ಸುದ್ದಿಮೂಲ ವಾರ್ತೆ ಬೀದರ, ಜ.25:
ಜಾತಿ, ಹಣ, ಧರ್ಮ, ಯಾವುದೇ ಆಮಿಷಕ್ಕೆೆ ಒಳಗಾಗದೆ ಯುವಕರು ನೈತಿಕವಾಗಿ ಮತದಾನ ಮಾಡಬೇಕು, ರಾಷ್ಟ್ರೀಯ ಮತದಾನದ ದಿನವನ್ನು ಪ್ರತಿ ವರ್ಷ ಒಂದೊಂದು ಧ್ಯೇಯವಾಕ್ಯದೊಂದಿಗೆ ದೇಶಾದ್ಯಂತ ಆಚರಿಸಲಾಗುತ್ತದೆ. ಈ ಬಾರಿ ನನ್ನ ಭಾರತ ನನ್ನ ಮತ ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿಿದೆ. ಮತದಾನವು ಪ್ರಜಾಪ್ರಭುತ್ವದ ಪ್ರಮುಖ ಅಸವಾಗಿದೆ. ಪ್ರತಿಯೊಬ್ಬ ನಾಗರಿಕನಿಗೂ ಮತದಾನ ಮಾಡುವ ಹಕ್ಕು ಇದೆ. ಜಾಗೃತ ಮತದಾರರೇ ಬಲಿಷ್ಠ ರಾಷ್ಟ್ರದ ಆಧಾರ ಆಚರಣೆ ಮಾಡುತ್ತಿಿದ್ದೇವೆ ಎಂದು ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ ಹೇಳಿದರು.
ರವಿವಾರ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ರಂಗಮಅದಿರದಲ್ಲಿ ಭಾರತೀಯ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ ರಾಷ್ಟ್ರೀಯ ಮತದಾರರ ದಿನ-2026 ಕಾರ್ಯಕ್ರಮವನ್ನು ಉದ್ಘಾಾಟಿಸಿ ಮಾತನಾಡಿದರು,
ಮತದಾನವು ಹಕ್ಕಿಿನ ಜೊತೆಗೆ ಕರ್ತವ್ಯವೂ ಆಗಿದೆ. ಪ್ರತಿಯೊಬ್ಬರೂ ನಿರ್ಭಯವಾಗಿ ಮತ ಚಲಾಯಿಸಬೇಕು. ಯುವಕರು ಚುನಾವಣಾ ಪ್ರಕ್ರಿಿಯೆಯಲ್ಲಿ ಸಕ್ರಿಿಯವಾಗಿ ಭಾಗವಹಿಸಬೇಕು. ಜವಾಬ್ದಾಾರಿಯುತ ಮತದಾನದಿಂದ ದೇಶದ ಅಭಿವೃದ್ಧಿಿ ಸಾಧ್ಯ ಎಂದ ಅವರು 18 ವರ್ಷ ತುಂಬಿದ ಯುವಕರು ಹೆಚ್ಚಿಿನ ಸಂಖ್ಯೆೆಯಲ್ಲಿ ಮತದಾರರ ಪಟ್ಟಿಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಪ್ರದೀಪ ಗುಂಟಿ ಅವರು ಮಾತನಾಡಿ, ಭಾರತದಲ್ಲಿ ಬಲಿಷ್ಟವಾದ ಪ್ರಜಾಪ್ರಭುತ್ವ ವ್ಯವಸ್ಥೆೆ ಇರುವುದರಿಂದಾಗಿ ನಮಗೆಲ್ಲ ಮಾತನಾಡುವ ಹಕ್ಕು ಇದೆ. ಆದರೆ ನಮ್ಮ ದೇಶದ ಪಕ್ಕದ ರಾಜ್ಯ ಅಪಘಾನಿಸ್ತಾಾನದಲ್ಲಿ ಏಕ ಚಕ್ರಾಾಧಿಪತ್ಯ ಆಳ್ವಿಿಕೆಯಿದ್ದು ನಮ್ಮಂತೆ ಅಲ್ಲಿನ ಪ್ರಜೆಗಳಿಗೆ ವೈಯಕ್ತಿಿಕ ಸ್ವಾಾತಂತ್ರ ಇರುವುದಿಲ್ಲ. ಬಲಿಷ್ಠ ಪ್ರಜಾಪ್ರಭುತ್ವಕ್ಕೆೆ ನಾವೆಲ್ಲರೂ ಕಡ್ಡಾಾಯವಾಗಿ ಮತದಾನ ಮಾಡಲೇಬೇಕು. ಮತದಾನದ ಹಕ್ಕು ಸಂವಿಧಾನ ನಮಗೆ ನೀಡಿರುವ ಅತ್ಯಂತ ಶ್ರೇಷ್ಠ ಅಧಿಕಾರವಾಗಿದೆ. ಇದು ಮಾರಾಟದ ವಸ್ತುವಲ್ಲ, ಬದಲಾಗಿ ದೇಶದ ಭವಿಷ್ಯ ರೂಪಿಸುವ ಜವಾಬ್ದಾಾರಿ ಆಗಿದೆ ಎಂದು ಹೇಳಿದರು.
