ಸುದ್ದಿಮೂಲ ವಾರ್ತೆ ರಾಯಚೂರು, ಅ.07:
ರಾಯಚೂರು ನಗರದ ಹರಿಜನವಾಡದಲ್ಲಿ ತಿಂಗಳ ಹಿಂದೆ ನಡೆದಿದ್ದ ಹಲ್ಲೆೆಯಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆೆ ಪಡೆಯುತ್ತಿಿದ್ದ ದಶ್ವಂತ ಎನ್ನುವ ಯುವಕ ಸಾವನ್ನಪ್ಪಿಿದ್ದರಿಂದ ಜೆಡಿಎಸ್ ನಗರಾಧ್ಯಕ್ಷ ಬಿ ತಿಮ್ಮಾಾರೆಡ್ಡಿಿ ಸೇರಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಸೆ.27ರಂದು ಬಡಾವಣೆಯ ತಿಮ್ಮಾಾರೆಡ್ಡಿಿ ಅವರ ಕಂಪೌಂಡ್ ಬಳಿ ನಿಂತು ಮಾತನಾಡುತ್ತಿಿದ್ದ ದಶ್ವಂತ್ ಅಲಿಯಾಸ್ ತಾಯಪ್ಪ ಎಂಬ ಯುವಕನ ಮೇಲೆ ತಿಮ್ಮಾಾರೆಡ್ಡಿಿ ಬೆಂಬಲಿಗರು ಹಲ್ಲೆೆ ಮಾಡಿ ಗಾಯಗೊಳಿಸಿದ್ದರು. ಗಾಯಗೊಂಡ ದಶ್ವಂತ್ನನ್ನು ರಿಮ್ಸ್ ಆಸ್ಪತ್ರೆೆಗೆ ದಾಖಲಿಸಲಾಗಿತ್ತುಘಿ. ಸೆ.28ರಂದು ಸಾವನ್ನಪ್ಪಿಿದ್ದಘಿ.
ತಿಮ್ಮಾಾರೆಡ್ಡಿಿ ಅವರ ಕಂಪೌಂಡ್ ಬಳಿ ತನ್ನ ಪುತ್ರ ದಶ್ವಂತ್ ಗೆಳೆಯರಾದ ವರುಣಕುಮಾರ, ನರಸಿಂಹಲು ಜೊತೆ ಮಾತನಾಡುತ್ತಾಾ ನಿಂತಾಗ ಜಾತಿ ನಿಂದನೆ ಮಾಡಿದ್ದಲ್ಲದೆ, ಬಲಗಣ್ಣು ಹಾಗೂ ಎದೆಗೆ ಬಲವಾಗಿ ಒದ್ದು ಗಾಯಗೊಳಿಸಿದ್ದರು. ಜಗಳ ಬಿಡಿಸಲು ಬಂದ ವರುಣ್, ನರಸಿಂಹಲುಗೆ ಜೀವ ಬೆದರಿಕೆ ಹಾಕಿದ್ದರು ಎಂದು ಅ.6ರಂದು ತಾಯಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತುಘಿ.
ಈ ಘಟನೆಗೆ ಸಂಬಂಧಿಸಿದಂತೆ ಬಿ.ತಿಮ್ಮಾಾರೆಡ್ಡಿಿಘಿ, ಸಂತೋಷರೆಡ್ಡಿಿಘಿ, ಅಖಿಲ್ರೆಡ್ಡಿಿಘಿ, ಸದ್ದಾಾಂ ಮೆಕಾನಿಕ್, ತರುಣರೆಡ್ಡಿಿಘಿ, ಕೃಷ್ಣಾಾ ಎನ್ನುವವರು ಗುಂಪಲ್ಲಿ ಬಂದು ಹಲ್ಲೆೆ ನಡೆಸಿದ್ದ ತನ್ನ ಮಗನ ಸಾವಿಗೆ ಕಾರಣ ಎಂದು ಮೃತನ ತಾಯಿ ಗೋವಿಂದಮ್ಮ ಮಾರ್ಕೆಟ್ ಯಾರ್ಡ್ನಲ್ಲಿ ಕೊಲೆ ದೂರು ದಾಖಲಿಸಿದ್ದಾಾಳೆ.
