ವೆಂಕಟೇಶ ಹೂಗಾರ ರಾಯಚೂರು, ನ.14:
ದೇವದಾಸಿ ಪದ್ದತಿಯಿಂದ ಹೊರ ಬಂದ ರಾಯಚೂರು ನಗರದ ಮಹಿಳೆಯರ ಕುಟುಂಬಗಳಿಗೆ ಮನೆ ಕಟ್ಟಿಿಕೊಡಲು ಭೂಮಿ ಪೂಜೆ ಮಾಡಿ ಎಂಟು ವರ್ಷಗಳಾದರೂ ಅರೆಬರೆ ಮನೆಗಳು ಅನಾಥವಾಗಿ ನಿಂತಿದ್ದು ಹಕ್ಕು ಪತ್ರ ಪಡೆದ ನೂರಕ್ಕೂ ಅಧಿಕ ಮಹಿಳೆಯರು ಶಿವನ ಪಾದ ಸೇರಿದ್ದಾಾರೆ.
ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ದೇವದಾಸಿ ಪದ್ದತಿಯಿಂದ ಹೊರ ಬಂದು ಗೌರವದ ಬದುಕು ಕಟ್ಟಿಿಕೊಳ್ಳಬೇಕೆಂದು ಪುಂಖಾನುಪುಂ ಖವಾಗಿ ಮಾಡುವ ಭಾಷಣ ಅವರಿಗೆ ಪುನರ್ವಸತಿ ಒದಗಿಸುವಲ್ಲಿ ಬದ್ದತೆ ತೋರಿಸಿಲ್ಲ ಎಂಬುದಕ್ಕೆೆ ರಾಯಚೂರು ನಗರದಲ್ಲಿ ಎಂಟು ವರ್ಷಗಳಿಂದಲೂ ತೆವಳುತ್ತಲೆ ಸಾಗಿರುವ ದೇವದಾಸಿ ಪದ್ದತಿ ಮುಕ್ತ ಕುಟುಂಬಗಳಿಗಾಗಿನ ನಿರ್ಮಾಣ ಹಂತದಲ್ಲಿರುವ ಅರೆಬರೆ ಮನೆಗಳೆ ನಿದರ್ಶನವಾಗಿವೆ.
ರಾಯಚೂರು ನಗರದ ಆಶಾಪೂರ ರಸ್ತೆೆಯ ಕೇಂದ್ರೀಯ ವಿದ್ಯಾಾಲಯದ ಹಿಂಬದಿಯ ಸರ್ವೆ ನಂ.1403ರಲ್ಲಿ 2016ರಲ್ಲಿ ಸುಮಾರು 5 ಎಕರೆ ಭೂಮಿಯಲ್ಲಿ ಮನೆ ಕಟ್ಟಿಿಸಿಕೊಡುವ ಭರವಸೆಯೊಂದಿಗೆ 206 ದೇವದಾಸಿ ಮುಕ್ತ ಮಹಿಳೆಯರ ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿತ್ತುಘಿ. ಆದರೆ, ಸಮೀಕ್ಷೆೆ ವೇಳೆ 196 ದೇವದಾಸಿ ಕುಟುಂಬದವರಿಗೆ ಮಾತ್ರ ಮನೆ ಎಂದು ಅಂತಿಮಗೊಳಿಸಲಾಗಿತ್ತುಘಿ.
