ಇಂರ್ದೋ (ಮಧ್ಯಪ್ರದೇಶ) ಜ.1 :
ಭಗೀರಥಪುರದಲ್ಲಿ ಸಂಭವಿಸಿದ ಕಲುಷಿತ ನೀರು ದುರಂತದಲ್ಲಿ ಸಾವನ್ನಪ್ಪಿಿದವರ ಸಂಖ್ಯೆೆ ಗುರುವಾರ 8ಕ್ಕೆೆ ಏರಿದೆ.
26 ರೋಗಿಗಳ ಸ್ಥಿಿತಿ ಗಂಭೀರವಾಗಿದೆ. ಅವರಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆೆ ನೀಡಲಾಗುತ್ತಿಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಳು ಮಂದಿ ಮೃತರಾಗಿದ್ದರು. ಆದರೆ, ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಲು ನಿರಾಕರಿಸಿತ್ತು. ಗುರುವಾರ ದುರಂತದಲ್ಲಿ ಎಂಟು ಜನರು ಸಾವನ್ನಪ್ಪಿಿದ್ದಾರೆ ಎಂದು ಒಪ್ಪಿಿಕೊಂಡಿದೆ. ಆದರೂ, ಈ ಅಂಕಿ ಅಂಶದ ಬಗ್ಗೆೆ ಅನುಮಾನಗಳಿದ್ದು, ಸಾವಿನ ಸಂಖ್ಯೆೆ ಹೆಚ್ಚಿಿರುವ ಸಾಧ್ಯತೆ ಇದೆ.
ಡಿಸೆಂಬರ್ 25 ಮತ್ತು 26 ರಂದು ಭಗೀರಥಪುರ ಪ್ರದೇಶಕ್ಕೆೆ ಕಲುಷಿತ ನೀರು ಪೂರೈಸಲಾಗಿದೆ ಎಂದು ಜನರು ಆರೋಪಿಸಿದ್ದಾರೆ. ಇದರಿಂದ ಅನೇಕ ಜನರು ವಾಂತಿ, ಅತಿಸಾರ ಭೇದಿ ಮತ್ತು ಇತರ ಕಾಯಿಲೆಗಳಿಗೆ ತುತ್ತಾಾಗಿದ್ದಾರೆ. ವಿವಿಧ ಆಸ್ಪತ್ರೆೆಗಳಿಗೆ ಚಿಕಿತ್ಸೆೆಗೆ ದಾಖಲಾದ ನಂತರ ಸಾವುಗಳು ವರದಿಯಾಗಿವೆ.

