ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ. 20: ಬೆಂಗಳೂರು ಸಹಿತ ರಾಜ್ಯದೆಲ್ಲೆಡೆ ಇರುವ ಇಂದಿರಾ ಕ್ಯಾಂಟೀನ್ಗಳನ್ನು ಬಲಪಡಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಮುಚ್ಚುವ ಸ್ಥಿತಿಯಲ್ಲಿದ್ದ ಇಂದಿರಾ ಕ್ಯಾಂಟೀನ್ಗಳನ್ನು ಈಗಾಗಲೇ ಪುನರಾರಂಭಿಸಲಾಗಿರುವುದಲ್ಲದೆ ಅಲ್ಲಿ ವಾರದ ಪ್ರತಿ ದಿನವೂ ತರಹೇವಾರಿ ಉಪಾಹಾರ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.
ಇಂದಿರಾ ಕ್ಯಾಂಟೀನ್ನಲ್ಲಿ ದರ್ಶಿನಿ ಮಾದರಿಯಲ್ಲಿ ಮೆನು ಸಿದ್ಧಪಡಿಸಲಾಗಿದೆ. ಹಿಂದಿನ ಮೆನುವಿಗಿಂತ ಹಲವು ಬದಲಾವಣೆಯನ್ನು ಮಾಡಲಾಗಿದೆ. ಬಗೆ ಬಗೆಯ ತಿಂಡಿ ತಿನಿಸುಗಳೊಂದಿಗೆ ಇಂದಿರಾ ಕ್ಯಾಂಟೀನ್ ಮತ್ತೆ ಆಕರ್ಷಣೀಯಗೊಳಿಸಲು ತೀರ್ಮಾನಿಸಲಾಗಿದೆ.
ವಾರದ ಒಂದೊಂದು ದಿನ ಒಂದೊಂದು ರೀತಿಯ ತಿಂಡಿ ಹಾಗೂ ಊಟವನ್ನು ವಿತರಿಸಲು ಹೆಜ್ಜೆ ಇಟ್ಟಿದೆ.
ಇಂದಿರಾ ಕ್ಯಾಂಟೀನ್ ಹೊಸ ಮೆನು ಪ್ರಕಾರ ಏನೇನು ಇರಲಿದೆ ಎಂದು ನೋಡಿದರೆ ಇಡ್ಲಿ ಚಟ್ನಿ/ ಸಾಂಬಾರ್
ಬ್ರೆಡ್ ಮತ್ತು ಜಾಮ್, ಮಂಗಳೂರು ಬನ್ಸ್, ಬೇಕರಿ ಬನ್, ಪಲಾವ್, ಟೊಮ್ಯಾಟೊ ಬಾತ್, ಖಾರಾ ಪೊಂಗಲ್,
ಬಿಸಿಬೇಳೆ ಬಾತ್, ಅನ್ನ ಸಾಂಬಾರ್, ರಾಗಿ ಮುದ್ದೆ ಸೊಪ್ಪುಸಾರು, ಚಪಾತಿ ಮತ್ತು ಪಲ್ಯ ಹಾಗೂ ಟೀ ಕಾಫಿ ಇರುತ್ತದೆ.
