ಸುದ್ದಿಮೂಲ ವಾರ್ತೆ ಕೆ.ಆರ್.ಪುರ.ಜ.27:
ಭಾರತ ದೇಶ ಹಲವಾರು ಭಾಷೆಯ ವೈವಿಧ್ಯತೆ, ನಾನಾ ಬಗೆಯ ಸಂಪ್ರದಾಯ, ನಾನಾ ತರಹದ ಸಾಂಸ್ಕೃತಿಕ ಹಿನ್ನಲೆಯನ್ನು ಹೊಂದಿದ್ದರೂ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆ ಸೂಕ್ತವಾದ ಸಂವಿಧಾನ ರಚಿಸಿದ್ದಾರೆ ಎಂದು ಪ್ರಜಾ ವಿಮೋಚನಾ ಚಳವಳಿ ಸಾಮಾಜೀಕ ನ್ಯಾಾಯ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಸಂಘಟನಕಾರರು ಅದೂರು ದೇವರಾಜ್ ಪ್ರಬುದ್ಧ ಅವರು ಹೇಳಿದರು.
ಮಹದೇವಪುರ ಕ್ಷೇತ್ರದ ಆದೂರಿನಲ್ಲಿ ಪ್ರಜಾ ವಿಮೋಚನಾ ಚಳವಳಿ ಸಾಮಾಜೀಕ ನ್ಯಾಾಯ ಸಂಘಟನೆಯ ವತಿಯಿಂದ ಹಮ್ಮಿಿಕೊಂಡಿದ್ದ 77ನೇ ಗಣರಾಜ್ಯೋೋತ್ಸವ ಹಾಗೂ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಡಾ.ಬಿ.ರ್ಆ.ಅಂಬೇರ್ಡ್ಕ ಹಾಗೂ ಭಗವಾನ್ ಬುದ್ದ ಅವರ ಭಾವಚಿತ್ರಕ್ಕೆೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿ ಸಂವಿಧಾನ ರಚಿಸದೆ ಹೋಗಿದ್ದರೆ ಇವತ್ತು ಭಾರತ ದೇಶದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸಲು ಆಗುತ್ತಿಿರಲಿಲ್ಲ. ಭಾರತ ದೇಶದಲ್ಲಿ ಕಾಡುತ್ತಿಿ ರುವ ಅನ್ಯಾಾಯ, ಶೋಷಣೆ, ದೌರ್ಜನ್ಯ, ಹಿಂಸೆ ಇನ್ನಿಿತರ ಕಾರಣಗಳನ್ನು ಮುಂದಿಟ್ಟುಕೊಂಡು ಸರ್ವ ಜನರು ನೆಮ್ಮದಿಯಿಂದ ಬದುಕಬೇಕು ಎನ್ನುವ ದೃಷ್ಟಿಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸತತ ಶ್ರಮದ ಲವಾಗಿ ಸಂವಿಧಾನ ರಚನೆ ಮಾಡಿದರು ಎಂದರು.
ಕರಡು ಸಮಿತಿ ರಚನೆಯಲ್ಲಿ ಏಳು ಜನ ಸದಸ್ಯರಿದ್ದರು ಕಾರಣಾಂತರಗಳಿಂದ ಅವರು ಬೇರೆಬೇರೆ ಕೆಲಸಗಳ ನಿಮಿತ್ತ ಕೆಲವರು ವಿದೇಶಕ್ಕೆೆ, ಕೆಲವರು ರಾಜಕಾರಣಿಗಳಾಗಿ ಇನ್ನೂ ಕೆಲವರು ಮರಣ ಹೊಂದುತ್ತಾಾರೆ. ಕೆಲವೊಂದಿಷ್ಟು ಜನರು ಬೇರೆ ಕೆಲಸಗಳಲ್ಲಿ ತಲ್ಲಿನರಾಗುತ್ತಾಾರೆ. ಈ ಸಂಧರ್ಭದಲ್ಲಿ ಸಂವಿಧಾನ ರಚನೆ ಮಾಡುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೇಲೆ ದೊಡ್ಡ ಜವಾಬ್ದಾಾರಿ ಬಿದ್ದು ಕೊನೆಗೆ ಧೃತಿಗೆಡದೆ ಹಲವಾರು ದೇಶಗಳ ಸಂವಿಧಾನವನ್ನು ಓದಿ ಭಾರತ ದೇಶದ ಸಂವಿಧಾನ ರಚನೆ ಮಾಡಲು ಮುಂದಾಗಿ ನಮ್ಮ ದೇಶಕ್ಕೆೆ ಮಾದರಿ ಸಂವಿಧಾನ ರಚನೆ ಮಾಡಿದರು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಹಿರಂಡಹಳ್ಳಿಿ ಹೆಚ್.ಆರ್.ರಮೇಶ್, ಹೆಚ್.ವಿ.ಸಾದಪ್ಪ, ಶ್ಯಾಾಮಣ್ಣ, ಚಂದ್ರಪ್ಪ, ದೊಡ್ಡಬನಹಳ್ಳಿಿ ಮುನಿರಾಜು, ಚಿಕ್ಕಬನಹಳ್ಳಿಿ ಸಿ.ಎ.ರವಿ, ಹಿರಂಡಹಳ್ಳಿಿ ಎ.ಎಮ್.ವೆಂಕಟೇಶ್, ಆದೂರು ಸುಂದರ್ ರಾಜ್ ಪ್ರಬುದ್ಧ, ರಮೇಶ್, ಮುನಿರಾಜ, ಮುನಿಯಮ್ಮ, ವೆಂಕಟಮ್ಮ, ಉಜ್ರಪ್ಪ, ಎಪಿ ಎಮ್ ಸಿ ಮುನಿಯಲ್ಲಪ್ಪ ಮತ್ತಿಿತರರು ಇದ್ದರು.
ಆದೂರಿನಲ್ಲಿ ಸಂವಿಧಾನ ದಿನ ಆಚರಣೆ

