ಸುದ್ದಿಮೂಲ ವಾರ್ತೆ ಬೀದರ್, ಡಿ.20:
ಬಹುದಿನ ಗಳಿಂದ ಸಮಸ್ಯೆೆ ಯಾಗಿ ಕಾಡುತ್ತಿಿದ್ದ ಬೀದರ್-ಚಿಮ್ಮಕೋಡ್ ಮಾರ್ಗ ಮಧ್ಯೆೆದ ಗಾದಗಿ ಸೇತುವೆ ಮೇಲ್ದರ್ಜೆಗೇರಿಸುವ ಕಾಮಗಾರಿ ಕಡೆಗೂ ಆರಂಭವಾಗಿದೆ.
ಮಳೆಗಾಲ ದಲ್ಲಿ ಗಂಟೆ ಮಳೆಗೆ ಸೇತುವೆ ಮೇಲಿಂದ ನೀರು ಹರಿದು ಗಂಟೆಗಳ ಕಾಲ ರಸ್ತೆೆ ಬಂದ್ ಆಗಿ ಸಂಚಾರಕ್ಕೆೆ ಭಾರೀ ತಾಪತ್ರಯ ಉಂಟಾಗುತ್ತಿಿತ್ತು. ಇದೇ ರಸ್ತೆೆ ಮೇಲಿಂದ ಚಿಮ್ಮಕೋಡ್, ಚಿಲ್ಲರ್ಗಿ ಹಾಗೂ ನೆರೆಯ ತೆಲಂಗಾಣಕ್ಕೂ ದಿನನಿತ್ಯ ಭಾರೀ ಸಂಖ್ಯೆೆಯಲ್ಲಿ ವಾಹನಗಳ ಓಡಾಟ ಇದೆ. ಕರ್ನಾಟಕ ಸಾರಿಗೆ ಸೇರಿ ತೆಲಂಗಾಣ ರಾಜ್ಯದ ಸಾರಿಗೆ ಬಸ್ಗಳು ಕೂಡ ಓಡಾಟ ನಡೆಸುವ ಸದರಿ ರಸ್ತೆೆ ಮೇಲೆ ಮಳೆಗಾಲದಲ್ಲಿ ಪ್ರಯಾಣಿಸಬೇಕಾದರೆ ರಸ್ತೆೆ ಬಂದ್ ಆಗುವ ಭೀತಿ ಕಾಡುತ್ತಿಿತ್ತು.
ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು, ಎಡೆಬಿಡದೇ ಮಳೆ ಸುರಿದಿತ್ತು. ವಾರದಲ್ಲಿ ನಾಲ್ಕೈದು ದಿನಗಳ ಕಾಲ ನಿತ್ಯ ಗಂಟೆಗಳ ಕಾಲ ಸೇತುವೆ ಮೇಲಿಂದ ನೀರು ಹರಿದು ಸಂಚಾರಕ್ಕೆೆ ಅಡೆತಡೆ ಉಂಟಾಗುತ್ತಿಿತ್ತು.
ಈ ಬಗ್ಗೆೆ ಸುದ್ದಿಮೂಲದಲ್ಲಿ ಸತತವಾಗಿ ವರದಿ ಪ್ರಕಟಿಸಲಾಗಿತ್ತು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೂ ಹಾಗೂ ಪೌರಾ ಡಳಿತ ಸಚಿವ ರಹೀಂ ಖಾನ್ ಗಮನಕ್ಕೂ ಸದರಿ ವಿಷಯ ತರಲಾಗಿತ್ತು.
ಇದೀಗ ಲೋಕೋಪಯೋಗಿ ಇಲಾಖೆಯಿಂದ ಗಾದಗಿ ಸೇತುವೆ ಮೇಲ್ದರ್ಜೆ ಗೇರಿಸಲು ಟೆಂಡರ್ ಕರೆದಿದ್ದು, ಕಾಮಗಾರಿ ಆರಂಭವಾಗಿದೆ. ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದ್ದು, ಮಾರ್ಚ್ 2026ರೊಳಗೆ ಕಾಮಗಾರಿ ಮುಗಿಯಲಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಭಗವಾನಸಿಂಗ್ ಠಾಕೂರ್ ‘ಸುದ್ದಿಮೂಲ’ಕ್ಕೆೆ ತಿಳಿಸಿದ್ದಾರೆ.
ಸುದ್ದಿಮೂಲದಲ್ಲಿ ಸತತ ಸುದ್ದಿ : ಕೋಟಿ ರೂ. ವೆಚ್ಚದಲ್ಲಿ ಗಾದಗಿ ಸೇತುವೆ ಮೇಲ್ದರ್ಜೆಗೆ

