ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.20:
ನಗರದ ಫ್ರೀಡಂ ಪಾರ್ಕನಲ್ಲಿ ಸಿ.ಐ.ಟಿ.ಯು.ಸಂಯೋಜಿತ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ ವಿವಿಧ ಬೇಡಿಕೆಗಳಿಗಾಗಿ ಅನಿರ್ಧಿಷ್ಟ ಧರಣಿ ಸತ್ಯಾಾಗ್ರಹ ಹಮ್ಮಿಕೊಳ್ಳಲಾಗಿತ್ತು.
ಧರಣಿ ನಿರತ ಸ್ಥಳಕ್ಕೆೆ ಗ್ರಾಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ಆಯುಕ್ತಾಾಲಯದ ನಿರ್ದೇಶಕರಾದ ವಾಣಿ ಹಾಗೂ ಆಡಳಿತ ವಿಭಾಗದ ಚಂದ್ರಪ್ಪ ಮತ್ತು ನವೀನ ಆಗಮಿಸಿ ಮನವಿ ಸ್ವೀಕರಿಸಿ ಧರಣಿ ನಿರತರೊಂದಿಗೆ ಮಾತುಕತೆ ಜರುಗಿತು ಅಧಿಕಾರಿಗಳು ಕನಿಷ್ಠ ವೇತನ, ಬಡ್ತಿಿ,ನಿವೃತ್ತಿಿ ವೇತನ ಸೇವಾ ಹಿರಿತನದ ವೇತನ,ಸೇರಿದಂತೆ ಹದಿನೇಳು ಬೇಡಿಕೆಗಳ ಬಗ್ಗೆೆ ಸ್ಪಂದಿಸದೆ ಇರುವುದರಿಂದ ಮಾತುಕತೆ ವಿಲವಾಗಿ ನಮ್ಮ ಬೇಡಿಕೆಗಳು
ಈಡೇರುವವರಿಗೆ ನಾವು ಈ ಜಾಗದಿಂದ ಕದಲುವುದಿಲ್ಲ ಎಂದು ಅಧಿಕಾರಿಗಳಿಗೆ ಸಂಘದ ರಾಜ್ಯದ ಮುಖಂಡರು ಸ್ವಷ್ಟಪಡಿಸಿದ್ದರಿಂದ ಅನಿರ್ದಿಷ್ಟ ಧರಣಿ ಮುಂದುವರಿಯಿತು.
ಗ್ರಾಾಮ ಪಂಚಾಯತ ನೌಕರರ ಪ್ರಮುಖ ಬೇಡಿಕೆಗಳಾದ ಕನಿಷ್ಠ ವೇತನ ಕೊಡಬೇಕು.ಅರ್ಹರಿರುವ ಸಿಬ್ಬಂದಿಗಳಿಗೆ ಬಡ್ತಿಿ ನೀಡಬೇಕು, ರೇಖಾ ಸ್ವಚ್ಚವಾಹಿನಿ ಸಿಬ್ಬಂದಿಗಳಿಗೆ ಒಡಂಬಡಿಕೆ ಕೈಬಿಟ್ಟು ಗ್ರಾಾಮ ಪಂಚಾಯತ ಸಿಬ್ಬಂದಿ ಎಂದು ಪರಿಗಣಿಸಬೇಕು ಎನ್ನುವುದು ಸೇರಿದಂತೆ ಹದಿನೇಳು ಬೇಡಿಕೆಗಳು ಇದ್ದವು.
ಪ್ರತಿಭಟನೆ ನೇತೃತ್ವವನ್ನು ರಾಜ್ಯಾಾಧ್ಯಕ್ಷರಾಗ ಎಂ.ಬಿ.ನಾಡಗೌಡ,ಪ್ರಧಾನ ಕಾರ್ಯದರ್ಶಿ ಜಿ.ಎಂ.ಜೈನಖಾನ್ ಮುಖಂಡರಾದ ಆರ್.ಎಸ್.ಬಸವರಾಜ, ಜಿ.ರಾಮಕೃಷ್ಣ ಆಯ್.ಬಿ.ಈಳಗೇರಾ ಮಲ್ಲಿಕಾರ್ಜುನ ಬಳಿಚಕ್ರ ಸ್ವಚ್ಚವಾಹಿನಿ ಸಿಬ್ಬಂದಿ ರಾಜ್ಯ ಮುಖಂಡರು ಉಪಸ್ಥಿಿತರಿದ್ದರು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಇಪ್ಪತ್ತೈದು ಸಾವಿರಕ್ಕೂ ಅಧಿಕ ಸಿಬ್ಬಂದಿ ಹೋರಾಟದಲ್ಲಿ ಭಾಗವಹಿಸಿದ್ದರು.
ಗ್ರಾ.ಪಂ. ನೌಕರರ ಜೊತೆ ಸಂಧಾನ ವಿಲ, ಮುಂದುವರೆದ ಧರಣಿ

