ಸುದ್ದಿಮೂಲ ವಾರ್ತೆ
ಹೊಸಕೋಟೆ, ಅ.06 : ಕೇಂದ್ರ ಬರ ಪರಿಹಾರ ಸಮೀಕ್ಷಾ ತಂಡ ಆಗಮಿಸಲಿರುವ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್ ಹಾಗೂ ಮುಖ್ಯ ಕಾರ್ಯನಿರ್ವಾಹಧಿಕಾರಿ ಅನುರಾಧ ರವರ ನೇತೃತ್ವದಲ್ಲಿ ಹೊಸಕೋಟೆ ಸೂಲಿಬೆಲೆ ಹೋಬಳಿಯ ವ್ಯಾಪ್ತಿಯ ಬರಪೀಡಿತ ಸಾದಪ್ಪನಹಳ್ಳಿ- ಎತ್ತಿನೋಡೆಯಪುರ ಹಾಗೂ ಯನಗುಂಟೆ ಗ್ರಾಮಕ್ಕೆ ಬೇಟಿ ನೀಡಿ ರಾಗಿ ಹೊಲಗಳಿಗೆ ಭೇಟಿ ನೀಡಿ ವಾಸ್ತವ ಸಮೀಕ್ಷೆ ನೆಡೆಸಿದರು.
ಅ.8 ರಂದು ಭಾನುವಾರ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಗೆ ಬರಲಿದ್ದು ಪೂರ್ವಬಾವಿಯಾಗಿ ಸೂಲಿಬೆಲೆ ಹೋಬಳಿ ಗ್ರಾಮಗಳಿಗೆ ಬೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿಗಳಾಧ ಶಿವಶಂಕರ್ ಹಾಗೂ ಸಿಇಓ
ಅನುರಾಧ ಅವರುಗಳು ಬರ ಪೀಡಿತ ಸೂಲಿಬೆಲೆ ಹೋಬಳಿ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ರಾಗಿಬೆಳೆ ನಷ್ಟದ ಬಗ್ಗೆ ಖುದ್ದು ಪರಿಶೀಲಿಸಿದರು.
ಕೃಷಿ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ಆಧರಿಸಿ ಎತ್ತಿನೊಡೆಯಪುರ ಸರ್ವೆ ನಂ.10/3
ರಲ್ಲಿ 23 ಎಕರೆ 25 ಗುಂಟೆ ರಾಗಿ ಬೆಳೆ ನಷ್ಟವಾಗಿದೆ. ಯನಗುಂಟೆ ಗ್ರಾಮದ ಸರ್ವೆನಂ.122/1 ರಲ್ಲಿ 1 ಎಕರೆ 9 ಗುಂಟೆ ಹಾಗೂ ಸರ್ವೆ ನಂ. 122/4 ರಲ್ಲಿ 21ಗುಂಟೆ ಪ್ರದೇಶಗಳನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮೀಕ್ಷೆ ನೆಡೆಸಿ ವರದಿ ಮಾಡಲಾಗಿದೆ ಎಂದು ಸೂಲಿಬೆಲೆ ಉಪತಹಶೀಲ್ದಾರ್ ಚೈತ್ರ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಬರದ ಛಾಯೆ ಹೆಚ್ಚಾಗಿದ್ದು ರಾಗಿ ಬೆಳೆ ರ್ಣಪ್ರಮಾಣದಲ್ಲಿ ನೆಲಕಚ್ಚಿದ್ದು ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಬರಪರಿಹಾರ ಘೋಷಿಸಬೇಕು ಎಂದು ತಾಲೂಕಿನ ರೈತರು ಒತ್ತಾಯಿಸಿದ್ದಾರೆ.
ತಿಮ್ಮರಾಯ, ಸಾಧಪ್ಪನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಮಂಜುಳಾತಿಮ್ಮರಾಯಪ್ಪ, ಸದಸ್ಯರಾದ
ಜಗದೀಶ್, ಶಿವಣ್ಣ, ತಾಲ್ಲೂಕು ದಂಢಾಧಿಕಾರಿ ವಿಜಯಕುಮಾರ್, ತಾಲ್ಲೂಕುಪಂಚಾಯತ್
ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇಣುಕಾಪ್ರಸನ್ನ, ಜಂಟಿ ನಿರ್ದೇಶಕ ಲಲಿತಾರೆಡ್ಡಿ, ಉಪನಿರ್ದೇಶಕಿ ವಿನುತಾ, ಸೂಲಿಬೆಲೆ ನಾಡಕಚೇರಿಯ ಉಪತಹಶೀಲ್ದಾರ್ ಚೈತ್ರ, ರಾಜಸ್ವ ನಿರೀಕ್ಷಕ ನ್ಯಾಯಮೂರ್ತಿ, ಇನ್ಸ್ಪೆಕ್ಟರ್
ರವಿ, ಗ್ರಾಮ ಲೆಕ್ಕಿಗರು ರಫೀಕ್,ಅನುಪಮಾ,ಚಕ್ರವರ್ತಿ, ಜ್ಞಾನೇಶ್,ಕೀರ್ತನಾ, ಕಂದಾಯ ಇಲಾಖೆ,ಕೃಷಿ ಇಲಾಖೆ, ಗ್ರಾ.ಪಂ ಅಭಿವೃದ್ದಿಅಧಿಕಾರಿ ಗೋವಿಂದೇಗೌಡ ಉಪಸ್ಥಿತರಿದ್ದರು.