ಸುದ್ದಿಮೂಲ ವಾರ್ತೆ ರಾಯಚೂರು, ಜ.29:
ಹಿರಿಯ ಕಾರ್ಮಿಕ ನಾಯಕ ಅನಂತ್ ಸುಬ್ಬರಾವ್ ನಿಧನಕ್ಕೆೆ ಸಿಪಿಐಎಂ ಜಿಲ್ಲಾ ಸಮಿತಿಯ ತೀವ್ರ ಸಂತಾಪ ಸಲ್ಲಿಸಿದೆ.
ರಾಜ್ಯದ ಕಾರ್ಮಿಕ ಚಳವಳಿಯ ಹಿರಿಯ ನಾಯಕರು, ಎಐಟಿಯುಸಿ ರಾಜ್ಯಾಾಧ್ಯಕ್ಷರಾಗಿ ಬಹಳ ದೀರ್ಘಕಾಲ ಸೇವೆ ಸಲ್ಲಿಸಿದ್ದ ಹಿರಿಯ ಕಮ್ಯುನಿಸ್ಟ್ ನಾಯಕ ಅನಂತ್ ಸುಬ್ಬರಾವ್ ಅವರ ನಿಧನ ರಾಜ್ಯದ ಕಾರ್ಮಿಕ ಚಳವಳಿಗೆ ಹಾಗೂ ಪ್ರಜಾಪ್ರಭುತ್ವ ಚಳವಳಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಜಿಲ್ಲಾಾ ಸಮಿತಿಯ ಸಂಚಾಲಕ ಕೆ.ಜಿ.ವೀರೇಶ ನುಡಿನಮನ ಸಲ್ಲಿಸಿದ್ದಾಾರೆ.
ಸುಮಾರು 6 ದಶಕಗಳಿಗೂ ಸುದೀರ್ಘ ಕಾಲದಿಂದ ಸಂಪೂರ್ಣವಾಗಿ ತಮ್ಮ ಇಡೀ ಜೀವನವನ್ನು ಕಾರ್ಮಿಕರನ್ನು ಸಂಘಟಿಸಲು ಹಾಗೂ ಅವರ ಹಕ್ಕುಗಳಿಗಾಗಿ ಹೋರಾಡಲು ದಣಿವರಿಯದೇ ದುಡಿದಿದ್ದಾರೆ. ಕಡು ಕಷ್ಟದಲ್ಲಿ ಇದ್ದ ಸಾರಿಗೆ ಕಾರ್ಮಿಕರನ್ನು ಸಂಘಟಿಸಿದ್ದ ಕಾಂ.ಅನಂತ ಸುಬ್ಬರಾವ್ ರವರು ಕೆಎಸ್ಆರ್ಟಿಸಿ ನೌಕರರ ೆಡರೇಷನ್ ರಾಜ್ಯಾಾಧ್ಯಕ್ಷರಾಗಿ ಬಹಳ ದೀರ್ಘಕಾಲ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿದ್ದಾಾರೆ.

