಮಹಿಳೆಯರಿಗೆ ಸೀರೆ ಹಂಚಲು ಕಾರಿನಲ್ಲಿ ಸೀರೆ, ಬ್ಲೌಸ್ ಪೀಸ್ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾರು ಸೀಜ್ ಮಾಡಲಾಗಿದೆ. ಅವರ ಕಾರನಿಲ್ಲಿ 23 ಸೀರೆಗಳು, ಮೊಬೈಲ್ಗಳು ಮತ್ತಿತರ ಪ್ರಚಾರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಿಲಕ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರನ್ನು ವಶಕ್ಕೆಪಡೆದ ನಂತರ ಕಾರಿಗೆ ಕವರ್ ಹಾಕಿ ನಿಲ್ಲಿಸಲಾಗಿದೆ.