ಸುದ್ದಿಮೂಲ ವಾರ್ತೆ ರಾಯಚೂರು, ನ.18:
ಡಾ.ಬಾಬಾ ಸಾಹೇಬ್ ಅವರು ಬರೆದ ಸಂವಿಧಾನ ಸದೃಢವಾಗಿರುವಂತೆ ದೇಶದ ಪ್ರತಿಯೊಬ್ಬರೂ ನೋಡಿಕೊಂಡರೆ ಮಾತ್ರ ಸುರಕ್ಷಿಿತವಾಗಿರಲು ಸಾಧ್ಯ ಎಂಬುದನ್ನು ಭಾರತದ ಸಾಮಾನ್ಯನೂ ಅರಿಯದೆ ಹೋದರೆ ಮತ್ತಷ್ಟು ದುರ್ಬಲಗೊಳಿಸುವ ಕೆಲಸ ಅಸಮಾನತೆಯ ಪ್ರತಿಪಾದಕರು ಮಾಡುತ್ತಾಾರೆ ಎಂದು ಗೋನ್ವಾಾರದ ಹುಚ್ಚುಬುಡ್ಡೇಶ್ವರ ಮಠದ ಶ್ರೀ ಬಸವರಾಜ ಸ್ವಾಾಮಿ ಆತಂಕ ವ್ಯಕ್ತಪಡಿಸಿದರು.
ನಗರದ ಮಹಾತ್ಮಾಾಗಾಂಧಿ ಜಿಲ್ಲಾಾ ಕ್ರೀಡಾಂಗಣದ ಆವರಣದಲ್ಲಿರುವ ಏಮ್ಸ್ ಹೋರಾಟ ವೇದಿಕೆಯಲ್ಲಿ ಸಂವಿಧಾನ ಸಂರಕ್ಷಣಾ ಪಡೆಯಿಂದ ಹಮ್ಮಿಿಕೊಂಡಿದ್ದ ಸಂವಿಧಾನ ಸಂರಕ್ಷಣೆ ಜಾಗೃತಿ ಜಾಥಾ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು.
ಭಾರತದ ಸಂವಿಧಾನ ಸುರಕ್ಷಿತವಾಗಿದೆ ಎನ್ನುವುದು ಶುದ್ಧ ಸುಳ್ಳು ಸಮಾನತೆಯ ಒಪ್ಪದಿರುವವರು ಸಂವಿಧಾನಕ್ಕೆೆ ನಮಗೆ ಅರಿವಿಲ್ಲದಂತೆಯೇ ಪೆಟ್ಟು ನೀಡಿ ದುರ್ಬಲಗೊಳಿಸುವ ಸಾಹಸಕ್ಕೆೆ ಕೈ ಹಾಕಿದ್ದಾಾರೆ ಎಂದು ವಾಗ್ದಾಾಳಿ ನಡೆಸಿದರು.
ಇಂದು ಸಂವಿಧಾನವೆಂದರೆ ನಮ್ಮ ತಾಯಿಯ ಋಣಕ್ಕೆೆ ಸಮನಾದದ್ದು , ಉಪಕಾರ ಮರಳಿ ನೀಡಲು ನಮ್ಮಿಿಂದ ಸಾಧ್ಯವಿಲ್ಲ. ಆದರೆ ದೇಶದ ನಾಗರೀಕರಾಗಿರುವ ನಾವು ನಮ್ಮ ದೇಹದ ರಕ್ಷಣೆಗೆ ಕೊಡುವ ಒತ್ತು ಸಂವಿಧಾನ ರಕ್ಷಣೆಗೂ ಕೊಡಬೇಕಾಗಿದೆ ಎಂದರು.
ದೇಶದಲ್ಲಿ ಪಂಚಾಂಗ, ಜ್ಯೋೋತಿಷ್ಯದ ಮೂಲಕ ವೌಢ್ಯರಾಗಿಸುವ ತಂತ್ರಘಿ, ಕುತಂತ್ರ ನಡೆದಿದ್ದು ಪಂಚಾಗ ಭವಿಷ್ಯ ಕೇವಲ ಸೂರ್ಯ, ಚಂದ್ರ ಇತರೆ ಗ್ರಹ ಮತ್ತು ಬೆಳಕಿಗೆ ಮಾತ್ರ ಸಂಬಂಧಿಸಿದ್ದು ಎಂಬ ಸತ್ಯ ಅರಿಯಬೇಕು ಅದು ಮಾನವನ ಭವಿಷ್ಯಕ್ಕೆೆ ಸಂಬಂಧಿಸಿದ್ದಲ್ಲ ಎಂದು ಪ್ರತಿಪಾದಿಸಿದರು.
