ಬೆಂಗಳೂರು, ಜು, 3; ಗುರುಪೂರ್ಣಿಮೆಂದು ಗುರು “ದಕ್ಷಿಣಾಮೂರ್ತಿ ಸ್ತುತಿ” ಧ್ವನಿ ಸಾಂದ್ರಿಕೆ ಲೋಕಾರ್ಪಣೆ ಮಾಡಲಾಯಿತು. ಶಿವನ ಅವತಾರವಾದ ಗುರು ದಕ್ಷಿಣಾಮೂರ್ತಿಯು ಜ್ಞಾನದ ಮೂಲಕ ಇಡೀ ವಿಶ್ವವಕ್ಕೇ ಮಾರ್ಗದರ್ಶನ ಮಾಡುವ ಆದಿಗುರುವಾಗಿದ್ದು, ಗುರು ಆರಾಧಕರಾದ ಡಾ.ಬಿ.ಎಂ.ಉಮೇಶ್ ಕುಮಾರ್ ಅವರು ಕನ್ನಡದಲ್ಲಿ ಪ್ರಪ್ರಥಮಬಾರಿಗೆ ಶ್ರೀ ಗುರು ದಕ್ಷಿಣಾಮೂರ್ತಿಯುನ್ನು ಸ್ತುತಿಸುವ ಧ್ವನಿಮುದ್ರಿಕೆಯನ್ನು ಹೊರತಂದಿದ್ದಾರೆ.
ಬೆಂಗಳೂರಿನ ಶ್ರೀ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಶ್ರೀ ದಕ್ಷಿಣಾಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಧ್ವನಿಮುದ್ರಿಕೆ ಬಿಡುಗಡೆ ಮಾಡಲಾಗಿದ್ದು, “ದಕ್ಷಿಣಾಮೂರ್ತಿ ಸ್ತುತಿ” ಗೀತೆಗಳು ಇದೀಗ ಯುಟ್ಯೂಬ್ ನಲ್ಲಿ ಲಭ್ಯವಿದೆ.
ಭಕ್ತಿಗೀತೆಗಳು, ಸ್ತೋತ್ರಗಳು, ದಕ್ಷಿಣಾಮೂರ್ತಿ ಮೂಲಮಂತ್ರ, ಅಷ್ಟೋತ್ತರ ನಾಮಾವಳಿಗಳನ್ನು ಇದು ಒಳಗೊಂಡಿದೆ. ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ಹೇಮಂತ್, ಅನುರಾಧಾ ಭಟ್, ನವೀನ್ ಸಜ್ಜು, ಬದರಿ ಪ್ರಸಾದ್, ಅನೂಪ್ ಚಂದ್ರ ಹಾಗೂ ಅನುಪಮ ಅವರ ಧ್ವನಿ ಇದ್ದು, ಜೀವಿತ್ ಕೃಪಾಕರ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಗವಿಗಂಗಾಧರೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀಕಂಠ ದೀಕ್ಷಿತ್, ಬರಹಗಾರರಾದ ವಿನಯ್ ಭಟ್, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.