ಸುದ್ದಿಮೂಲ ವಾರ್ತೆ
ಮೈಸೂರು, ಅ.13:ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಜರಿದ ಕ್ಷಣದಲ್ಲೇ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅವರು, ಈ ಮಾತು ನನ್ನದು ಅಲ್ಲ ಕುವೆಂಪು ಅವರದ್ದು ಎಂದು ಹೇಳಿದರು.
ಶುಕ್ರವಾರ ಪುರಭವನದ ಬಳಿ ಮಹಿಷ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ಮಹಿಷ ದಸರಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ತಮ್ಮ ಭಾಷಣದೂದ್ದಕ್ಕೂ ಹಿಂದು ಧರ್ಮದ ವಿರುದ್ಧ ವಾಮಗೋಚರ ವಾಗ್ದಾಳಿ ನಡೆಸಿದರು
ಭಗವಾನ್ ಅವರ ವಾಗ್ಜರಿ ಹರಿದಿದ್ದು ಹೀಗೆ
ಒಕ್ಕಲಿಗರ ಸಂಸ್ಕೃತಿಯನ್ನು ಅರಿತಿಲ್ಲ. ಅವರ ಸಂಸ್ಕೃತಿ ಹೀನರು, ಇದನ್ನು ನಾನು ಹೇಳಿಲ್ಲ. ರಾಷ್ಟ್ರಕವಿ ಕುವೆಂಪು ಅವರು ಹೇಳಿದ್ದಾರೆ. ಸತ್ಯ ಹೇಳಿದರೆ ಹೊಡೆಯಲಿಕ್ಕೆ ಬರುತ್ತಾರೆ,ನಿಜ ಹೇಳಿದವರನ್ನು ಯಾರು ಬಿಡಲ್ಲ.ಆದರೇ ನಿಜ ಹೇಳಿಯೇ ಸಾಯಬೇಕು.
ಬುದ್ಧ ಗುರುಗಳು ಜ್ಞಾನವನ್ನು ಕೊಟ್ಟಿದ್ದಾರೆ.ವೈದಿಕರು ಅಜ್ಞಾನವನ್ನು ಸಮಾಜಕ್ಕೆ ಕೊಡುತ್ತಿದ್ದಾರೆ. ಜನಿವಾರದಿಂದ ಜಾತಿ ಗುರುತಿಸುತ್ತಾರೆ .ಹಾಕದವನು ಒಂದು, ಹಾಕಿರೋನು ಒಂದು. ಕೈಗೆ ಕಾಲಿಗೆ ಜಾತಿ ಇಟ್ಟಿರೋದು ಹಿಂದೂ ಧರ್ಮ. ಹಿಂದೂ ಧರ್ಮ ನಮ್ಮ ಧರ್ಮ ಅಲ್ಲ. ನಮ್ಮ ಧರ್ಮ ಬೌದ್ಧ ಧರ್ಮ. ಬ್ರಾಹ್ಮಣರು ವೈದಿಕರು ಬೇರೆ ದೇಶದಿಂದ ಬಂದಿರೋರು. 2 ಸಾವಿರ ವರ್ಷದಿಂದ ಇವರು ಬೇರೆ ಅವರಿಗೆ ಸಂಸ್ಕೃತ ಕಲಿಸಲಿಲ್ಲ.
ಶೂದ್ರನನ್ನು ದೇವರು ಸೃಷ್ಠಿ ಮಾಡಿರೋದೆ ಬ್ರಾಹ್ಮಣರ ಸೇವೆ ಮಾಡಲು. ಇಂತಹ ಧರ್ಮ ಬೇಕಿಲ್ಲ. ಎಲ್ಲರೂ ದೇವರ ಬಗ್ಗೆ ದೊಡ್ಡ ಚಿಂತೆ ಮಾಡ್ತಾರೆ. ದೇವರು ಯಾಕೆ ಕೊರೋನಾ ತಡೆಯಲಿಲ್ಲ. ದೇವಸ್ಥಾನದಲ್ಲಿ ಕಳ್ಳತನವಾಗುವುದನ್ನು ದೇವರು ಯಾಕೆ ತಡೆಯಲಿಲ್ಲ. ದೇವರೆ ಕಳ್ಳನಾಗಿದ್ದಾನೋ ಏನೋ. ಎಲ್ಲರೂ ರಾಮ ರಾಜ್ಯದ ಬಗ್ಗೆ ಹೇಳ್ತಾರೆ. 11 ಸಾವಿರ ವರ್ಷ ರಾಮ ರಾಜ್ಯಭಾರ ಎಂದು ಹೇಳ್ತಾರೆ. ವಾಸ್ತವವಾಗಿ ಅದು 11 ವರ್ಷ.
ರಾಮ ತುಂಬು ಗರ್ಭಿಣಿಯನ್ನು ಕಾಡಿಗೆ ಹೋಡಿಸಿದ. ಆಕೆ ಏನು ಆದಳು ಅಂತ ರಾಮ ಕೇಳಲಿಲ್ಲ.
ಅಶ್ವಮೇಧ ಯಾಗದಲ್ಲಿ ಮಕ್ಕಳು ಹೆಂಡತಿ ಗೊತ್ತಾಗೋದು. 15 ವರ್ಷ ಹೆಂಡತಿ ಮಕ್ಕಳನ್ನು ಕೇಳದೇ ಇರೋದು ಈ ರಾಮ ಎಂತವನು. ಶೂದ್ರರು ತಲೆ ಬೆಳೆಸಿಕೊಳ್ಳದೇ ಬ್ರಾಹ್ಮಣರ ಬಳಿ ಹೋಗ್ತಾರೆ. ರಾಮ ರಾಜ್ಯ ಎಂದರೆ ಶೂದ್ರರನ್ನು ಕೊಲ್ಲುವ ರಾಜ್ಯ ಎಂದು ಭಗವಾನ್ ಹೇಳಿದರು.