ಸುದ್ದಿಮೂಲ ವಾರ್ತೆ ಬೀದರ್, ಡಿ.07:
ಔರಾದ್ ಶಾಸಕ ಪ್ರಭು ಚವ್ಹಾಾಣ್ ಸರ್ಕಾರಿ ಜಮೀನು ಕಬಳಿಸಿದ್ದಾರೆ ಎನ್ನಲಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಔರಾದ್ನ ಮುಖಂಡ ದೀಪಕ್ ಪಾಟೀಲ ಚಾಂದೋರಿ ಹೂಡಿರುವ ದಾವೆಯ ಹಿನ್ನೆೆಲೆಯಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಾಯಾಲಯವು, ಬೀದರ್ ತಾಲ್ಲೂಕಿನ ಕೊಳಾರ(ಬಿ) ಗ್ರಾಾಮದ ಸರ್ವೇ ಸಂಖ್ಯೆೆ 102/*/* ಹುಲ್ಲುಗಾವಲು ಅಥವಾ ಬಿ’ ಖರಾಬ್ ಜಮೀನು ಎಂಬ ಆರೋಪಗಳ ಬಗ್ಗೆೆ ವರದಿ ಸಲ್ಲಿಕೆಗೆ ಡಿ. 1 ರಂದು ಬೀದರ್ ಜಿಲ್ಲಾಧಿಕಾರಿಗೆ ಮರು ನಿರ್ದೇಶನ ನೀಡಿದೆ.
ಸರ್ವೇ ಸಂಖ್ಯೆೆ 102 ಹುಲ್ಲುಗಾವಲು ಅಥವಾ ಸುಳ್ಳೇ ಎನ್ನುವುದನ್ನು ಬಹಿರಂಗ ಪಡಿಸಬೇಕು. ಈ ಕುರಿತು ಗ್ರಾಾಮ ನಕ್ಷೆಯ ನೈಜತೆ ಸ್ಪಷ್ಟಪಡಿಸಬೇಕು. ಬೀದರ್ ತಹಶೀಲ್ದಾಾರರು ಉಪ ವಿಭಾಗಾಧಿಕಾರಿಗೆ ಬರೆದ ಪತ್ರ, ಎಡಿಎಲ್ಆರ್ ಹಾಗೂ ಎಡಿಎಲ್ಆರ್. ತಹಶೀಲ್ದಾಾರರೊಂದಿಗಿನ ಪತ್ರ ವ್ಯವಹಾರ ನಿಜವಾದವೇ ಅಥವಾ ರಚಿಸಲಾದ ದಾಖಲೆಗಳೇ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ತಿಳಿಸಿದೆ.
ಪ್ರತಿವಾದಿ ಪ್ರಭು ಅವರು ಆಸ್ತಿಿ ಖರೀದಿಸಿದ್ದಾರೆಯೇ, ಮಾರಾಟ ಪತ್ರ ನೋಂದಾಯಿಸಿದ್ದಾರೆಯೇ ಎನ್ನುವುದರ ಕುರಿತು ವಿವರವಾದ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ.
ಎಚ್.ಆರ್. ಮಹಾದೇವ ಅವರು ಜಿಲ್ಲಾಧಿಕಾರಿ ಆಗಿದ್ದಾಗ ಸರ್ವೇ ಸಂಖ್ಯೆೆ 102 ರಲ್ಲಿರುವ ಜಮೀನು ಸರ್ಕಾರಕ್ಕೆೆ ಸೇರಿದ್ದು ಎಂದು ಆದೇಶ ಹೊರಡಿಸಿದ್ದರು. ಸರ್ಕಾರಿ ಜಮೀನು ಪಹಣಿಯಲ್ಲಿ ಖಾಸಗಿ ವ್ಯಕ್ತಿಿ ಹೆಸರಲ್ಲಿ ಹೇಗೆ ಬಂದಿತು, ಹೇಗೆ ಮಾರಾಟವಾಯಿತು ಎಂಬ ಬಗ್ಗೆೆ ತನಿಖೆ ನಡೆಸಿ ವರದಿ ಸಲ್ಲಿಸಲು ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ರಾಜಕೀಯ ಪ್ರಭಾವದ ಕಾರಣದಿಂದಾಗಿ ಈ ಕುರಿತು ತನಿಖೆ ಮುಂದುವರಿಯಲಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ತಾವು ವರ್ಷದ ಹಿಂದೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ ನಂತರ ಅವರು ಮತ್ತೆೆ ತನಿಖೆಗೆ ಆದೇಶಿಸಿದ್ದರು. ತನಿಖೆ ನಡೆಸಿದ ಬೀದರ್ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾಾರ್ ಜಮೀನು ಸರ್ಕಾರಕ್ಕೆೆ ಸೇರಿದ್ದು ಎಂದು ವರದಿ ಸಲ್ಲಿಸಿದ್ದರು. ಬಳಿಕ ತಾವು ನ್ಯಾಾಯಾಲಯದ ಮೋರೆ ಹೋದ ನಂತರ ನ್ಯಾಾಯಾಲಯ ಪ್ರಕರಣದ ಸಂಬಂಧ ವರದಿ ಸಲ್ಲಿಸದ ಕಾರಣಕ್ಕೆೆ ಬೀದರ್ ಜಿಲ್ಲಾಧಿಕಾರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಮೂಲಕ ರೂ. 1 ಲಕ್ಷ ಭದ್ರತೆಯ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಲು ಆದೇಶ ಹೊರಡಿಸಿತು ಎಂದು ತಿಳಿಸಿದ್ದಾರೆ.
ಅದಾದ ಬಳಿಕ ಹಿಂದಿನ ಬೀದರ್ ತಹಶೀಲ್ದಾಾರ್ ಡಿ.ಜಿ. ಮಹಾತ್ ಅವರು ರಾಜಕೀಯ ಪ್ರಭಾವ ಹಾಗೂ ಹಣದ ವ್ಯವಹಾರಕ್ಕೆೆ ಒಳಗಾಗಿ ಜಮೀನು ಖಾಸಗಿ ವ್ಯಕ್ತಿಿಗೇ ಸೇರಿದ್ದಾಗಿದೆ ಎಂದು ವರದಿ ನೀಡಿದ್ದರು. ಈ ಕಾರಣ ನ್ಯಾಾಯಾಲಯ ಸ್ಪಷ್ಟ ವರದಿಗೆ ಜಿಲ್ಲಾಧಿಕಾರಿಗೆ ಮರು ನಿರ್ದೇಶನ ಕೊಟ್ಟಿಿದೆ ಎಂದು ಹೇಳಿದ್ದಾರೆ.
ಶಾಸಕ ಚವ್ಹಾಣ್ ವಿರುದ್ಧ ಭೂ ಕಬಳಿಕೆ ಆರೋಪ : ವರದಿಗೆ ಜಿಲ್ಲಾಡಳಿತಕ್ಕೆ ನ್ಯಾಯಾಲಯ ಮರು ನಿರ್ದೇಶನ