ಪ್ರಕರಣಕ್ಕೆೆ ಸಂಬಂಧಿಸಿದಂತೆ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ತಿದ್ದುಪಡಿ ಕಾಯಿದೆಯಡಿ ದೂರು ದಾಖಲಿಸಿದ್ದಲ್ಲದೆ, ಐಪಿಸಿ 54ರ ಅಡಿ ಮರಣ ದಂಡನೆ, ಜೀವ ಬೆದರಿಕೆ ಕಲಂ 189(2), ಜೀವಾವಧಿ ಶಿಕ್ಷೆೆ, ಅಕ್ರಮದ ಹಲ್ಲೆೆಘಿ, ಜೀವಹಾನಿ ಸೇರಿ ವಿವಿಧ ಕಲಂ ಹಾಗೂ ಬಿಎನ್ಎಸ್ ಕಲಂಗಳ ಅಡಿ ದೂರು ದಾಖಲಿಸಲಾಗಿದೆ.
ಅಲ್ಲದೆ, ಕಳ್ಳತನದ ಆಪಾದನೆ ಮೇಲೆ ಈ ಹಲ್ಲೆೆ ಮಾಡಲಾಗಿತ್ತು ಎಂಬುದು ಪ್ರಾಾಥಮಿಕ ಮಾಹಿತಿ ಅಂದು ಪೊಲೀಸರಿಗೆ ನೀಡಲಾಗಿತ್ತುಘಿ. ಆದರೆ, ಗಂಭೀರವಾಗಿ ಗಾಯಗೊಂಡು ಠಾಣೆಯಲ್ಲಿ ಮೂರ್ಚೆ ಹೋಗಿದ್ದರಿಂದ ರಿಮ್ಸ್ ಆಸ್ಪತ್ರೆೆಗೆ ಮೃತ ದಶ್ವಂತ ಅಲಿಯಾಸ್ ತಾಯಪ್ಪನನ್ನು ದಾಖಲಿಸಲಾಗಿತ್ತುಘಿ.
ಪ್ರತಿ ದೂರು :
ಈ ಪ್ರಕರಣದ ಹಿಂದೆ ರಾಜಕೀಯ ಷಡ್ಯಂತರದ ಕುಮ್ಮಕ್ಕಿಿದೆ ಎಂದು ಬಿ.ತಿಮ್ಮಾಾರೆಡ್ಡಿಿ ಎಸ್ಪಿ ಅವರಿಗೆ ಅ.6ರಂದು ಪ್ರತಿ ದೂರು ನೀಡಿದ್ದಾಾರೆ.
ಈ ಪ್ರಕರಣದಲ್ಲಿ ತಮ್ಮ ಹಾಗೂ ಕುಟುಂಬವನ್ನು ಸಿಲುಕಿಸುವ ದುರುದ್ದೇಶ ಅಡಗಿದ್ದು ಚಂದ್ರಬಂಡಾ ರಸ್ತೆೆಯಲ್ಲಿನ ಬಾಡಿಗೆ ನೀಡಿದ ಕಂಪೌಂಡ್ನಲ್ಲಿ ನಡೆದ ಘಟನೆಗೂ ನನಗೂ ಸಂಬಂಧವೇ ಇಲ್ಲಘಿ. ಸೆ.27ರಂದು ಕಳುವಿಗೆ ಬಂದಿದ್ದ ದಶ್ವಂತನನ್ನು ಬಾಡಿಗೆದಾರರು ಪೊಲೀಸ್ ಠಾಣೆಗೆ ಹಿಡಿದು ಕೊಟ್ಟಿಿದ್ದರು. ಫಿಟ್ಸ್ ಬಂದ ಕಾರಣ ರಿಮ್ಸ್ಗೆ ದಾಖಲಿಸಲಾಗಿತ್ತು ಎಂದು ಮಾಹಿತಿ ಇದೆ. ಈ ಬಗ್ಗೆೆ ಕೂಲಂಕುಷವಾಗಿ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲು ಕೋರಿದ್ದಾಾಗಿ ಗೊತ್ತಾಾಗಿದೆ