ದೇವನಹಳ್ಳಿ, ಅ. 22 : ಗ್ರಾಮೀಣ ಭಾಗದಲ್ಲಿ ಅಂತರ್ಜಲ ವೃದ್ದಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಆದರೂ, ಜೀವ ಜಲಕ್ಕೆ ಮೂಲಾಧಾರವಾಗಿರುವ ಪರಂಪರೆಯ ಸ್ಥಳಿಯ ಕೆರೆಗಳನ್ನು ಸಂರಕ್ಷಣೆ ಮಾಡಬೇಕು. ಕೆರೆಯಲ್ಲಿ ತುಂಬಿರುವ ಹೂಳನ್ನು ತೆಗೆಯುವ ಮೂಲಕ ಕೆರೆಯನ್ನು ಅಭಿವೃದ್ಧಿ ಪಡಿಸಿ ನೀರನ್ನು ಸಂಗ್ರಹ ಮಾಡಬೇಕು ಎಂದು ಅಣೇಶ್ವರ ಗ್ರಾ.ಪಂ. ಉಪಾಧ್ಯಕ್ಷ ಮುನಿರಾಜಪ್ಪ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಅಣೇಶ್ವರ ಗ್ರಾ.ಪಂ ವ್ಯಾಪ್ತಿಯ ದೊಡ್ಡಸಣ್ಣೆ ಕೆರೆ ಆವರಣದಲ್ಲಿ ಮೈರಾಡ ಮತ್ತು ಟಾಟಾ ಸಂಸ್ಥೆಗಳ ಸಹ ಬಾಗಿತತ್ವದಲ್ಲಿ ಕೆರೆಯಲ್ಲಿ ಹೂಳು ಮಣ್ಣು ಎತ್ತುವ. ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೆರೆಯಲ್ಲಿ ಹೂಳು ಜಾಸ್ತಿಯಾಗಿರುವ ಹಿನ್ನೆಲೆ ಹಾಗೂ ರಾಜ ಕಾಲುವೆಗಳ ಒತ್ತುವರಿಯಿಂದಾಗಿ ಕೆರೆಯಲ್ಲಿನೀರಿನ ಶೇಖರಣ ಸಾಮರ್ಥ್ಯ ಪ್ರಮಾಣ ಕುಗ್ಗಿದೆ ಎಂದು ತಿಳಿಸಿದರು.
ಮೈರಾಡ ಸಂಸ್ಥೆಯ ಕೋಲಾರ ವಿಭಾಗದ ಮುಖ್ಯಸ್ಥ ಶಿವಶಂಕರ್ ಮಾತನಾಡಿ ಹಳ್ಳಿಗಳಿಗೆ ಕೆರೆಗಳು ಆಧಾರ ರೈತರ ಜೀವನಾಡಿ ಯಾಗಿರುವ ಕೆರೆಗಳನ್ನು ಸರ್ಕಾರ ಸರಕಾರೇತರ ಸಂಸ್ಥೆಗಳು ಮುಂದೆ ಬಂದು ಸಂರಕ್ಷಣಾ ಮಾಡಬೇಕು. ಅದೇ ನಿಟ್ಟಿನಲ್ಲಿ ಮೈರಾಡ ಟಾಟಾ ಕಂಪನಿಗಳು ಸಿಎಸ್ ಆರ್ ಯೋಜನೆಯಡಿ ಅಣೇಶ್ವರ ಗ್ರಾಮಪಂಚಾಯ್ತಿಯಲ್ಲಿ ಕೆರೆ ನೀರು ಮಣ್ಣನ್ನು ಸಂರಕ್ಷಣೆ ಮಾಡಲು ಜಲಾನಯನ ಕಾರ್ಯಕ್ರಮ ಅನುಷ್ಠಾನ ಗೊಳಿಸಿದ್ದು ಪಾರಂಪರಿಕ ಕೆರೆಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ ಎಂದರು.
ಫಲವತ್ತಾದ ಕೆರೆಯ ಹೂಳು ಮಣ್ಣು ರೈತರು ತೋಟ ಹೊಲ ಗದ್ದೆಗಳಿಗೆ ಹಾಕಿ ಕೊಂಡರೆ ಉತ್ತಮ ಇಳುವರಿ ಪಡೆಯಬಹುದು, ರೈತರು ಸ್ವಂತ ಖರ್ಚಿನಲ್ಲಿ ಕೆರೆಯ ಮಣ್ಣನ್ನು ಸಾಗಿಸಿಕೊಳ್ಳಲು ಸಹಕರಿಸುತ್ತಿದ್ದಾರೆ ಎಂದು ಮೈರಾಡ ಸಂಸ್ಥೆಯ ಕೋಲಾರ ವಿಭಾಗದ ಮುಖ್ಯಸ್ಥ ಶಿವಶಂಕರ್ ಕೆರೆ ಹೂಳುತೆಗೆಯುವ ಕಾಮಗಾರಿ ಸ್ಥಳಕ್ಕೆ ಮಾಡಿ ಕಾಮಗಾರಿ ವೀಕ್ಷಣೆ ಮಾಡಿ ಮಾದ್ಯಮಗಳಿಗೆ ತಿಳಿದರು.
ಕೆರೆ ಹೂಳೆತ್ತುವುದರಿಂದ ನೀರಿನ ಶೇಖರಣಾ ಸಾಮರ್ಥ್ಯ ಹೆಚ್ಚಳದೊಂದಿಗೆ ಅಂತರ್ಜಲದ ವೃದ್ಧಿಯೂ ಆಗುತ್ತದೆ. ಕೆರೆಯ ಗಡಿಯನ್ನು ಗುರುತಿಸಿ ಒತ್ತುವರಿಯಾಗಿರುವ ಕೆರಗಳನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದೆ. ಕೆರೆಯ ಸುತ್ತಲೂ ಹಸಿರೀಕರಣ ಮಾಡಲು ಸಸಿ ನೆಟ್ಟು ಪೋಷಿಸುವ ಕೆಲಸ ಮಾಡಲಾವುದು ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗಂಗರಾಜು ಹೇಳಿದರು.
ಇದೇ ವೇಳೆ, ಪಂಚಾಯತಿ ಅಧ್ಯಕ್ಷೆ ಉಮಾ, ಸದಸ್ಯರಾದ ವೆಂಕಟೇಶ್, ರಾಜಣ್ಣ, ಶಿಲ್ಪ, ಮುನಿಲಕ್ಷ್ಮ ಮ್ಮ, ಮಾಜಿಸದಸ್ಯರಾದ ನಂಜೇಗೌಡ, ಮುನಿಯಪ್ಪ, ಮಾಜಿ ಅಧ್ಯಕ್ಷ ಚಂದ್ರಶೇಖರ್, ಪಿಡಿಒ ಗಂಗರಾಜು, ಗ್ರಾಮಸ್ಥರಾದ ನಾರಾಯಣಸ್ವಾಮಿ, ಹರೀಶ್, ಮುನಿಕೃಷ್ಣ ಉಪಸ್ಥಿತರಿದ್ದರು.