ಸುದ್ದಿಮೂಲ ವಾರ್ತೆ ಮೈಸೂರು, ಅ.02:
ವಿಜಯನಗರ ಸಾಮ್ರಾಾಜ್ಯದಿಂದ ಆರಂಭವಾಗಿ ಇಂದಿಗೂ ನಿರಂತರವಾಗಿ ನಡೆದುಕೊಂಡು ಬರುತ್ತಿಿರುವ ದಸರಾ ಜಂಬೂ ಸವಾರಿ ಮೆರವಣಿಗೆ ಅತ್ಯಂತ ರಾಜ ವೈಭವದಿಂದ ಗುರುವಾರ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಗುರುವಾರ ನಡೆಯಿತು. ಇದಕ್ಕೆೆ ಲಕ್ಷೋಪಲಕ್ಷ ಪ್ರಜೆಗಳು ಸಾಕ್ಷಿಯಾದರು. ಸ್ಥಳೀಯರಲ್ಲದೇ ದೇಶ-ವಿದೇಶಗಳಿಂದ ಬಂದಿದ್ದ ಜನರು ಕಣ್ತುಂಬಿಕೊಂಡರು.
ಎಲ್ಲಿ ನೋಡಿದರಲ್ಲಿ ಜನವೋ ಜನ ಚಿನ್ನದ ಅಂಬಾರಿಯಲ್ಲಿ ಅಲಂಕೃತಳಾಗಿ ವಿರಾಜಮಾನಳಾಗಿದ್ದ ಶ್ರೀ ಚಾಮುಂಡೇಶ್ವರಿಯನ್ನು ಕಂಡು ಪುಳಕಿತರಾದ ಜನರು ಹರ್ಷೋದ್ಘಾಾರ ಮಾಡಿದರು.
ಮಧ್ಯಾಾಹ್ನ 1ರಿಂದ 1.18ರ ಶುಭ ಧರ್ನು ಲಗ್ನದ ಶುಭ ಮುಹೂರ್ತದಲ್ಲಿ ಕೋಟೆ ಆಂಜನೇಯ ಸ್ವಾಾಮಿ ದೇಗುಲದ ಬಳಿ ನಂದಿ ಧ್ವಜಕ್ಕೆೆ ಪೂಜೆ ಸಲ್ಲಿಸಿ, ಬಳಿಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಅಭಿ ಅಪ್ಪಯ್ಯ,,, ನಡಿಲಾ.. ನಡಿಲಾ ಎಂದು ತನ್ನ ಪ್ರೀೀತಿಯ ಮಾವುತ ಜಿ.ಎಸ್. ವಸಂತ ಅವರು, ಕಿವಿ ಮೇಲೆ ಕೈಗಳನ್ನು ಸವರುತ್ತಿಿದ್ದಂತೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಗಜಗಾಂಭೀರ್ಯದಿಂದ ಅಭಿಮನ್ಯು ವೇದಿಕೆ ಬಳಿ ಬಂದು ನಿಂತ.
ಆಗ ಮಳೆ ಸಿಂಚನದ ನಡುವೆ ಅಂಬಾರಿಯಲ್ಲಿ ಪ್ರತಿಷ್ಠಾಾಪಿಸಿದ್ದ ತಾಯಿ ಚಾಮುಂಡೇಶ್ವರಿಗೆ ಪುಷ್ಪಾಾರ್ಚನೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಅರಮನೆ ಆವರಣದಲ್ಲಿ ಹಷೋದ್ಘಾಾರ ಮೊಳಗಿತು.
ಅಂಬಾರಿಯಲ್ಲಿ ಇದ್ದ ಚಾಮುಂಡೇಶ್ವರಿ ದೇವಿಗೆ ಡಿಸಿಎಂ ಡಿ ಕೆ ಶಿವಕುಮಾರ್, ಹೈಕೋರ್ಟ್ ಮುಖ್ಯ ನ್ಯಾಾಯಮೂರ್ತಿ ವಿಭು ಬಖ್ರು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಚಿವ ಶಿವರಾಜ್ ತಂಗಡಗಿ, ಸಂಸದ ಯದುವೀರ್ ಒಡೆಯರ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಲಕ್ಷೀಕಾಂತ್ ರೆಡ್ಡಿಿ, ನಗರ ಪೊಲೀಸ್ ಆಯುಕ್ತೆೆ ಸೀಮಾ ಲಾಟ್ಕರ್ ಕೂಡ ಸಿಎಂ ಜೊತೆಯಲ್ಲೇ ಪುಷ್ಪಾಾರ್ಚನೆ ಮಾಡಿದರು.
