ಸುದ್ದಿಮೂಲ ವಾರ್ತೆ
ಆನೇಕಲ್, ಅ. 15 : ಬೇಗೂರಿನ 13ನೇ ಶತಮಾನದಲ್ಲಿ ಗಂಗ ಮತ್ತು ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದ ಪಂಚಲಿಂಗೇಶ್ವರ ದೇವಾಲಯದ ಗೋಡೆ ಕುಸಿದು ಉತ್ಸವದ ರಥಕ್ಕೆ ಹಾನಿಯಾಗಿರುವ ಘಟನೆ ಬೊಮ್ಮನಹಳ್ಳಿಯ ಬೇಗೂರಿನಲ್ಲಿ ನಡೆದಿದೆ.
ಇತ್ತೀಚಿಗೆ ಸುರಿದ ಧಾರಾಕಾರ ಮಳೆಯಿಂದಾಗಿ ಶೆಡ್ ನಲ್ಲಿ ಇದ್ದ ರಥೋತ್ಸವಕ್ಕೆ ಗೋಡೆ ಕುಸಿತಗೊಂಡು ನೂರಾರು ವರ್ಷಗಳ ಇತಿಹಾಸವಿರುವ ರಥಕ್ಕೆ ಹಾನಿಯಾಗಿದೆ.
ಬೇಗೂರು ಗ್ರಾಮದ ಪುರಾಣ ಪ್ರಸಿದ್ಧ ನಾಗನಾಥೇಶ್ವರ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಪ್ರತಿವರ್ಷವೂ ರಥೋತ್ಸವನ್ನ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಬಳಿಕ ರಥವನ್ನ ದೇವಾಲಯದಲ್ಲಿನ ರಥ ಮಂಟಪದಲ್ಲಿ ನಿಲ್ಲಿಸಲಾಗುತ್ತಿತ್ತು.
ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ರಥಮಂಟಪದ ಗೋಡೆ ಶಿಥಿಲಗೊಂಡಿತ್ತು. ಕಳೆದ ರಾತ್ರಿ ಗೋಡೆ ಕುಸಿತಗೊಂಡ ಪರಿಣಾಮ ರಥಕ್ಕೆ ಬಾರಿ ಪ್ರಮಾಣದ ಹಾನಿಯಾಗಿದೆ. ಜೊತೆಗೆ ದೇವರ ಮೆರವಣಿಗೆಯ ಪಲ್ಲಕ್ಕಿ ವಸ್ತುಗಳಿಗೂ ಹಾನಿಯಾಗಿದೆ.
ದೇವಾಲಯದ ಆಡಳಿತ ಮಂಡಳಿ ಕ್ರೇನ್ ಮೂಲಕ ರಥವನ್ನ ಹೊರತೆಗೆದಿದ್ದಾರೆ. ದೇವಾಲಯದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಹಾನಿಯಾಗಿರುವ ರಥವನ್ನ ಸರಿಪಡಿಸಲು ಮುಂದಾಗಿದ್ದಾರೆ.
ಎಂದುಸ್ಥಳೀಯ ಮುಖಂಡರಾದ ಆಂಜಿನಪ್ಪ ಹೇಳಿದರು
ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಬ್ರಹ್ಮರಥೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ರಥಕ್ಕೆ ಸುಮಾರು 140 ವರ್ಷಗಳ ಇತಿಹಾಸವಿದೆ. ಈ ರಥೋತ್ಸವದ ಅಂಕಣ ಮಂಟಪಕ್ಕೆ ಹಾನಿಯಾಗಿದೆ. ಕಳೆದ ಎರಡು ಮೂರು ಬಾರಿ ಕೂಡ ರಥೋತ್ಸವವನ್ನು ಸರಿಪಡಿಸಲಾಗಿತ್ತು ಎನ್ನುತ್ತಾರೆ ಸ್ಥಳೀಯರಾದ ಭರತ್ದೀಕ್ಷಿತ್.