ಜಿಲ್ಲಾಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಮಾತನಾಡಿ, ತಪ್ಪದೆ ಕಡ್ಡಾಾಯವಾಗಿ ಮತದಾನ ಮಾಡೋದು ನಮ್ಮ ಹಕ್ಕು, ಹೊಣೆ ಮತ್ತು ದೇಶದ ಶಕ್ತಿಿ. ಮತದಾನ ಮಾಡಿದರೆ ನಮ್ಮ ಅಭಿಪ್ರಾಾಯ ಸರ್ಕಾರಕ್ಕೆೆ ತಲುಪುತ್ತದೆ ಸರಿಯಾದ ನಾಯಕರನ್ನು ಆಯ್ಕೆೆ ಮಾಡೋ ಅವಕಾಶ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಕರಾಳೆ ಅವರು ಪ್ರಾಾಸ್ತಾಾವಿಕವಾಗಿ ಮಾತನಾಡಿದರು.
2026 ರ ರಾಷ್ಟ್ರೀಯ ಮತದಾರರ ದಿನಾಚರಣೆಯ ನಿಮಿತ್ತ ನಡೆದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಗಳಲ್ಲಿ ಪ್ರೌೌಢ ಶಾಲೆಯಲ್ಲಿ ಪ್ರಥಮ ಸ್ಥಾಾನ 9ನೇ ತರಗತಿಯ ಐಶ್ವರ್ಯ ಸಂಜುಕುಮಾರ್ ಪ್ರೌೌಢ ಶಾಲೆ ಮಳಚಾಪುರ ಭಾಲ್ಕಿಿ, ದ್ವಿಿತೀಯ ಸ್ಥಾಾನ ಪೂಜಾ ಗುಂಡಪ್ಪಾಾ ಶ್ರೀ ಜಬಿಕೆ ಪ್ರೌೌಢ ಶಾಲೆ ಬಸವಕಲ್ಯಾಾಣ, ತೃತೀಯ ಸ್ಥಾಾನ ಸೇವಂತಿ ವಿಜಯಕುಮಾರ ಇಂದಿರಾಬಾಯಿ ಶೆಟ್ಕಾಾರ ಪ್ರೌೌಢ ಶಾಲೆ ಬೀದರ, ಅದೆ ರೀತಿ ಪಿಯು ವಿಭಾಗದಲ್ಲಿ ಲಕ್ಷ್ಮಿಿ ಜವಾಹರ ಪ್ರಥಮ ಸ್ಥಾಾನ ಕರ್ನಾಟಕ ಪಿಯು ಕಾಲೇಜು, ಅರ್ಚನಾ ತುಕಾರಾಮ ದ್ವಿಿತೀಯ ಸ್ಥಾಾನ ಸಿದ್ಧಾಾರ್ಥ ಪಿಯು ಕಾಲೇಜು ಬೀದರ, ಶ್ರುತಿ ಗುಟ್ಟೆೆಪ್ಪಾಾ ತೃತೀಯ ಸ್ಥಾಾನ ಸರ್ಕಾರಿ ಪಿಯು ಕಾಲೇಜು ಮಂದಕನಳ್ಳಿಿ, ಪದವಿ ಮಟ್ಟದಲ್ಲಿ ಕರ್ನಾಟಕ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಜ್ಞಾನ ಕಾಲೇಜು ಬೀದರನ ಭುವನೇಶ್ವರಿ ಬಿ, ಪ್ರಥಮ ಸ್ಥಾಾನ ಹಾಗೂ ರಾಜ್ಯಮಟ್ಟಕ್ಕೆೆ ಆಯ್ಕೆೆ, ದ್ವಿಿತೀಯ ಸ್ಥಾಾನ ಸಂದೀಪ ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಿಟಗುಪ್ಪಾಾ, ತೃತೀಯ ಸ್ಥಾಾನ ಶಿವಾನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೌಬಾದ ಬೀದರ ಪಡೆದಿರುತ್ತಾಾರೆ.
