ಸುದ್ದಿಮೂಲ ವಾರ್ತೆ ರಾಯಚೂರು, ಡಿ.30:
ಬದಲಾಗುತ್ತಿಿರುವ ಸಮಾಜಕ್ಕೆೆ ಅನುಗುಣವಾಗಿ ಕಲಿಕಾ ಪ್ರಕ್ರಿಿಯೆಗಳು ಬದಲಾಗಬೇಕು ಅಂದಾಗ ಮಾತ್ರ ಪ್ರಬುದ್ಧ ನಾಗರೀಕರಾಗಿ ಹೊರಬರಲು ಸಾಧ್ಯವಿದೆ ಎಂದು ಹಿರಿಯ ಸಾಹಿತಿಗಳಾದ ಡಾ. ಶೀಲಾದಾಸ ಪ್ರತಿಪಾದಿಸಿದರು.
ಇಂದು ನಗರದ ಬಸವಶ್ರೀ ಶಾಲೆಯಲ್ಲಿ ರಾಯಚೂರು ದಕ್ಷಿಣ ವಲಯ ಮಟ್ಟದ 2025-26ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.ಹುಟ್ಟಿಿದ ಪ್ರತಿಯೊಂದು ಮಗು ಪ್ರತಿಭಾವಂತ ಮಗು ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ತರುವ ಕೆಲಸ ಶಿಕ್ಷಕ ಮತ್ತು ಪಾಲಕರದ್ದಾಗಿದೆ. ಮಕ್ಕಳ ಜೀವನದಲ್ಲಿ ಶಾಲೆ ಒಂದು ಘಟ್ಟವಾದರೆ ತಂದೆ ತಾಯಿ ಪಾಲಕರು ಬಹು ಮುಖ್ಯಪಾತ್ರ ವಹಿಸುತ್ತಾಾರೆ. ಮಕ್ಕಳನ್ನು ಶಿಕ್ಷಕರಿಗೆ ಸಂಪೂರ್ಣವಾಗಿ ಸಮರ್ಪಣೆ ಮಾಡಬೇಕು. ಸಮರ್ಪಣಾ ಭಾವದಿಂದ ಕಲಿಸಿದರೆ ಮಕ್ಕಳು ಅತ್ಯುತ್ತಮ ಪ್ರಜೆಗಳಾಗಿ ಹೊರಬರಲು ಸಾಧ್ಯವಿದೆ ಎಂದರು.
ಇಂತಹ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿವೆ ನಾವಿನ್ಯತೆ ಕಲಿಯಲು ವೇದಿಕೆಯಾಗಲಿವೆ ಎಂದು ಹೇಳಿದರು.
ಶಿಕ್ಷಣ ಸಂಯೋಜಕ ಕೆ. ರಾಮಕೃಷ್ಣ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮ ವಲಯದ ಶಾಲೆಗಳ ಎಲ್ಲ ಮಕ್ಕಳನ್ನು ಒಂದೇ ವೇದಿಕೆಯಲ್ಲಿ ತರುವಲ್ಲಿ ಈ ಕಾರ್ಯಕ್ರಮ ಯಶಸ್ವಿಿಯಾಗಿದೆ. ಶಾಲಾ ಶಿಕ್ಷಕರು ಮತ್ತು ಮುಖ್ಯಗುರುಗಳ ಸಹಕಾರ, ಸಹಾಯದಿಂದ ಇಂತಹ ಕಾರ್ಯಕ್ರಮಗಳು ಯಶಸ್ವಿಿಯಾಗಿ ಮುನ್ನಡೆಯುತ್ತಿಿವೆ ಎಂದು ಹೇಳಿದರು.
ಪ್ರಾಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಜಿಲ್ಲಾಾಧ್ಯಕ್ಷ ವೀರಭದ್ರಪ್ಪ ಮಾತನಾಡಿ, ಮಕ್ಕಳ ಪ್ರತಿಭೆಗಳನ್ನು ಪಕ್ಷಪಾತ ಮಾಡದೇ ಗುರುತಿಸಿ ಪ್ರೋೋತ್ಸಾಾಹಿಸಲು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವಶ್ರೀ ಶಾಲೆಯ ಸಂಸ್ಥಾಾಪಕರಾದ ಲಲಿತಾ ಬಸನಗೌಡ, ಸುಗುಣ ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ಡಾ. ಎಂ.ಬಸವನಗೌಡ, ಸಂಘದ ನಿರ್ದೇಶಕರಾದ ಮಾರುತಿ, ದೇವೇಂದ್ರಪ್ಪ, ಹೀರಾಲಾಲ್, ವೈಶಾಲಿ ಪಾಟೀಲ್, ರೆಹಮಾನ್, ಮುಖ್ಯ ಗುರುಗಳಾದ ಅನುಸೂಯ, ಔರಂಗಜೇಬ್, ಸಿಆರ್ಪಿ ಮಾರಪ್ಪ , ಶ್ರೀದೇವಿ, ಬಿಂದು, ಚೆನ್ನಮ್ಮ, ಲಕ್ಷ್ಮಿಿ, ದಕ್ಷಿಣ ವಲಯದ ಸಿಆರ್ಪಿ ರಾವುತರಾವ್ ಬರೂರ , ಆಡಳಿತಾಧಿಕಾರಿ ವಿಜಯಲಕ್ಷ್ಮಿಿ ವಲಯದ ಎಲ್ಲ ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು ವಿದ್ಯಾಾರ್ಥಿಗಳು ಭಾಗವಹಿಸಿದ್ದರು.