ಮನೆ ನಿರ್ಮಾಣಕ್ಕೆೆ 2017ರಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಅವರು ಭೂಮಿ ಪೂಜೆ ನೆರವೇರಿಸಿದ್ದರು. ಎರಡು ವರ್ಷದಲ್ಲಿ ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗುವುದು ಎಂಬ ಭರವಸೆ ಎಂಟು ವರ್ಷಗಳಾದರೂ ಈಡೇರಿಯೇ ಇಲ್ಲಘಿ. ಸ್ಲಂ ಬೋರ್ಡ್ ಮೇಲುಸ್ತುವಾರಿಯಲ್ಲಿ ಮೂಲ ಗುತ್ತಿಿಗೆದಾರ ಎಂ.ಈರಣ್ಣ ಅವರಿಂದ ಉಪಗುತ್ತಿಿಗೆ ಪಡೆದಿದ್ದ ರಾಯಚೂರು ಮೂಲದವರೂ ಹಣದ ವಿಚಾರದಲ್ಲಿ ಅರ್ಧಕ್ಕೆೆ ಕಾಮಗಾರಿ ಕೈ ಬಿಟ್ಟಿಿದ್ದರು. ಈಗ ಪುನಃ ಮೂಲ ಗುತ್ತಿಿಗೆದಾರರೆ ಮನೆ ನಿರ್ಮಾಣ ಕಾಮಗಾರಿ ಪುನರಾರಂಭಿಸಿದ್ದಾಾರೆ.
ವಂತಿಗೆಯದ್ದೆೆ ಸಮಸ್ಯೆೆ :
ಹಕ್ಕುಪತ್ರ ನೀಡಿದವರಿಗೆ ಸಮಾಜ ಕಲ್ಯಾಾಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆಯ ದೇವದಾಸಿ ಪದ್ದತಿ ನಿರ್ಮೂಲನಾ ಪುನರ್ವಸತಿ ಯೋಜನೆಯಡಿ ಒಂದು ಮನೆಗೆ 6 ಲಕ್ಷ 32 ಸಾ ವೆಚ್ಚದಲ್ಲಿ 20/30 ಅಳತೆಯಲ್ಲಿ ಅರ್ಹ 196 ಲಾನುಭವಿಗಳಿಗೆ ಮನೆ ನಿರ್ಮಿಸಲು ಮುಂದಾಗಿತ್ತುಘಿ.
ಆದರೆ, ಕೊಳಚೆ ನಿರ್ಮೂಲನಾ ಮಂಡಳಿಗೆ ಲಾನುಭವಿಗಳಾದವರು ತಮ್ಮ ವಂತಿಗೆ 3 ಲ 10 ಸಾವಿರ ವಂತಿಗೆ ಭರಿಸಬೇಕು ಎಂಬ ಸೂಚನೆ ಬರುತ್ತಿಿದ್ದಂತೆ ಅದಕ್ಕೆೆ ತಾವು ಬಡವರು, ದುರ್ಬಲ ವರ್ಗದವರಾಗಿದ್ದು ಬದುಕು ನಡೆಸುವುದೆ ಸವಾಲು ಆಗಿರುವಾಗ ಅಷ್ಟು ಮೊತ್ತ ತಮ್ಮಿಿಂದ ಕಟ್ಟಲು ಆಗದು ಎಂದು ಹೇಳಿದ್ದರಿಂದ ಕನಿಷ್ಠ 1 ಲಕ್ಷ ರೂ ವಂತಿಗಯನ್ನಾಾದರೂ ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದರು. ಅದಕ್ಕೂ ಸಾಧ್ಯವಿಲ್ಲ ನಮಗೆ ಬರುವ 2 ಸಾವಿರ ಪಿಂಚಣಿಯಿಂದ ಸಾಲ ತರುವುದು ಎಲ್ಲಿಂದ ಎಂದು ಪ್ರಶ್ನಿಿಸಿದ್ದರು.