ಪ್ರತಿ ದಿನವೂ ಸಹ ಪ್ರತ್ಯೇಕ ಮೆನು ನೀಡಲು ತೀರ್ಮಾನಿಸಲಾಗಿದ್ದು, ಯಾವ ದಿನ ಏನು ವಿಶೇಷ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಸೋಮವಾರ
ಬೆಳಗ್ಗೆ: ಇಡ್ಲಿ ಸಾಂಬಾರ್ / ಪಲಾವ್, ರಾಯ್ತ / ಬ್ರೆಡ್ & ಜಾಮ್
ಮಧ್ಯಾಹ್ನ: ಅನ್ನ ಸಾಂಬಾರ್ + ಕೀರ್ / ರಾಗಿಮುದ್ದೆ ಸೊಪ್ಪು ಸಾರು + ಕೀರ್
ರಾತ್ರಿ: ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು
ಮಂಗಳವಾರ
ಬೆಳಗ್ಗೆ: ಇಡ್ಲಿ ಚಟ್ನಿ / ಬಿಸಿ ಬೇಳೆ ಬಾತ್ / ಮಂಗಳೂರು ಬನ್ಸ್
ಮಧ್ಯಾಹ್ನ: ಅನ್ನ ಸಾಂಬಾರ್ + ಮೊಸರು / ಚಪಾತಿ ಸಾಗು + ಕೀರ್
ರಾತ್ರಿ: ಅನ್ನ ಸಾಂಬಾರ್ + ರಾಯ್ತ / ಚಪಾತಿ + ವೆಜ್ ಕರಿ
ಬುಧವಾರ
ಬೆಳಗ್ಗೆ: ಇಡ್ಲಿ ಸಾಂಬಾರ್ / ಖಾರಾ ಬಾತ್ / ಬೇಕರಿ ಬನ್
ಮಧ್ಯಾಹ್ನ: ಅನ್ನ ಸಾಂಬಾರ್ + ಕೀರ್ / ರಾಗಿಮುದ್ದೆ + ಸೊಪ್ಪು ಸಾರು
ರಾತ್ರಿ: ಅನ್ನ ಸಾಂಬಾರ್ / ರಾಗಿಮುದ್ದೆ + ಸೊಪ್ಪು ಸಾರು
ಗುರುವಾರ
ಬೆಳಗ್ಗೆ: ಇಡ್ಲಿ ಸಾಂಬಾರ್ / ಪಲಾವ್ / ಬ್ರೆಡ್ & ಜಾಮ್
ಮಧ್ಯಾಹ್ನ: ಅನ್ನ ಸಾಂಬಾರ್ + ಮೊಸರು / ಚಪಾತಿ ಸಾಗು + ಕೀರ್
ರಾತ್ರಿ: ಅನ್ನ ಸಾಂಬಾರ್ + ಮೊಸರು / ಚಪಾತಿ + ವೆಜ್ ಕರಿ
ಶುಕ್ರವಾರ
ಬೆಳಗ್ಗೆ: ಇಡ್ಲಿ ಸಾಂಬಾರ್ / ಬಿಸಿಬೇಳೆ ಬಾತ್ / ಮಂಗಳೂರು ಬನ್ಸ್
ಮಧ್ಯಾಹ್ನ: ಅನ್ನ ಸಾಂಬಾರ್ / ಮೊಸರನ್ನ / ರಾಗಿಮುದ್ದೆ ಸೊಪ್ಪು ಸಾರು
ರಾತ್ರಿ: ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು
ಶನಿವಾರ
ಬೆಳಗ್ಗೆ: ಇಡ್ಲಿ ಸಾಂಬಾರ್ / ಪೊಂಗಲ್ / ಬೇಕರಿ ಬನ್
ಮಧ್ಯಾಹ್ನ: ಅನ್ನ ಸಾಂಬಾರ್ + ಕೀರ್ / ಚಪಾತಿ ಸಾಗು + ಕೀರ್
ರಾತ್ರಿ: ಅನ್ನ ಸಾಂಬಾರ್ + ಮೊಸರು / ಚಪಾತಿ + ವೆಜ್ ಕರಿ
ಭಾನುವಾರ
ಬೆಳಗ್ಗೆ: ಇಡ್ಲಿ ಚಟ್ನಿ / ಖಾರಾ ಬಾತ್ / ಬ್ರೆಡ್ & ಜಾಮ್
ಮಧ್ಯಾಹ್ನ: ಅನ್ನ
ಸಾಂಬಾರ್ / ಮೊಸರನ್ನ / ರಾಗಿಮುದ್ದೆ ಸೊಪ್ಪು ಸಾರು
ರಾತ್ರಿ: ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು