ಸುದ್ದಿಮೂಲ ವಾರ್ತೆ ಬೀದರ, ಜ.26:
ನಮಗೆಲ್ಲರಿಗೂ ವಾಕ್ ಸ್ವಾಾತಂತ್ರ್ಯ, ಧಾರ್ಮಿಕ ಆಚರಣೆಯ ಸ್ವಾಾತಂತ್ರ್ಯ, ಮತದಾನದ ಹಕ್ಕು, ಗೌರವದಿಂದ ಬಾಳುವ ಹಕ್ಕುಗಳನ್ನು ನಮ್ಮ ಸಂವಿಧಾನ ನೀಡಿದೆ.
ಸಮಸಮಾಜದ, ಸಾಮಾಜಿಕ ನ್ಯಾಾಯದ ಸ್ಪಷ್ಟ ಸಂದೇಶಗಳು ಸಂವಿಧಾನದಲ್ಲಿವೆ. ನಮ್ಮ ಸಂವಿಧಾನ ಇಡೀ ವಿಶ್ವಕ್ಕೇ ಮಾದರಿಯಾಗಿದೆ ಎಂದು ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆೆ ಹೇಳಿದರು.
ಸೋಮವಾರ ಜಿಲ್ಲಾ ಕ್ರೀೆಡಾಂಗಣದಲ್ಲಿ 77ನೇ ಗಣರಾಜ್ಯೋೋತ್ಸವ ರಾಷ್ಟಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾರತದ ಸಂವಿಧಾನ ಹಲವು ವೈಶಿಷ್ಟ್ಯತೆಗಳಿಂದ ಕೂಡಿದೆ. ಇಷ್ಟು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಹೊಂದಿರುವ ಲಿಖಿತ ಸಂವಿಧಾನದಂತಹ ಯಾವುದೇ ಗೊಂದಲ ಅಸ್ಪಷ್ಟತೆ ಇಲ್ಲದ ಸಂವಿಧಾನ ಬೇರೆ ಯಾವ ರಾಷ್ಟ್ರದಲ್ಲೂ ಇಲ್ಲ ಎಂದರೆ ಅತಿಶಯೋಕ್ತಿಿಯಾಗಲಾರದು. ಇದಕ್ಕೆೆ ಸಂವಿಧಾನ ಶಿಲ್ಪಿಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿಶ್ರಮ ಕಾರಣವಾಗಿದೆ. ನಮ್ಮ ಸಂವಿಧಾನ ಭಾರತದ ಎಲ್ಲ ಪ್ರಜೆಗಳಿಗೂ ಬದುಕುವ ಸಮಾನಹಕ್ಕು ಕಲ್ಪಿಿಸಿದೆ. ಹಲವು ಮೂಲಭೂತ ಹಕ್ಕುಗಳನ್ನು ನೀಡಿದೆ. ಅದೇ ರೀತಿ ನಮ್ಮ ಕರ್ತವ್ಯಗಳೇನು ಎಂಬುದನ್ನೂ ತಿಳಿಸಿಕೊಟ್ಟಿಿದೆ ಎಂದರು.
ನಮ್ಮ ಸರ್ಕಾರ ನುಡಿದಂತೆ ನಡೆದಿದ್ದು ಕಲ್ಯಾಾಣ ಕರ್ನಾಟಕ ಅಭಿವೃದ್ಧಿಿಗೆ 5 ಸಾವಿರ ಕೋಟಿ ರೂಪಾಯಿ ಹಣ ಹಂಚಿಕೆ ಮಾಡಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯಾವುದೇ ಜಿಲ್ಲೆ ಅಭಿವೃದ್ಧಿಿ ಹೊಂದಬೇಕಾದರೆ ಅದಕ್ಕೆೆ ರಸ್ತೆೆ, ರೈಲು, ವಿಮಾನ ಸೌಕರ್ಯ ಅತ್ಯಗತ್ಯ. ಹೀಗಾಗಿಯೇ ಕೇಂದ್ರ ಸರ್ಕಾರ ಉಡಾನ್ ಯೋಜನೆಯಡಿ ಅನುದಾನ ನಿಲ್ಲಿಸಿದ ಬಳಿಕ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಬೀದರ್ ನಾಗರಿಕ ವಿಮಾನಯಾನ ಸೇವೆ ರಾಜ್ಯ ಸರ್ಕಾರವೇ 15 ಕೋಟಿ ರೂ. ಅನುದಾನ ನೀಡಿ ಮರು ಆರಂಭ ಮಾಡಿಸಿದೆ. ಮುಂಬರುವ ವರ್ಷದಲ್ಲಿಯೂ ಸಹ ಅನುದಾನ ಮೀಸಲಿಡಲಾಗುವುದೆಂದರು.
ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರವನ್ನೂ ಒಂದೇ ಪಥದಲ್ಲಿ ಒಗ್ಗೂಡಿಸುವ ಚಿಂತನೆ ನಡೆದಿದ್ದು, 500 ಕೋಟಿ ವೆಚ್ಚದಲ್ಲಿ 250 ಕಿಲೋ ಮೀಟರ್ಗಳ ಬಸವ ಪಥ ಎಂಬ ವರ್ತುಲ ರಸ್ತೆೆ ರಿಂರ್ ರೋಡ್ ಮಾಡುವ ಪ್ರಸ್ತಾಾವನೆಯನ್ನು ನಾನು ಸರ್ಕಾರದ ಮುಂದಿಟ್ಟಿಿದ್ದೇನೆಅದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಸಾಗರ ಈಶ್ವರ ಖಂಡ್ರೆೆ, ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಾಳೆ, ವಿಧಾನ ಪರಿಷತ್ ಸದಸ್ಯ ಮಾರುತಿರಾವ ಮೂಳೆ, ಬೀದರ ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ಬೀದರ ನಗರಾಭಿವೃದ್ಧಿಿ ಪ್ರಾಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿಿ, ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ॥ ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಪ್ರದೀಪ ಗುಂಟಿ, ಬೀದರ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಹಲವಾರು ಜನರು ಉಪಸ್ಥಿಿತರಿದ್ದರು.
ಭಾರತ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿ-ಸಚಿವ ಈಶ್ವರ ಬಿ.ಖಂಡ್ರೆ

