ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.11: ಕನ್ನಡ ನಾಡಿಗೆ ಲೇಖಕಿಯರ ಕೊರತೆ ಇಲ್ಲ. ಹಿಂದಿನಿಂದಲೂ ಅನೇಕ ಲೇಖಕಿಯರು ಬರೆಯುತ್ತಾ ಬಂದಿದ್ದಾರೆ , ಅವರ ಕೊಡುಗೆ ಅಪಾರವಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ ಕೆ ರವಿ ಹೇಳಿದರು.
ಕೊಪ್ಪಳ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಲೇಖಕಿಯರ ಸಂಘದ ಪದಗ್ರಹಣ ಹಾಗು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು ಕನ್ನಡದ ಭಾಷೆ, ಸಮಾಜದ ಬೆಳವಣಿಗೆ ಕನ್ನಡ ಲೇಖಕಿಯರು ಕೆಲಸ ಮಾಡಿದ್ದಾರೆ. ಇಂದು ಮಾಧ್ಯಮ ಕ್ಷೇತ್ರ ವಿಸ್ತಾರವಾಗಿದೆ. ಆದರೆ ಹಿಂದಿನ ಕಾಲದಲ್ಲಿ ನಾಗಮಣಿ ಎಸ್ ರಾವ್ ಅಕಾಶವಾಣಿಯಲ್ಲಿ ಕೆಲಸ ಮಾಡಿ ಹೆಸರುವಾಸಿಯಾಗಿದ್ದಾರೆ.
ದೇಶದಲ್ಲಿ ಈಗಲೂ ಯರೋ ಮನೆಗೆ ಹೋಗುವ ಸೋಸೆಗೆ ಯಾಕೆ ಓದಿಸಬೇಕೆಂಬ ಮನೋಭಾವವಿದೆ. ಮಹಿಳೆಯರು ಇಡೀ ಕುಟುಂಬದ ಜವಾಬ್ದಾರಿ ವಹಿಸಿಕೊಂಡು ನಂತರ ಕಚೇರಿ ಕೆಲಸ ಮಾಡಬೇಕು. ಇಂದಿಗೂ ಭಾರತೀಯ ಮಹಿಳೆಯರು ಸಬಲೀಕರಣವಾಗಬೇಕು ಎಂದರು.
ಅನಸೂಯಾ ಜಾಗರೀದಾರ ಪ್ರಾರ್ಥಿಸಿದರು. ಶ್ರೀಮತಿ ವಿಜಯಲಕ್ಷ್ಮಿ ಕೋಟಗಿ ಸ್ವಾಗತಿಸಿದರು. ಸಾವಿತ್ರಿ ಮುಜಮದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಂದಿನ ಯುವಪೀಳಿಗೆ ಹೆಚ್ಚು ಓದುವ ಬರೆಯುವ ಹವ್ಯಾಸ ಬೆಳೆಸಬೇಕು. ಇಂದಿನ ಇಂಟರ್ನೆಟ್ ಯುಗದಲ್ಲಿ ಯುವ ಪೀಳಿಗೆಯನ್ನು ಓದುವ ಹವ್ಯಾಸ ಬೆಳಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಜಿಲ್ಲಾಧ್ಯಕ್ಷೆ ಮುಮ್ತಾಜ ಬೇಗಂ, ಹನುಮಾಕ್ಷಿ ಗೋಗಿ, ಸಾವಿತ್ರಿ ಮುಜಮದಾರ, ಅನಸೂಯ ಜಾಗರಿದಾರ,