ಸಂವಿಧಾನ ನಮ್ಮೆೆಲ್ಲರ ಕಾಪಾಡಲು ಇರುವ ಪರಿಚ್ಛೇದ, ಕಾಯಿದೆಗಳನ್ನು ಭಾರತದ ಮೂಲ ನಿವಾಸಿಗಳಾದ ನಾವು ಅರಿತುಕೊಂಡು ಕಾಪಾಡಲೇಬೇಕು ಎಂದು ಸಲಹೆ ನೀಡಿದರು.
ಯುವತಿ ರ್ದಾನಾ ಖಾನಂ ಮಾತನಾಡಿ, ಸಂವಿಧಾನ ಈ ದೇಶದ ಜನ ಸಾಮಾನ್ಯರ ದೇವಸ್ಥಾಾನ, ಅಂಬೇಡ್ಕರ್ ಅವರು ದೇವರಿದ್ದಂತೆ ಅವರ ದೂರದೃಷ್ಟಿಿಯ ಆಲೋಚನೆ, 25 ಆಧ್ಯಾಾಯ, ವಿವಿಧ ಪರಿಚ್ಛೇದಗಳಿಂದಾಗಿ ನಾವೆಲ್ಲ ಸುರಕ್ಷಿಿತರಾಗಿದ್ದೇವೆ. ವಿದ್ಯಾಾವಂತರಾಗಿ, ನೌಕರರಾಗಿ ಬದುಕು ಹಸನಗೊಳಿಸಿಕೊಳ್ಳುತ್ತಿಿದ್ದೇವೆ ಎಂದರು.
ದುರ್ಬಲ, ಪರಿಶಿಷ್ಟ ಸಮುದಾಯದವರು ಪೂಜಾರಿಗಳಾಗದಿರ ಬಹುದು ಆದರೆ, ಈ ದೇಶದ ಪ್ರಧಾನಿಗಳಾಗಬಹುದು ಎಂಬುದನ್ನು ಸಂವಿಧಾನದ ಮೂಲಕ ಸಾಧ್ಯವಾಗಿದೆ. ಹೀಗಾಗಿ, ನಾವು ಸಂವಿಧಾನ ರಕ್ಷಣೆಗಾಗಿ ಬದುಕಬೇಕು ಎಂದು ಕೋರಿದರು.
ಕಲಬುರ್ಗಿಯ ಬುದ್ಧ ವಿಹಾರದ ಪೂಜ್ಯ ನಾಗರತ್ನ ಬಂತೇಜಿ ಅವರು ತ್ರಿಿಕರಣ ಪಂಚಶೀಲ ತತ್ವಗಳ ಪಠಿಸಿ ಬೋಧಿಸಿದರು.
ನಂತರ ರಮಾಬಾಯಿ ಅಂಬೇಡ್ಕರ್ ಕುರಿತು ಪದ್ಮಾಾ ಕೋಟಾ ಅವರ ತಂಡ ಪ್ರದರ್ಶಿಸಿದ ಅರ್ಧ ಗಂಟೆಯ ಕಿರು ನಾಟಕ ನೆರೆದವರ ಮೆಚ್ಚುಗೆ ಗಳಿಸಿತು.
ವೇದಿಕೆಯಲ್ಲಿ ಹೋರಾಟ ಸಮಿತಿ ಸಂಚಾಲಕರಾದ ಎಂ.ಆರ್.ಬೇರಿ, ದಾನಪ್ಪ ನೀಲೊಗಲ್, ವೈ.ನರಸಪ್ಪ, ಎಂ.ವಸಂತ, ರವೀಂದ್ರನಾಥ ಪಟ್ಟಿಿಘಿ, ಕೆ.ಇ.ಕುಮಾರ್, ವಿಶ್ವನಾಥ್ ಪಟ್ಟಿಿ, ತಮ್ಮಣ್ಣ ವಕೀಲ, ವಿಜಯರಾಣಿ, ಟಿ.ಜಾನ್ ವೆಸ್ಲಿಿ, ಅರ್ಚನಾ ಸುಂಕಾರಿ, ಮುಖಂಡರಾದ ಎಂ.ವಿರುಪಾಕ್ಷಿ, ಯೂಸ್ೂಖಾನ್,ಮಹ್ಮದ ಶಾಲಂ, ಅಬ್ರಹಾಂ ಹೊನ್ನಟಗಿ, ಮೋಕ್ಷಮ್ಮಘಿ, ಎಚ್.ಪದ್ಮಾಾಘಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು, ಮಹಿಳೆಯರು, ಯುವಕರಿದ್ದರು.
* ಸಂವಿಧಾನ ಜಾಗೃತಿ ಬಹಿರಂಗ ಅಧಿವೇಶನ * ರಮಾಬಾಯಿ ಕಿರು ನಾಟಕ ಪ್ರದರ್ಶನ ಸಂವಿಧಾನ ಸದೃಢತೆಗೆ ದೇಶದ ಪ್ರತಿಯೊಬ್ಬರೂ ಶ್ರಮಿಸಲೇಬೇಕು-ಶ್ರೀ ಬಸವರಾಜ ಸ್ವಾಾಮಿ

