ಸುದ್ದಿಮೂಲ ವಾರ್ತೆ ಸಿಂಧನೂರು , ಸೆ.23:
ದಸರಾ ಹಬ್ಬಕ್ಕೆೆ ತನ್ನದೇ ಆದ ಇತಿಹಾಸವಿದೆ. ಇದನ್ನು ಗ್ರಾಾಮೀಣ ಭಾಗದಲ್ಲಿ ಆಚರಿಸುವ ಮೂಲಕ ಗ್ರಾಾಮೀಣ ಸಂಸ್ಕೃತಿ ಉಳಿಸಿ, ಬೆಳೆಸುವ ನಿಟ್ಟಿಿನಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮಹತ್ವದ ಹೆಜ್ಜೆೆ ಇಟ್ಟಿಿದ್ದಾಾರೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪುರ ಶ್ಲಾಾಘಿಸಿದರು.
ಮಂಗಳವಾರ ತಾಲ್ಲೂಕಿನ ಅಂಬಾಮಠದಲ್ಲಿ ಸಿಂಧನೂರು ದಸರಾ ಉತ್ಸವ ಸಮಿತಿ ಆಯೋಜಿಸಿರುವ ಗ್ರಾಾಮೀಣ ದಸರಾ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ವಿಜಯನಗರ ಕಾಲದಲ್ಲಿ ದಸರಾ ಉತ್ಸವ ಆರಂಭವಾಗಿದೆ. ರಾಜ್ಯದಲ್ಲಿ ನಾಡಹಬ್ಬ ಎಂದು ದಸರಾ ಖ್ಯಾಾತಿ ಪಡೆದಿದೆ. ಈ ಭಾಗದಲ್ಲಿ ಬಹಳ ವಿಜೃಂಭಣೆಯಿಂದ ಶ್ರದ್ಧಾಾ ಭಕ್ತಿಿಯಿಂದ ದಸರಾ ಆಚರಣೆ ಮಾಡುತ್ತಿಿರುವ ಕಾರ್ಯ ಸ್ವಾಾಗತಾರ್ಹ. ಸಿಂಧನೂರು ತಾಲೂಕಿನಲ್ಲಿ ಮೈಸೂರು ದಸರಾ ಮಾದರಿ 11 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಈ ಭಾಗದ ಸಂಸ್ಕೃತಿಗೆ ಬೆಲೆ ನೀಡಿದಂತಾಗಿದೆ. ಅಂಬಾಮಠದ ದೇವಸ್ಥಾಾನಕ್ಕೆೆ 400 ವರ್ಷಗಳ ಇತಿಹಾಸವಿದೆ. ದೇಶಾದ್ಯಂತ ಭಕ್ತ ಸಮೂಹ ಹೊಂದಿದೆ. ಅಂಬಾಮಠದ ಅಭಿವೃದ್ಧಿಿಗೆ ದೇವಸ್ಥಾಾನ ನಿರ್ಮಾಣ ಸೇರಿದಂತೆ ಅನೇಕ ದೊಡ್ಡ ಮಟ್ಟದ ಕೆಲಸ ನಡೆದಿದ್ದು, ಈ ಮುಖಾಂತರ ಭಕ್ತರಿಗೆ ಅನುಕೂಲ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಾಳ, ರಾಯಚೂರು ಗ್ರಾಾಮೀಣ ಶಾಸಕ ಬಸನಗೌಡ ದದ್ದಲ, ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ತಹಶಿಲ್ದಾಾರ ಅರುಣ ಹೆಚ್.ದೇಸಾಯಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಅಂಬಾಮಠ ದೇವಸ್ಥಾಾನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ಕಾಂಗ್ರೆೆಸ್ ಅಧ್ಯಕ್ಷ ಲಿಂಗಪ್ಪ ದಡೇಸೂಗೂರು, ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಲಿಂಗರಾಜ ಪಾಟೀಲ್, ಆರ್.ಸಿ.ಪಾಟೀಲ್ ಸೇರಿದಂತೆ ವಿವಿಧ ಗ್ರಾಾಮ ಪಂಚಾಯತಿಗಳ ಅಧ್ಯಕ್ಷರು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅದ್ದೂರಿ ಮೆರವಣಿಗೆ:
ಅಂಬಾಮಠದ ಮುಖ್ಯದ್ವಾಾರದಿಂದ ಆರಂಭವಾದ ಅಂಬಾದೇವಿ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ವೇದಿಕೆವರೆಗೆ ಸಾಗಿತು. ಮೆರವಣಿಗೆಯಲ್ಲಿ ಮಹಿಳೆಯರು ಕುಂಭ-ಕಳಸ ಹೊತ್ತು ಸಾಗಿದ್ದು, ಮೆರವಣಿಗೆಗೆ ಆಕರ್ಷಕವಾಗಿತ್ತು. ಡೊಳ್ಳು ವಾದ್ಯಗಳು ಮೇಳೈಸಿದವು. ಸಾವಿರಾರು ಸಂಖ್ಯೆೆಯಲ್ಲಿ ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸಂಗೀತದ ರಸದೌತಣ:
ಉದ್ಘಾಾಟನಾ ಕಾರ್ಯಕ್ರಮದ ನಂತರ ಸರಿಗಮಪ ಖ್ಯಾಾತಿಯ ಜ್ಞಾಾನೇಶ, ಶಿವಾನಿ, ಭೂಮಿಕಾ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಜೋಗತಿ ನೃತ್ಯ, ಜಾಗೃತಿ ರೂಪಕ, ಜಾನಪದ ಕಾರ್ಯಕ್ರಮಗಳು ನಡೆಯಲಿವೆ.
ಅಂಬಾಮಠದಲ್ಲಿ ಗ್ರಾಾಮೀಣ ದಸರಾ ಉತ್ಸವಕ್ಕೆೆ ಸಚಿವರಿಂದ ಅದ್ದೂರಿ ಚಾಲನೆ ಗ್ರಾಾಮೀಣ ಸಂಸ್ಕೃತಿ ಉಳಿಸಲು ದಸರಾ ಪೂರಕ : ದರ್ಶನಾಪುರ
