ಸುದ್ದಿಮೂಲ ವಾರ್ತೆ
ಕೊಪ್ಪಳ,ಆ.22: ಇತ್ತೀಚಿಗೆ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರ ನೇತ್ರತ್ವದಲ್ಲಿ ಸಭೆ ನಡೆಸಿದ್ದು. ಅದರಲ್ಲಿ ಶಾಸಕ ಜಿ ಟಿ ದೇವೇಗೌಡರ ಅಧ್ಯಕ್ಷತೆಯಲ್ಲಿ ಜೆಡಿಎಸ್ ಕೋರ್ ಕಮಿಟಿ ರಚಿಸಲಾಗಿದೆ. ಅದರಲ್ಲಿ ನನಗೆ ಸದಸ್ಯರನ್ನಾಗಿ ನನ್ನನ್ನು ನೇಮಿಸಿದ್ದು ಸಂತೋಷವಾಗಿದೆ ಎಂದು ಸಿ ವಿ ಚಂದ್ರಶೇಖರ ಹೇಳಿದರು.
ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ಕಲ್ಯಾಣ ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿ, ರಾಜ್ಯ ಸರಕಾರದ ವೈಫಲ್ಯ ಪ್ರತಿಭಟನೆ ಹಮ್ಮಿಕೊಳ್ಳಲು ತಿರ್ಮಾನಿಸಲಾಗಿದೆ.
ಬರುವ ದಿನಗಳಲ್ಲಿ ವಿಭಾಗವಾರು ಪಕ್ಷದ ಕಾರ್ಯಕರ್ತರನ್ನು ಹುರುದುಂಬಿಸಲು ಸಮಾವೇಶ ಮಾಡಲಾಗುವುದು. ರಾಜ್ಯ ಅಧ್ಯಕ್ಷ ಸಿ ಎಂ ಇಬ್ರಾಹಿಂ ಹೊರತು ಪಡಿಸಿ ಉಳಿದ ಪದಾಧಿಕಾರಿ ಬದಲಾವಣೆ ಮಾಡಲಾಗುವುದು ಎಂದರು.
ಜೆಡಿಎಸ್ ಸೋಲಿಗೆ ಕಾರಣ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಘೋಷಣೆ. ಹಳೆ ಮೈಸೂರು ಭಾಗಕ್ಕೆ ಬಿಜೆಪಿ ಒತ್ತುಕೊಟ್ಟಿದ್ದರಿಂದ ಅಲ್ಲಿ ಜೆಡಿಎಸ್ ಗೆ ಸೋಲಾಗಿದೆ. ಬಿಜೆಪಿ ತಪ್ಪು ನಿರ್ಧಾರ ಹಾಗು ಮುರ್ಖತನದಿಂದ ಕಾಂಗ್ರೆಸ್ ಗೆಲುವ ಆಗಲು ಕಾರಣವಾಗಿದೆ.
ಕಾಂಗ್ರೆಸ್ ಸರಕಾರ ಬಂದರೆ ಬರಗಾಲ ಬರುತ್ತೆ. ಈಗ ಬರವಿದೆ. ರೈತರಿಗೆ ಸಮಸ್ಯೆಯಾಗಿದೆ. ಈ ಸಂದರ್ಭದಲ್ಲಿ ಅಭಿವೃದ್ಧಿ ಗೆ ಒತ್ತು ನೀಡದೆ ವರ್ಗಾವಣೆಯಲ್ಲಿ ಹಣ ಮಾಡುವ ಕಾರ್ಯದಲ್ಲಿ ಮುಂದಾಗಿದೆ ಎಂದು ಆರೋಪಿಸಿದರು.
ರಾಯರಡ್ಡಿ, ಬಿ ಆರ್ ಪಾಟೀಲರು ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿದೆ ಎಂದಿದ್ದಾರೆ.
ಕೊಪ್ಪಳದಲ್ಲಿ ಮೂರು ಭಾರಿ ಶಾಸಕರಾದರೂ ಕೆ ರಾಘವೇಂದ್ರ ರಸ್ತೆಗಳು ಸರಿ ಇಲ್ಲ. ರೈತರಿಗೆ ನೀರು. ಯುವಕರಿಗೆ ಉದ್ಯೋಗ ನೀಡಲು ಆಗಲಿಲ್ಲ. ಅವರು ಶಾಸಕರಾಗಲು ಬಿಜೆಪಿಯ ಸಂಸದರಾಗಿರುವ ಸಂಗಣ್ಣ ಕರಡಿ ಕಾರಣ. ಸಂಗಣ್ಣ ಬ್ಲಾಕಮೇಲ್ ರಾಜಕಾರಣ. ಈಗ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳುತ್ತಿದ್ದಾರೆ. ಅವರಿಂದಲೇ ಬಿಜೆಪಿಯನ್ನು ಸಂಸದರು ಬಲಿ ಕೊಟ್ಟಿದ್ದಾರೆ ಎಂದರು.
ಬಿಜೆಪಿ ಪಕ್ಷ ಈಗ ತಳಮಟ್ಟಕ್ಕೆ ಹೋಗಿದೆ. ಬ್ಲಾಕ್ ಮೇಲ್ ರಾಜಕಾರಣಕ್ಕೆ ಬಲಿಯಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಪಕ್ಷ ಸೂಚಿಸಿದರೆ ನಾನು ಲೋಕಸಭೆಗೆ ಸ್ಪರ್ಧಿಸುತ್ತೇನೆ.
ಈ ಸಂದರ್ಭದಲ್ಲಿ ಡಾ ಮಹೇಶ ಗೋವನಕೊಪ್ಪ, ವೀರೇಶ ಮಹಾಂತಯ್ಯನಮಠ, ಶರಣಪ್ಪ ರಾಂಪುರ, ಚನ್ನಪ್ಪ ಇದ್ದರು.