ಈ ಮಧ್ಯೆೆ ಅಧಿಕಾರಿಗಳ ಸಭೆ ನಡೆಸಿದ್ದ ಸ್ಲಂ ಬೋರ್ಡ್ ಅಧ್ಯಕ್ಷ ಕೊಳಗೇರಿ ಅಭಿವೃದ್ಧಿಿ ಮಂಡಳಿ ಅಧ್ಯಕ್ಷ, ಶಾಸಕ ಅಬ್ಬಯ್ಯ ಪ್ರಸಾದ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಆಯೋಗದ ಅಧ್ಯಕ್ಷ ನರೇಂದ್ರಸ್ವಾಾಮಿ ಅವರು ದೇವದಾಸಿಯರಿಂದ ಹಣ ಪಡೆಯದೇ ಮನೆ ನಿರ್ಮಾಣದ ಸಂಪೂರ್ಣ ವೆಚ್ಚ ಸರ್ಕಾರದಿಂದ ಭರಿಸುವುದಕ್ಕೆೆ ಬೇಕಾದ ಕ್ರಮ ಕೈಗೊಳ್ಳುವುದಕ್ಕೆೆ ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆಗೆ ಸೂಚಿಸಿದ್ದರು. ಅದು ಇಂದಿಗೂ ಕಾರ್ಯರೂಪಕ್ಕೆೆ ಬಂದಿಲ್ಲ ಚರ್ಚೆ ಹಂತದಲ್ಲಿಯೇ ಉಳಿದಿದೆ. ಹೀಗಾಗಿ, ಗುತ್ತಿಿಗೆದಾರರು, ಲಾನುಭವಿಗಳು ಜೊತೆಗೆ ಸ್ಲಂ ಬೋರ್ಡ್ ಅಧಿಕಾರಿಗಳು ಗೊಂದಲದಲ್ಲಿ ಮನೆ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ನಡೆಸಿದ್ದಾಾರೆ ಎಂಬ ಅಸಮಾಧಾನ ಇದೆ.
ಹಕ್ಕು ಪತ್ರ ಪಡೆದ ಕೆಲವರು ಸಾವು :
ರಾಯಚೂರು ನಗರದಲ್ಲಿಯೇ 196 ಅರ್ಹ (206) ಲಾನುಭವಿ ದೇವದಾಸಿ ಮುಕ್ತ ಕುಟುಂಬಗಳ ಪೈಕಿ ಹಕ್ಕು ಪತ್ರ ಪಡೆದ ಸುಮಾರು 100 ಜನ ದೇವದಾಸಿ ಮುಕ್ತ ಮಹಿಳೆಯರು ಸತ್ತೇ ಹೋಗಿದ್ದಾಾರೆ ಎನ್ನಲಾಗಿದೆ. ಅವರ ಕುಟುಂಬದವರು ಹಕ್ಕುಪತ್ರ ಹಿಡಿದು ಮನೆಗಾಗಿ ಅಲೆದಾಡುತ್ತಿಿದ್ದಾಾರೆ. ಆದರೆ, ಅವರಿಗೆ ಸದ್ಯಕ್ಕೆೆ ಮನೆ ಪೂರ್ಣಗೊಂಡು ಸಿಗಲಿವೆ ಎಂಬ ವಿಶ್ವಾಾಸ ಉಳಿದಿಲ್ಲ.
84 ಮನೆ ನಿರ್ಮಾಣ ಪ್ರಗತಿ :
ಸದ್ಯ ಸ್ಲಂ ಬೋರ್ಡ್ ಮೇಲುಸ್ತುವಾರಿಯಲ್ಲಿ ಗುತ್ತಿಿಗೆದಾರರು 196 ಮನೆಗಳ ಪೈಕಿ 84 ಮನೆಗಳ ನಿರ್ಮಾಣ ಕಾರ್ಯ ಆರಂಭಿಸಿದ್ದಾಾರೆ. ಇದರಲ್ಲಿ 84 ಮನೆಗಳಿಗೂ ಮೇಲ್ಛಾಾವಣಿ ಹಾಕಲಾಗಿದೆ. 42 ಮನೆಗಳ ಸುತ್ತಲೂ ಗೋಡೆ ಕಟ್ಟಿಿದ್ದಾಾರೆ ನೆಲ ಹಾಸು ಬಾಕಿ , ಗೋಡೆಗೆ ಗಿಲಾವ್ ಮಾಡುವುದು ಇದೆ. ಈ ಪೈಕಿ 7 ಮನೆಗಳಿಗೆ ಸುಣ್ಣ ಬಣ್ಣವೂ ಆಗಿದೆ, ಉಳಿದ 38 ಮನೆಗಳಿಗೆ ಸುತ್ತಲೂ ಗೋಡೆಯೇ ಕಟ್ಟಿಿಲ್ಲ ಆದರೆ ಮೇಲ್ಛಾಾವಣಿ ಮಾತ್ರ ನಿರ್ಮಿಸಿದ್ದು ಕೇವಲ ಪಿಲ್ಲರುಗಳ ಮೇಲೆ ಮೇಲ್ಛಾಾವಣಿ ನಿಲ್ಲಿಸಲಾಗಿದೆ ಈಗ ಗುತ್ತಿಿಗೆದಾರರು ಕಾಮಗಾರಿ ಆರಂಭಿಸಿದ್ದಾಾರೆ.
