ಸುದ್ದಿಮೂಲ ವಾರ್ತೆ ರಾಯಚೂರು, ಅ.20:
ರಾಜ್ಯದ ಕಾಂಗ್ರೆೆಸ್ ಸರ್ಕಾರದಲ್ಲಿ ನವೆಂಬರ್ ಕ್ರಾಾಂತಿಯ ಚರ್ಚೆ ಜೋರಾಗಿರುವ ಮಧ್ಯೆೆಯೇ ಉಪಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ ಮಂತ್ರಾಾಲಯ ಹಾಗೂ ಪಂಚಮುಖಿ ಭೇಟಿ ಕುತೂಹಲ ಹೆಚ್ಚಿಿಸಿದೆ.
ನವೆಂಬರ್ ಕ್ರಾಾಂತಿ, ಮುಖ್ಯಮಂತ್ರಿಿ ಬದಲಾವಣೆ ಎಂಬುದೆಲ್ಲ ಗಾಳಿ ಸುದ್ದಿಘಿ, ಮಾಧ್ಯಮಗಳ ಸೃಷ್ಠಿಿ ಅಂತೆಲ್ಲ ಹೇಳುತ್ತಲೆ ಡಿಸಿಎಂ ದೇವರುಗಳ ಮೊರೆ ಹೋಗುತ್ತಿಿರುವುದು ಸೃಷ್ಠಿಿಗಿಂತ ನಿಜವಿರಬಹುದೆ ಎಂಬ ಚರ್ಚೆ ಅವರದ್ದೆೆ ಪಕ್ಷದೊಳಗೆ ಮತ್ತು ಹೊರಗೂ ನಡೆಯುತ್ತಿಿದೆ.
ಈ ಮಧ್ಯೆೆ ದೀಪಾವಳಿಯಂದು ರಾಯಚೂರು ಜಿಲ್ಲೆೆಗೂ ಡಿ.ಕೆ.ಶಿವಕುಮಾರ ಅವರು ಭೇಟಿ ನೀಡುತ್ತಿಿರುವುದರಿಂದ ರಾಜಕೀಯವಾಗಿಯೂ ಮತ್ತು ದೇವರ ಮೇಲಿನ ಭಕ್ತಿಿಯಿಂದಲೂ ಸಾಧ್ಯ. ಅ.22ರಂದು ಬೆಳಿಗ್ಗೆೆ ರಾಯಚೂರಿಗೆ ಸಮೀಪ ಇರುವ ಮಂತ್ರಾಾಲಯದ ಶ್ರೀ ರಾಯರ ದರ್ಶನ ಪಡೆಯಲು ಆಗಮಿಸಲಿದ್ದು ಅ.21ರಂದೆ ರಾತ್ರಿಿ ಮಂತ್ರಾಾಲಯ ತಲುಪಿ ವಾಸ್ತವ್ಯ ಮಾಡಲಿದ್ದಾಾರೆ. 22ರ ಬೆಳಿಗ್ಗೆೆ ಶ್ರೀ ಗುರುರಾಘವೇಂದ್ರ ಸ್ವಾಾಮಿಗಳವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯಲಿದ್ದಾಾರೆ. ನಂತರ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರ ಆಶೀರ್ವಾದ ಪಡೆಯುವ ಕಾರ್ಯಕ್ರಮವಿದೆ.
ಅಲ್ಲಿಂದ ನೇರವಾಗಿ ರಾಯಚೂರು ತಾಲೂಕಿನ ಸುಕ್ಷೇತ್ರ ಗಾಣದಾಳಕ್ಕೆೆ ಆಗಮಿಸಿ ಅಲ್ಲಿನ ಶ್ರೀ ಪಂಚಮುಖಿ ಆಂಜನೇಯ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾಾರೆ.