ನಂತರ ಚಿನ್ನದ ಅಂಬಾರಿ ಅಭಿಮನ್ಯು ರಾಜಬೀದಿಗಳಲ್ಲಿ ರಾಜನಡಿಗೆಯಲ್ಲಿ ಗಾಂಭೀರ್ಯದಿಂದ ನಡೆದು ಜನಮನ ಸೂರೆಗೊಂಡ ರಾಜರ ಧಿರಿಸಿನಲ್ಲಿ ಇದ್ದ ಮಾವುತ ವಸಂತನ ಸಲಹೆ, ಸೂಚನೆಗಳನ್ನು ಚಾಚುತಪ್ಪದೇ ಪಾಲಿಸುವ ಮೂಲಕ ಅಭಿಮನ್ಯು ತಮ್ಮ ಎಡಬಲದಲ್ಲಿ ಇದ್ದ ರೂಪ ಮತ್ತು ಕಾವೇರಿ ಎಂಬ ಹೆಣ್ಣಾಾನೆಗಳ ಜೊತೆ ಸಾಗಿ, ದಸರಾ ಅತ್ಯಂತ ಯಶಸ್ವಿಿಯನ್ನಾಾಗಿ ಮಾಡಿದ.
ಜಂಬೂ ಸವಾರಿ ಮೆರವಣಿಗೆ ಕೆ.ಆರ್.ಸರ್ಕಲ್, ಆರ್ಯವೇದ ಸರ್ಕಲ್, ತಿಲಕ್ ನಗರ, ಬಂಬೂ ಬರ್ಜಾ ಮೂಲಕ ಬನ್ನಿಿ ಮಂಟಪ್ಪಕ್ಕೆೆ ತಲುಪಿತು. ರಸ್ತೆೆಯ ಇಕ್ಕೆೆಲಗಳಲ್ಲಿ ಜನಸಾಗರವೇ ಕಿಕ್ಕಿಿರಿದು ನಿಂತು ರಾಜಪಥದಲ್ಲಿ ಸಾಗಿದ ಮನಮೋಹಕ, ರಮ್ಯವಾದ ಜಂಬೂಸವಾರಿ ದಿಬ್ಬಣವನ್ನು ಕಣ್ತುಂಬಿಕೊಂಡರು.
1999 ರಿಂದಲೂ ಅಂಬಾರಿ ಹೊರುವ ಕಾಯಕವನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿರುವ ಅಭಿಮನ್ಯು ಜೊತೆಗೆ ಕುಮ್ಕಿಿ ಆನೆಗಳಾದ ಕಾವೇರಿ, ರೂಪ, ನಿಶಾನೆ ಆನೆ – ಧನಂಜಯ, ನೌತ್ ಆನೆ ಗೋಪಿ ಮತ್ತು ಸಾಲಾನೆಗಳಾಗಿ ಮಹೇಂದ್ರ, ಶ್ರೀಕಂಠ, ಲಕ್ಷ್ಮಿಿ, ಕಂಜನ್, ಭೀಮ, ಏಕಲವ್ಯ, ಪ್ರಶಾಂತ, ಸುಗ್ರಿಿವ್, ಹೇಮಾವತಿ ಆನೆಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಹೆಜ್ಜೆೆ ಹಾಕಿದವು.
ಅರಮನೆಯಿಂದ ಬನ್ನಿಿಮಂಟಪದವರೆಗೆ 5 ಕಿಮಿ ವರೆಗೆ ನಡೆದ ಮೆರವಣಿಗೆಯಲ್ಲಿ ಇದ್ದ 31 ಜಿಲ್ಲೆಗಳ ಸಂಸ್ಕೃತಿಯನ್ನು ಬಿಂಬಿಸುವ ಬರೋಬ್ಬರಿ 58 ಸ್ತಬ್ದಚಿತ್ರಗಳು ಮತ್ತು ನಾನಾ ಕಲಾತಂಡಗಳು ಗಮನ ಸೆಳೆದವು.