ಒಟ್ಟಾಾರೆ ಜಿಲ್ಲಾಾ ಕೇಂದ್ರದಲ್ಲಿನ ಜನಪ್ರತಿನಿಧಿಗಳ ನಿರಾಸಕ್ತಿಿಘಿ, ಅಧಿಕಾರಿಗಳ ನಿರ್ಲಕ್ಷದಿಂದಾಗಿ ದೇವದಾಸಿಯರಿಗಾಗಿ ಪುನರ್ವಸತಿ ಸದ್ಯದ ಮಟ್ಟಿಿಗೆ ಕನಸಿನ ಮಾತೆ ಎಂಬಂತಾಗಿದೆ.
ಕೋಟ್-
ಜಿಲ್ಲೆೆಯಲ್ಲಿ ಈಗ ನಡೆಯುತ್ತಿಿರುವ ಸಮೀಕ್ಷೆೆಯಲ್ಲಿ ಸುಮಾರು 3ಸಾವಿರ ದೇವದಾಸಿ ಮುಕ್ತ ಮಹಿಳೆಯರು, ಕುಟುಂಬಗಳಿವೆ. ರಾಯಚೂರು ನಗರದಲ್ಲಿಯೇ 206 ಜನರಿದ್ದು ಈ ಪೈಕಿ ಸುಮಾರು 120 ಜನ ಸಾವನ್ನಪ್ಪಿಿದ್ದಾಾರೆ. ಇವರಿಂದ ವಂತಿಗೆ ಕಟ್ಟಲು ಸಾಧ್ಯವಿಲ್ಲಘಿ. ಎಂಟು ವರ್ಷದಿಂದಲೂ ಅವರ ಪರ ಹೋರಾಟ ಮಾಡಿದರೂ ಸ್ಪಂದನೆ ಸಿಕಿಲ್ಲಘಿ. ಭರವಸೆ ನೀಡಿದ್ದ ಶಾಸಕರು ಎರಡನೇ ಬಾರಿಗೆ ಪುನಾರಾಯ್ಕೆೆಯಾಗಿದ್ದಾಾರೆ ಅವರು ಆಸಕ್ತಿಿ ತೋರಿಸಬೇಕಿದೆ.
— ಕೆ.ಜಿ.ವೀರೇಶ, ಗೌರವಾಧ್ಯಕ್ಷರು,
ದೇವದಾಸಿ ವಿಮೋಚನಾ ಸಂಘ ರಾಯಚೂರು.
ಅರಕ್ಕೇರದ ಮೂರಕ್ಕಿಿಳಿಯದ ಮನೆ ನಿರ್ಮಾಣ * 196 ಮನೆಗಳಲ್ಲಿ 42 ಪೂರ್ಣ, ಉಳಿದವು ಅಪೂರ್ಣ ದೇವದಾಸಿ ಮುಕ್ತ ಮಹಿಳೆಯರ ಪುನರ್ ವಸತಿಗೆ ಗ್ರಹಣ