ಅತ್ಯುತ್ತಮ ಬೂತ್ ಮಟ್ಟದ ಪ್ರದರ್ಶನದಲ್ಲಿ ಪ್ರಥಮ ಸ್ಥಾಾನ ರವಿಕಾಂತ್ ಬಸವಕಲ್ಯಾಾಣ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆ ಗೌರ, ದ್ವಿಿತೀಯ ಸ್ಥಾಾನ ಇಂದ್ರನಾಥ್ ಹುಮನಾಬಾದ, ತೃತೀಯ ಸ್ಥಾಾನ ಸೈಯದ್ ಅಜುರುದ್ಧಿಿನ ಬೀದರ ದಕ್ಷಿಣ, ಓಂಕಾರ್ ಪಾಟೀಲ್ ಬೀದರ ನಗರ, ನಾಲ್ಕನೇ ಸ್ಥಾಾನ ಭರತ್ ಭೂಷಣ್ ಭಾಲ್ಕಿಿ, ಐದನೇ ಸ್ಥಾಾನ ಕಲ್ಯಾಾಣರಾವ ಔರಾದ ಪಡೆದುಕೊಂಡಿರುತ್ತಾಾರೆ.
ಇದೇ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಿ ಹಿಡಿಯುತ್ತೇವೆ ಮತ್ತು ಯಾವುದೇ ಪ್ರಭಾವಕ್ಕೆೆ ಒಳಗಾಗದೆ ಮತ ಚಲಾಯಿಸುತ್ತೇವೆ ಎಂದು ಎಲ್ಲರೂ ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮಕ್ಕೂ ಮುಂಚಿತವಾಗಿ ವಿವಿಧ ಶಾಲಾ-ಕಾಲೇಜಿನ ಮಕ್ಕಳಿಂದ ಶಿವಾಜಿ ವೃತ್ತದಿಂದ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ರಂಗಮಅದಿ ರದವರೆಗೆ ಜಾಥಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಬೀದರ ಮಹಾನಗರ ಪಾಲಿಕೆಯ ಆಯುಕ್ತರಾದ ಮುಕುಲ್ ಜೈನ್, ಬೀದರ ಸಹಾಯಕ ಆಯುಕ್ತ ಮೊಹ್ಮದ್ ಶಕೀಲ್, ಗೌತಮ್ ಅರಳಿ ಸೇರಿದಂತೆ ಇತರೆ ಅಧಿಕಾರಿಗಳು, ಜಿಲ್ಲೆಯ ನಾಗರಿಕರು ಹಾಗೂ ಮಕ್ಕಳು ಉಪಸ್ಥಿಿತರಿದ್ದರು.
ಜಾಗೃತ ಮತದಾರರೇ ಬಲಿಷ್ಠ ರಾಷ್ಟ್ರದ ಆಧಾರ – ಡಿಸಿ ಶಿಲ್ಪಾ ಶರ್ಮಾ

