ಸುದ್ದಿಮೂಲ ವಾರ್ತೆ
ಮೈಸೂರು, ಮೇ 14: ಪ್ರಧಾನಿ ಮೋದಿ ಅವರು ರೋಡ್ ಶೋ ನಡೆಸಿದ ಮಾರ್ಗದ ರಸ್ತೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಗಂಜಲ ಹಾಕಿ ಸ್ವಚ್ಚ ಮಾಡಿದ ಪ್ರಸಂಗ ಭಾನುವಾರ ಇಲ್ಲಿ ನಡೆಯಿತು.
ಕಾರ್ಯಕರ್ತ ಕಂಸಾಳೆ ಮಹಾದೇವ ಮತ್ತಿತರರು ಟ್ಯಾಂಕ್ನಲ್ಲಿ ನೀರು ಬಿಟ್ಟುಕೊಂಡು ಮೋದಿ ಅವರು ರೋಡ್ ಶೋನಲ್ಲಿ ಸಾಗಿದ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆಯನ್ನು ಗಂಜಲದೊಂದಿಗೆ ಸ್ವಚ್ಚ ಮಾಡಿದರು.
ಈ ವೇಳೆ ಮಾತನಾಡಿದ ಕಂಸಾಳೆ ಮಹಾದೇವ ಅವರು, ಇದರ ರಾಜರ ಅರಮನೆಯಿಂದ ಬರುವ ದಸರಾ ಅಂಬಾರಿ ಮೆರವಣಿಗೆ ಸಾಗುವ ರಸ್ತೆ. ಮೋದಿ ಇಲ್ಲಿ ರೋಡ್ ಶೋ ನಡೆಸಿದ್ದರಿಂದ ಮಲೀನ ಮತ್ತು ಕಳಂಕವಾಗಿದೆ. ಆದ್ದರಿಂದ ಸ್ವಚ್ಚ ಮಾಡಲಾಗಿದೆ ಎಂದು ಹೇಳಿದರು.