ಸಾಂಸ್ಕೃತಿಕ ಮೆರವಣಿಗೆ : ನಂದಿಧ್ವಜ, ವೀರಗಾಸೆ, ನಾದಸ್ವರ, ನೌತ್, ನಿಶಾನೆ ಆನೆಗಳು, ಎನ್ಸಿಿಸಿ, ಸ್ಕೌೌಟ್ಸ್, ಗೈಡ್ಸ್, ವಿವಿಧ ಪೊಲೀಸ್ ತುಕಡಿಗಳು, ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ ಸ್ತಬ್ಧ ಚಿತ್ರಗಳು, ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಹೀಗೆ ಸಾಂಸ್ಕೃತಿಕ ವೈಭೋಗ; ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಗೆ ಇನ್ನಷ್ಟು ಮೆರಗು ನೀಡಿದವು. ಅಂದಾಜು 1200 ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಕರುನಾಡಿನ ಸಂಸ್ಕೃತಿಯನ್ನು ಮೆರವಣಿಗೆಯಲ್ಲಿ ಯಶಸ್ವಿಿಯಾಗಿ ಪ್ರತಿಬಂಬಿಸಿದ್ದು ಅಮೋಘವಾಗಿತ್ತು
ಎಲ್ಲವೂ ಸುಗಮ- ಸೂಸೂತ್ರ : ಜಂಬೂಸವಾರಿ, ಪಂಜಿನ ಕವಾಯತು ಕಾರ್ಯಕ್ರಮಕ್ಕಾಾಗಿ ಭದ್ರತೆಗಾಗಿ 7 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಜೊತೆಗೆ ಸಶಸ ಪಡೆಗಳು, ವಿಧ್ವಂಸಕ ಕೃತ್ಯ ಪತ್ತೆೆ ದಳಗಳು, ಬಾಂಬ್ ನಿಷ್ಕ್ರಿಿಯ ದಳ, ವಿಶೇಷ ಗರುಡ ಪಡೆ ಸಹ ಇತ್ತು. ಆದ್ದರಿಂದ ದಸರಾ ಹಬ್ಬ ಯಾವುದೇ ಅಡಚಣೆಗಳಿಲ್ಲದೆ ಸೂಸೂತ್ರವಾಗಿ ನಡೆಯಿತು.
ಸಂಪನ್ನ : ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯೊಂದಿಗೆ ಕಳೆದ ಹನ್ನೊೊಂದು ದಿನಗಳಿಂದ ಸಾಂಪ್ರದಾಯಿಕವಾಗಿ ಸಡಗರ, ಸಂಭ್ರಮದಿಂದ ನಡೆದ ನಾಡಹಬ್ಬ ದಸರಾ ಸಂಪನ್ನಗೊಂಡಿತು. ಜಂಬೂ ಸವಾರಿಗೂ ಮುಂಚೆ ಗುರುವಾರ ಬೆಳಗ್ಗೆೆ ವಜ್ರಮುಷ್ಠಿಿ ಕಾಳಗ ಮತ್ತು ಆಯುಧ ಪೂಜೆ ನೆರವೇರಿತು.
—————————–
ಬಾಕ್ಸ್
ಸಿದ್ದರಾಮಯ್ಯ 8ನೇ ಬಾರಿ ಅಭಿಮನ್ಯು 6ನೇ ಬಾರಿ
ಸಿಎಂ ಸಿದ್ದರಾಮಯ್ಯ ಅವರು 2025 ನೇ ಜಂಬೂಸವಾರಿಯನ್ನು ಉದ್ಘಾಾಟಿಸಿ, ಆ ಮೂಲಕ 8 ನೇ ಬಾರಿಜಂಬೂ ಸವಾರಿಗೆ ಚಾಲನೆ ಮೂಲಕ ದಾಖಲೆ ಬರೆದರು.
ಹಾಗೇಯೇ ಚಿನ್ನದ ಅಂಬಾರಿಯನ್ನು ಕ್ಯಾಾಪ್ಟನ್ ಅಭಿಮನ್ಯು ಹೊತ್ತು ಸಾಗುತ್ತಿಿರುವುದು ಇದು 8 ನೇ ಬಾರಿ. 59 ವರ್ಷ ವಯಸ್ಸಿಿನ ಅಭಿಮನ್ಯು ಮುಂದಿನ ವರ್ಷ 60 ಕ್ಕೆೆ ತಲುಪುತ್ತಾಾನೆ. ಈ ಹಿನ್ನೆೆಲೆಯಲ್ಲಿ ಮಹೇಂದ್ರ ಅಥವಾ ಭೀಮ ಚಿನ್ನದ ಅಂಬಾರಿ ಹೊರುವ ಸಂಭವವಿದೆ.
750 ಕೆಜಿ ಚಿನ್ನದ ಅಂಬಾರಿ ಹೊತ್ತು ರಾಜನಡಿಗೆಯಲ್ಲಿ ರಾಜಬೀದಿಯಲ್ಲಿ ಸಾಗಿದ ಅಭಿಮನ್ಯು ರಾಜವೈಭವದಿಂದ ನಡೆದ ದಸರಾ ಜಂಬೂಸವಾರಿ

