ಸುದ್ದಿಮೂಲ ವಾರ್ತೆ ರಾಯಚೂರು , ಡಿ.01:
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಿ ಸ್ಥಾಾನದಿಂದ ಕಾಂಗ್ರೆೆಸ್ ಹೈಕಮಾಂಡ್ ಇಳಿಸಿದರೆ ರಾಜ್ಯದಲ್ಲಿನ ಕುರುಬ ಸಮಾಜ ಪಕ್ಷಕ್ಕೆೆ ಮುಂಬರುವ ಚುನಾವಣೆಗಳಲ್ಲಿ ಪಾಠ ಕಲಿಸಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾಾಧ್ಯಕ್ಷ ಕೆ.ರಮೇಶ ಮೂಡಲದಿನ್ನಿಿ ಎಚ್ಚರಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, 2023ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಕುರುಬರು ಹಾಗೂ ಅಹಿಂದ ಸಮುದಾಯ ಶೇ.80ರಷ್ಟು ಸಿದ್ದರಾಮಯ್ಯ ಮುಖ್ಯಮಂತ್ರಿಿ ಮಾಡುತ್ತಾಾರೆಂಬ ಉದ್ದೇಶದಿಂದಲೆ ಕಾಂಗ್ರೆೆಸ್ ಬೆಂಬಲಿಸಿ ಮತ ಚಲಾಯಿಸಿದ್ದೇವೆ ಎಂದರು.
ಗೆದ್ದು ಅಧಿಕಾರ ಹಿಡಿದ ಮೇಲೆ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಿ ಎಂದು ಭಾವಿಸಿದ್ದೇವೆ. ಹೈಕಮಾಂಡ್ ಎರಡುವರೇ ವರ್ಷ ಎಂದು ಹೇಳಿಲ್ಲ ಎಂಬುದು ನಮ್ಮ ಗಮನಕ್ಕೆೆ ಇದೆ. ಆದರೆ, ಯಾರದೊ ಒತ್ತಡಕ್ಕೆೆ ಮಣಿದು ಮುಖ್ಯಮಂತ್ರಿಿ ಸ್ಥಾಾನ ಬಿಟ್ಟು ಕೊಡಲು ಒತ್ತಡ ಹಾಕುವುದು ಸಲ್ಲದು. ಉತ್ತಮ ಆಡಳಿತ ನೀಡುತ್ತಿಿದ್ದಾಾರೆ. ಎಲ್ಲ ವರ್ಗದವರಿಗೆ ಪಂಚ ಗ್ಯಾಾರಂಟಿ ಮೂಲಕ ಅನುಕೂಲ ಮಾಡಿಕೊಟ್ಟ ನಾಯಕರಾಗಿದ್ದಾಾರೆ. ಕೆಲ ಶಾಸಕ, ಸಚಿವರ ಒತ್ತಾಾಸೆಗೆ ಪಕ್ಷದ ಹೈಕಮಾಂಡ್ ಅನ್ಯಾಾಯ ಮಾಡಬಾರದು ಸಿದ್ದರಾಮಯ್ಯ ಅವರನ್ನೆೆ ಮುಂದುವರಿಸಬೇಕು. ಒಂದೊಮ್ಮೆೆ ದುಡುಕಿನ ನಿರ್ಧಾರ ಮಾಡಿದರೆ ಮುಂಬರುವ ದಿನಗಳಲ್ಲಿ ಕುರುಬ ಹಾಗೂ ಅಹಿಂದ ವರ್ಗ ಕಾಂಗ್ರೆೆಸ್ ಪಕ್ಷಕ್ಕೆೆ ಮತ ಚಲಾಯಿಸುವುದಿಲ್ಲ ಬೆಂಬಲಿಸುವುದೂ ಇಲ್ಲ ಎಂದು ಎಚ್ಚರಿಸಿದರು. ನಮ್ಮ ಈ ಎಚ್ಚರಿಕೆ ಬ್ಲಾಾಕ್ ಮೇಲ್ ಅಲ್ಲ ಸ್ಪಷ್ಟವಾದ ನಿಲುವು ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಿಯಲ್ಲಿ ಕಾರ್ಯಾಧ್ಯಕ್ಷ ತಿಮ್ಮಪ್ಪ ಮರ್ಚೆಟ್ಹಾಾಳ, ವಿರೂಪಾಕ್ಷಿಿಗೌಡ ಪಾಟೀಲ,ಕೆ.ನರಸಣ್ಣ ಶಾಸಿಘಿ, ಶಾಮಮೂರ್ತಿ, ಗೂಳಪ್ಪ ವಿಷ್ಣುಘಿ, ಮಹೇಶ ಇದ್ದರು.
ಸಿದ್ದರಾಮಯ್ಯ ಕೆಳಗಿಳಿಸಿದರೆ ಕಾಂಗ್ರೆಸ್ ನಿರಾಕರಿಸುತ್ತೇವೆ- ರಮೇಶ

