ಸುದ್ದಿಮೂಲವಾರ್ತೆ
ಕೊಪ್ಪಳ ಮೇ 30: ಕಳೆದ ಬಾರಿಯಂತೆ ಈ ಭಾರಿ ಬಜೆಪಿ ಮುಖಂಡರು ಮಾಡಿರುವ ತಪ್ಪಿನಿಂದಾಗಿ ಕೊಪ್ಪಳದಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ ಎಂದು ಜೆಡಿಎಸ್ ಪತಾಜಿತ ಅಭ್ಯರ್ಥಿ ಸಿ ವಿ ಚಂದ್ರಶೇಖರ ಆರೋಪಿಸಿದರು.
ಅವರು ಇಂದು ಜೆಡಿಎಸ್ ಪಕ್ಷದ ಕಾರ್ಯಕರ್ತರ ಅಭಿನಂದನಾ ಸಮಾರಂಭ ಮಾತನಾಡಿದರು.ಬಿಜೆಪಿ ಸೋತಿದ್ದಕ್ಕೆ ಆತ್ಮಲೋಕನ ಮಾಡಿದ್ದಾರೆ. ಬಿಜೆಪಿಯವರದು ವಿಲ್ಲದೆ ಸಭೆಯಾಗಿತ್ತು. ಆದರೆ ನಾನು ಸೋತರು ಅಭಿನಂದನಾ ಸಭೆ ಮಾಡಿದ್ದೇನೆ.
ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಕೇವಲ ಟೀಕೆ ಮಾಡೋದರಲ್ಲಿ ಅರ್ಥವಿಲ್ಲ. ನಾನು ಋಣಾತ್ಮಕ ವಿಚಾರ ಮಾಡೋದಿಲ್ಲ. ನಾನು ಯಾರನ್ನು ದೋಷ ಮಾಡೋದಿಲ್ಲ. ಗ್ರಾಮಗಳಲ್ಲಿ ಯಾರ ಕೆಲಸ ಮಾಡಿದ್ದಾರೆ. ಮಾಡಿಲ್ಲ ಎಂದು ಗೊತ್ತಿದೆ. 46 ಮತಗಳನ್ನು ಹಾಕಿಸಿದವರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು.
ನನಗೆ ಟಿಕೆಟ್ ಕೊಟ್ಟರೆ ಐದು ಕ್ಷೇತ್ರ ಗೆಲ್ಲಿಸುತ್ತೇನೆ ಎಂದಿದ್ದವರಿಗೆ ಜನ ಪಾಠ ಕಲಿಸಿದ್ದಾರೆ. ಶಾಸಕರಿಗೆ ವೋಟು ಹಾಕಿದ್ದು. ಬಿಜೆಪಿಯವರ ತಪ್ಪು ನಿರ್ಧಾರ. ಮುರ್ಖತನದಿಂದ ಕಾಂಗ್ರೆಸ್ ಗೆದ್ದಿದೆ. ನಾನು 20 ದಿವಸದಲ್ಲಿ ಸಂಸದರಿಗೆ, ಶಾಸಕರಿಗೆ ನೀರು ಕುಡಿಸಿದ್ದೇನೆ. ನೀವು ಗೆದ್ದಿದ್ದರೆ ಗ್ಯಾರಂಟಿ ಕಾರ್ಡ್ , ಗ್ಯಾರಂಟಿ ಘೋಷಣೆ ಜಾರಿಯಾಗದಿದ್ದರೆ ಬೀದಿಯಲ್ಲಿ ಹೋರಾಟ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಲ್ಕೋಡ ಹನುಮಂತಪ್ಪ ಸಿ ವಿ ಚಂದ್ರಶೇಖರ ನಿಮ್ಮ ಮನಸ್ಸು ಗೆಲ್ಲುವ ಕೆಲಸ ಮಾಡಿದ್ದಾರೆ. ಸೋಲು ಸಹಜ, ಪ್ರಜಾಪ್ರಭುತ್ವ ಎರಡೂ ಇರಬೇಕು. ಆರು ತಿಂಗಳ ಮೊದಲೇ ಜೆಡಿಎಸ್ ಗೆ ಬಂದಿದ್ದರೆ ಅವರ ಗೆಲ್ಲುತ್ತಿದ್ದರು.
