ಸುದ್ದಿಮೂಲ ವಾರ್ತೆ ಮುದಗಲ್, ಜ.18:
ತಾಲೂಕಿನ ಗಡಿ ಗ್ರಾಾಮವಾದ ತೊಂಡಿಹಾಳ ಗ್ರಾಾಮದ ಪ್ರಸಿದ್ಧ ಹುಲಿಗೆಮ್ಮ ದೇವಿ ಜಾತ್ರೆೆಯಲ್ಲಿ ಪ್ರಾಾಣಿ ಬಲಿ ಕೊಡದಂತೆ ಜಾಗೃತಿ ಮೂಡಿಸುವ ಮೂಲಕ ತಡಯಲು ಮುಂದಾಗಿದ್ದೇವೆ ಎಂದು ವಿಶ್ವಪ್ರಾಾಣಿ ಕಲ್ಯಾಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಾಮೀಜಿ ಶನಿವಾರ ತಿಳಿಸಿದರು.
ಪಟ್ಟಣದಲ್ಲಿ ಪತ್ರಿಿಕಾ ಪ್ರಕಟಣೆ ನೀಡಿ ಮೂರು ದಿನಗಳವರೆಗೆ ತೊಂಡಿಹಾಳ ಹುಲಿಗೆಮ್ಮ ದೇವಿ ಜಾತ್ರೆೆ ಜರುಗುತ್ತದೆ. ಜಾತ್ರೆೆಯಲ್ಲಿ ಪ್ರಾಾಣಿಬಲಿ, ಮೌಢ್ಯಾಾಚರಣೆ, ಕಂದಾಚಾರಗಳು ನಡೆಯದಂತೆ ಮುಂಜಾಗ್ರತಾ ವಹಿಸಬೇಕು. ಪ್ರಾಾಣಿಬಲಿಗೆ ನ್ಯಾಾಯಾಲಯ ಕಟ್ಟು ನಿಟ್ಟಿಿನ ಆದೇಶ ಹೊರಡಿಸಿದೆ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಾಧಿಕಾರಿಗಳು ಜತೆಗೆ ಎಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆೆ ತರಲಾಗಿದೆ. ಆದರೂ ಅಲ್ಲಲ್ಲಿ ಇಂತಹ ಪ್ರಕರಣ ನಡೆಯುವ ಸಾಧ್ಯತೆ ಇರುತ್ತದೆ. ಇದರಿಂದ ನ್ಯಾಾಯಾಲಯಗಳ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ.
ಪೊಲೀಸ್ ಇಲಾಖೆ, ಜಿಲ್ಲಾಡಳಿತ, ತಾಲೂಕಾ ಆಡಳಿತ, ಸ್ಥಳೀಯ ಆಡಳಿತ ಮಂಡಳಿಗೆ ಮನವಿ ಮಾಡಿಕೊಳ್ಳಲಾಗುತ್ತದೆ. ಸಾರ್ವಜನಿಕವಾಗಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುತ್ತಿಿರುವದರ ಜತೆಗೆ ಸಭೆಗಳನ್ನು ಕೂಡ ಮಾಡಲಾಗಿದೆ. ಗ್ರಾಾಮದ ರಸ್ತೆೆಯುದ್ದಕ್ಕೂ, ಗಲ್ಲಿ ಗಲ್ಲಿಗಳಲ್ಲಿ ಸಂಚಾರ ಮಾಡುತ್ತ ಜಾಗೃತಿ ಮೂಡಿಸಲಾಗುತ್ತಿಿದೆ. ನ್ಯಾಾಯಾಲಯಗಳು ಮಂದಿರ, ಮಸ್ಜೀದ್ ಸೇರಿದಂತೆ ಸಾರ್ವಜನಿಕವಾಗಿ ಯಾವದೇ ಪ್ರಾಾಣಿಗಳನ್ನು ಬಲಿ ಕೊಡುವಂತಿಲ್ಲ ಎಂದು ಆದೇಶ ನೀಡಿವೆ. ಈ ಆದೇಶವನ್ನು ಸಾರ್ವಜನಿಕರು, ಅಧಿಕಾರಿಗಳು ಕಟ್ಟುನಿಟ್ಟಿಿನಿಂದ ಪಾಲಿಸಬೇಕು. ಪ್ರಾಾಣಿಬಲಿ ತಡೆಯುವುದರಲ್ಲಿ ನಮ್ಮ, ನಿಮ್ಮೆೆಲ್ಲರ ಜವಾಬ್ದಾಾರಿ ಇದೆ. ಅದಕ್ಕೆೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿಿದೆ ಎಂದು ತಿಳಿಸಿದರು.
ಸಂಘಟನೆ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.
ದೇವರ ಹೆಸರಲ್ಲಿ ಪ್ರಾಣಿ ಬಲಿ ಕೊಡದಂತೆ ಜಾಗೃತಿ -ದಯಾನಂದ ಸ್ವಾಮೀಜಿ

