ಸುದ್ದಿಮೂಲ ವಾರ್ತೆ ಬೀದರ, ಜ.01:
ನಗರದ ಬ್ರಿಿಮ್ಸ್ ಆಸ್ಪತ್ರೆೆ ಆವರಣದಲ್ಲಿ ರಾಜ್ಯದ ಮೊದಲ ತೆರೆ ಮೇರೆ ಸಪ್ನೆೆ’ ವಿವಾಹ ಪೂರ್ವ ಸಂವಾದ ಕೇಂದ್ರ ಆರಂಭವಾಗಿದೆ.
ರಾಷ್ಟ್ರೀಯ ಮಹಿಳಾ ಆಯೋಗದ ಮಾರ್ಗದರ್ಶನದಲ್ಲಿ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆೆ ವತಿಯಿಂದ ಕೇಂದ್ರವನ್ನು ಪ್ರಾಾರಂಭಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಹಕಾರ ನೀಡಲಿವೆ ಎಂದು ಕೇಂದ್ರದ ಉದ್ಘಾಾಟನಾ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಾಮಿ ತಿಳಿಸಿದರು.
ಕೇಂದ್ರವು ವಿವಾಹ ಪೂರ್ವದಲ್ಲೇ ಯುವಜನರಿಗೆ ದಾಂಪತ್ಯದ ಮಹತ್ವ ಮನವರಿಕೆ ಮಾಡಲಿದೆ. ಹೊಂದಾಣಿಕೆಯ ಗೌರವಯುತ ದಾಂಪತ್ಯದ ಸೂತ್ರಗಳನ್ನು ಹೇಳಿಕೊಡಲಿದೆ. ಮದುವೆ ನಂತರದ ಗೊಂದಲ, ಮಹಿಳಾ ದೌರ್ಜನ್ಯ ನಿವಾರಣೆ, ವಿವಾಹ ವಿಚ್ಛೇದನಗಳ ನಿಯಂತ್ರಣಕ್ಕೆೆ ನೆರವಾಗಲಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಇಬ್ಬರು ಆಪ್ತ ಸಮಾಲೋಚಕರು ಇರಲಿದ್ದಾರೆ. ಯುವಕ, ಯುವತಿಯರಿಗೆ ಪ್ರತ್ಯೇಕ, ನಂತರ ಪಾಲಕರೊಂದಿಗೆ ಜಂಟಿಯಾಗಿ ಆಪ್ತ ಸಮಾಲೋಚನೆ ನಡೆಸಲಿದ್ದಾರೆ. ಮದುವೆಗೆ ಸಂಬಂಧಿಸಿದ ಸಂದೇಹ ನಿವಾರಿಸಲಿದ್ದಾರೆ. ಉತ್ತಮ ದಾಂಪತ್ಯಕ್ಕೆೆ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ಯುವಕ, ಯುವತಿಯರಿಗೆ ವಿವಾಹ ಪೂರ್ವ ಆಪ್ತ ಸಮಾಲೋಚನೆ ಅವಶ್ಯಕವಾಗಿದೆಯೇ ಹೊರತು ಪ್ರಿಿ ವೆಡ್ಡಿಿಂಗ್ ಶೂಟ್ ಅಲ್ಲ. ಪ್ರಿಿ ವೆಡ್ಡಿಿಂಗ್ ಶೂಟ್ನಿಿಂದ ದುಂದು ವೆಚ್ಚವಾಗುತ್ತಿಿದೆ. ಅದರ ನಂತರವೂ ಅನೇಕ ಮದುವೆಗಳು ಮುರಿದು ಬಿದ್ದಿವೆ. ಕಾರಣ, ಅಪ್ತ ಸಮಾಲೋಚನೆಯ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಸುಮಾರು 2.21 ಲಕ್ಷ ವಿವಾಹ ವಿಚ್ಛೇದನ ಪ್ರಕರಣಗಳು ನ್ಯಾಾಯಾಲಯಗಳ ಮುಂದೆ ಇವೆ. ಇದು, ಆರೋಗ್ಯಕರ ಬೆಳವಣಿಗೆ ಅಲ್ಲ. ದೇಶದ ಸಾಮಾಜಿಕ, ಆರ್ಥಿಕ ಹಿನ್ನೆೆಡೆಗೆ ಕಾರಣವಾಗಲಿದೆ. ಆದರ್ಶ ದಾಂಪತ್ಯದ ಸೂತ್ರ ತಿಳಿಸುವ ಹಾಗೂ ವಿವಾಹ ವಿಚ್ಛೇದನಗಳನ್ನು ನಿಯಂತ್ರಿಿಸುವ ಕೆಲಸ ಆಗಬೇಕಿದೆ. ಈ ದಿಸೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ ಸಂಸ್ಥೆೆಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎದು ತಿಳಿಸಿದರು.
