ಸುದ್ದಿಮೂಲ ವಾರ್ತೆ
ಮಸ್ಕಿ,ಮೇ 20: ಕಾಂಗ್ರೆಸ್ ನೂತನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ ಅವರು ಸೇರಿದಂತೆ 8 ಜನ ಸಚಿವರು ಪ್ರಮಾಣವಚನ ಸ್ವೀಕಾರದ ನಿಮಿತ್ಯವಾಗಿ ಪಟ್ಟಣದ ಕನಕ ವೃತ್ತದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಹೊಡೆದು ಸಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಹಾಲುಮತ ಸಮಾಜದ ಅಧ್ಯಕ್ಷ ಮಲ್ಲನಗೌಡ ಸುಂಕನೂರ ಮಾತನಾಡಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಕುರಿತು ಘೋಷಣೆ ಕೂಗುತ್ತಾ ಎಲ್ಲಾ ಯೋಜನೆಗಳನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ, ಸರ್ವ ಜನಾಂಗದ ಏಳಿಗೆಯನ್ನು ಬಯಸುವ ಯಾವುದಾದರೂ ಸರಕಾರವಿದ್ದರೆ ಅದು ಕಾಂಗ್ರೆಸ್ ಮಾತ್ರ, ಸ್ವಾತಂತ್ರ್ಯದಿಂದ ಇಲ್ಲಿಯವರೆಗೆ ಕಾಂಗ್ರೆಸ್ ಸರ್ಕಾರ ಬಡವರ, ದೀನ ದಲಿತರ, ಮಹಿಳೆಯರ, ರೈತರ, ಹಾಗೂ ಕಾರ್ಮಿಕರ ಕುರಿತು ಹಲವಾರು, ಯೋಜನೆಗಳನ್ನು ಈ ನಾಡಿಗೆ ಕೊಟ್ಟಿದೆ, ಆದ್ದರಿಂದಲೇ ಇಂದಿನ ಬಿಜೆಪಿ 40% ಸರಕಾರವನ್ನು ಕಿತ್ತೊ ಗೆದು, ಈ ಬಾರಿ ಕಾಂಗ್ರೆಸ್ ಅನ್ನು ಅತ್ಯಂತ ಬಹುಮತದಿಂದ ಅಧಿಕಾರದ ಚುಕ್ಕಾಣೆ ಹಿಡಿಯುವಂತೆ ಮಾಡಿದ ಮತದಾರರಿಗೆ ಹಾರ್ದಿಕ ಅಭಿನಂದನೆಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಅಧ್ಯಕ್ಷ ಮಲ್ಲನಗೌಡ ಸುಂಕನೂರು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಡಿ.ಚಿಗರಿ, ತಾ.ಪಂ.ಮಾಜಿ ಸದಸ್ಯ ಕರಿಯಪ್ಪ ಹಾಲಾಪೂರ, ಶಿವಣ್ಣ ಉದ್ಬಾಳ, ರಮೇಶ್ ಕರಕುರಿ, ನಾಗಭೂಷಣ, ಮಲ್ಲಯ್ಯ ಮುರಾರಿ, ರವಿ ಮಡಿವಾಳ, ಆನಂದ ವಿರಾಪೂರ, ಸುರೇಶ್ ಕೈಲವಾಡಗಿ, ವಿಜಯಕುಮಾರ್ ಹೂವಿನಭಾವಿ, ರಾಜಾ ನಧಾಪ್, ನಾಗರಾಜ ಕೌತಳ್, ನೂರುಮಹ್ಮದ್, ಕಾಸಿಂ, ಹಾಗೂ ಇನ್ನಿತರ ಉಪಸ್ಥಿತಿ ಇದ್ದರು.