ಸೋಲನ್ನು ಸ್ಪರ್ಧಾತ್ಮಕ ತೆಗೆದುಕೊಳ್ಳಬೇಕು. ಕಾಂಗ್ರೆಸ್ ಗೆಲ್ಲಿಸಬೇಕೆಂದು ಗೆಲ್ಲಿಸಿಲ್ಲ. ಬಿಜೆಪಿಯಿಂದ ಬೇಸತ್ತು ಗೆಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಿ ವಿಸಿಯನ್ನು ಬಹುಮತದಿಂದ ಗೆಲ್ಲಿಸುತ್ತಿರಿ. ಲೋಕಸಭೆ ಸಿದ್ದತೆ ಮಾಡಿಕೊಳ್ಳಬೇಕು. ನೀವು ಲೋಕಸಭೆಗೆ ತಯಾರಾಗಬೇಕು ಎಂದರು.
ಕುಮಾರಸ್ವಾಮಿ ಬಂದ ಮೇಲೆ ರೈತರ ಸಾಲ ಮನ್ನಾ, ರೈತರಿಗೆ ರಿಯಾಯತಿ ನೀಡಿದ್ದು. ದೇವೇಗೌಡರು. ಇವರದೇ ಗ್ಯಾರಂಟಿ ಕಾಣೋದಿಲ್ಲ. ಇನ್ನೇನು ಗ್ಯಾರಂಟಿ ಕೊಡ್ತಾರೆ. ಲೋಡ ಶೆಡ್ಡಿಂಗ್ ಮಾಡಿ ಅದೇ ಹಣದಲ್ಲಿ ವಿದ್ಯುತ್ ಕೊಡುತ್ತಾರೆ. ವೋಟಿಗಾಗಿ ಏನೇನೊ ಹೇಳಿದ್ದಾರೆ. ಆ ಅಚ್ಚೇದಿನ ಹೋಯಿತು. ಈಗ ನಿಮ್ಮ ಅಚ್ಚೇದಿನ್ ಎಲ್ಲಿದೆ. ಇವರಿಂದ ಗ್ಯಾರಂಟಿ ಕೊಡೋಕೆ ಆಗೋದಿಲ್ಲ. ಹೆಣ್ಣುಮಕ್ಕಳನ್ನು ಬಸ್ ಮುಂದೆ ಕುಳ್ಳಿರಿಸಿ ಅವರನ್ನು ಬಸ್ ನಲ್ಲಿ ಫ್ರೀ ಕಳುಹಿಸಿ ಎಂದು ಕಾರ್ಯಕರ್ತರಿಗೆ ಹೇಳಿದರು.
ಈ ಸಂದರ್ಭದಲ್ಲಿ ಸುರೇಶ ಭೂಮರಡ್ಡಿ ಮಾತನಾಡಿ 24 ದಿವಸದಲ್ಲಿ ಕಾರ್ಯಕರ್ತರ ಒಂದಗೂಡಿಸುವ ಕೆಲಸ ಮಾಡಲಾಯಿತು. ನಾಯಕತ್ವ ವಹಿಸಿದವರಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಕಾರ್ಯಕರ್ತರು ಮನ್ನಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಎಂಎಲ್ಎ ಆಗುತ್ತಾರೆ.ಚುನಾವಣೆಯ ನಂತರ ಕಾರ್ಯಕರ್ತರೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ಸಾದಿಕ ಅತ್ತಾರ 45 ಸಾವಿರ ಮತಗಳನ್ನು ಬಂದಿರೋದು ಕಾರ್ಯಕರ್ತರಿಂದ. ಎಲ್ಲಿಯೋ ಒಂದು ಕಡೆ ಎಡವಿದ್ದೇವೆ. ಚರ್ಚಿಸಿ ಸರಿಪಡಿಸೋಣ. ಸಣ್ಣ ತಪ್ಪಿನಿಂದ ಸೋತಿದ್ದೇವೆ, ಸತ್ತಿಲ್ಲ ಎಂದರು.
ಮೂರ್ತೆಪ್ಪ ಹಲಗೇರಿ ಮಾತನಾಡಿ 35 ವರ್ಷದ ರಾಜಕಾರಣಿಗಳನ್ನು ಮಣಿಸಿದ್ದೇವೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಭಾವುಟ ಹಾರಿಸೋಣ. ಜಿಪಂ, ತಾಪಂ ಜಯಗಳಿಸಿ. ಸೋಲೆ ಗೆಲುವಿನ ಮೂಲ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ.ಮಂಜುನಾಥ ಸೊರಟೂರ ಮಾತನಾಡಿದರು.
ವೇದಿಕೆಯಲ್ಲಿ ಪ್ರದೀಪಗೌಡ, ಈಶಪ್ಪ ಮಾದನೂರು, ರುದ್ರಯ್ಯ ಹಿರೇಮಠ.ಚನ್ನಪ್ಪ ಮುತ್ತಾಳ. ಡಾ ಮಹೇಂದ್ರ ಕಿಂದ್ರಿ ಚನ್ನಪ್ಪ ಕೋಟ್ಯಾಳ ಇದ್ದರು.