ಕೇಂದ್ರಕ್ಕೆೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ ಮಾತನಾಡಿ, ಕೇಂದ್ರವು ವಿವಾಹದ ಬಗೆಗಿನ ಯುವಕ, ಯುವತಿಯರ ಅನೇಕ ಸಂದೇಹಗಳನ್ನು ನಿವಾರಣೆ ಮಾಡಲಿದೆ. ಪ್ರೀೀತಿ, ವಿಶ್ವಾಾಸದ ದಾಂಪತ್ಯ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಕೇಂದ್ರದ ವಿವಾಹಪೂರ್ವ ಸಂವಾದ ಪುಸ್ತಕವನ್ನು ಬೀದರ್ ವಿಶ್ವವಿದ್ಯಾಾಲಯದ ಸಿಂಡಿಕೇಟ್ ಸದಸ್ಯ ನಾಗಭೂಷಣ ಕಮಠಾಣೆ ಬಿಡುಗಡೆ ಮಾಡಿದರು.
ಬೇಮಳಖೇಡ ಹಿರೇಮಠ ಸಂಸ್ಥಾಾನದ ಡಾ. ರಾಜಶೇಖರ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸನ್ಮುಕಯ್ಯ ಬಿ. ಸ್ವಾಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಿ ಇಲಾಖೆಯ ಉಪ ನಿರ್ದೇಶಕ ಶ್ರೀಧರ ಎಂ.ಎಸ್, ಜಿಲ್ಲಾ ಶಸಚಿಕಿತ್ಸಕ ಡಾ. ಎಂ.ಡಿ. ಅಹೆಮದೊದ್ದೀನ್, ಭಾರತೀಯ ವೈದ್ಯಕೀಯ ಸಂಘದ ಬೀದರ್ ಘಟಕದ ಅಧ್ಯಕ್ಷ ಡಾ. ವಿಜಯ ಬಲ್ಲೂರಕರ್, ಮಹಾನಗರ ಪಾಲಿಕೆಯ ಸದಸ್ಯೆೆ ಉಲ್ಲಾಸಿನಿ ವಿಕ್ರಮ ಮುದಾಳೆ, ಮೇರಾ ಯುವ ಭಾರತ್ನ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಾಲಯದ ಸಂಶೋಧನಾ ನಿರ್ದೇಶಕ ಡಾ. ಬಿ.ವಿ. ಶಿವಪ್ರಕಾಶ್ ಮಾತನಾಡಿದರು.
ಬೀದರ್ ವಿಶ್ವವಿದ್ಯಾಾಲಯದ ಸಿಂಡಿಕೇಟ್ ಸದಸ್ಯ ಅಬ್ದುಲ್ ಸತ್ತಾಾರ್, ಮಹಾನಗರ ಪಾಲಿಕೆ ಸದಸ್ಯೆೆ ಜ್ಯೋೋತಿ ಶಿವರಾಜ ಗುಮ್ಮಾಾ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಾಧಿಕಾರಿ ಶ್ರೀಕಾಂತ ವೈರಾಗೆ, ಉಪ ನೋಂದಣಾಧಿಕಾರಿ ಹಾಗೂ ವಿವಾಹ ನೋಂದಣಾಧಿಕಾರಿ ಪ್ರಿಿಯಂಕಾ ಕೆ.ಪಾಟೀಲ, ಸಂವಾದ ಕೇಂದ್ರದ ಆಡಳಿತಾಧಿಕಾರಿ ಸಂಗೀತಾ ಪಾಟೀಲ ಮೊದಲಾದವರು ಉಪಸ್ಥಿಿತರಿದ್ದರು.