ಈ ಎರಡೂ ಸುಕ್ಷೇತ್ರಗಳ ಭೇಟಿ ಒಂದೇ ದಿನ ದರ್ಶನ ಮಾಡುವುದರಿಂದ ಇಷ್ಟಾಾರ್ಥಗಳು ನೆರವೇರಲಿವೆ ಎಂಬ ಪ್ರತೀತಿ ಇದೆ ಎನ್ನುವ ಮಾಹಿತಿಯಿಂದಲೇ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಈ ದರ್ಶನಕ್ಕೆೆ ಮುಂದಾಗಿದ್ದಾಾರೆ ಎನ್ನಲಾಗುತ್ತಿಿದೆ.
ಅಲ್ಲದೆ, ಅದೇ ದಿನ ಪಂಚಮುಖಿ ಗಾಣದಾಳದಲ್ಲಿ ರಾಯಚೂರು ಗ್ರಾಾಮಾಂತರ ಕ್ಷೇತ್ರದ ದೇವಸೂಗೂರು, ಗಿಲ್ಲೇಸೂಗೂರು ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷರಾಗಿರುವ ರಾಜಶೇಖರ ರಂಗಾ, ನಾಗೇಂದ್ರಪ್ಪ ಮಟಮಾರಿ ಜೊತೆಗೆ ಇತ್ತೀಚೆಗೆ ವಿವಿಧ ಬ್ಲಾಾಕ್ಗಳಿಗೆ ಚುನಾಯಿತರಾಗಿರುವ ಪಕ್ಷದ ಮುಖಂಡರ ಪದಗ್ರಹಣ ಕಾರ್ಯಕ್ರಮ ಆಯೋಜಿಸಿದ್ದು ಆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸುತ್ತಿಿದ್ದಾಾರೆ ಎಂಬ ಸಮರ್ಥನೆ ಪಕ್ಷದ ನಾಯಕರದ್ದಾಾಗಿದೆ.
ಆದರೆ, ವಾಸ್ತವದಲ್ಲಿ ಡಿ.ಕೆ.ಶಿವಕುಮಾರ ಕ್ಷೇತ್ರದರ್ಶನಕ್ಕೆೆ ಬರುವುದರಿಂದ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾಾರೆ ಹೀಗಾಗಿ, ಕಾಗೆ ಕೂಡಲು, ಕೊಂಬೆ ಮುರಿಯಲು ಎಂಬ ಅಸ ಕಾಂಗ್ರೆೆಸ್ ನಾಯಕರ ಮಾತಿನಲ್ಲಿದೆ.
ಒಟ್ಟಾಾರೆ, ರಾಜ್ಯ ಸರ್ಕಾರದಲ್ಲಿಘಿ, ಕಾಂಗ್ರೆೆಸ್ ಪಕ್ಷದಲ್ಲಿ ನವೆಂಬರ್ ಕ್ರಾಾಂತಿ ಆಗುತ್ತದೊ ಇಲ್ಲವೊ, ರಾಯಚೂರು ಗ್ರಾಾಮಾಂತರದ ಪಕ್ಷದ ನಾಯಕರಲ್ಲಂತೂ ಸಂ ಕಾ(ಕ್ರಾಾ)ಂತಿಯಂತೂ ಆಗಲಿದೆ ಎಂಬುದರಲ್ಲಿ ಅನುಮಾನವಿಲ್ಲಘಿ.
ಡಿ.ಕೆ.ಶಿವಕುಮಾರ ಅವರು ಮಂತ್ರಾಾಲಯದ ಶ್ರೀರಾಯರ ಹಾಗೂ ಗಾಣದಾಳದ ಪಂಚಮುಖಿ ಆಂಜನೇಯ್ಯ ದೇವರ ದರ್ಶನಕ್ಕೆೆ ಬರಲಿದ್ದು ಅಂದೇ ಗ್ರಾಾಮಾಂತರದ ಎರಡೂ ಬ್ಲಾಾಕ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಆಯೋಜಿಸಿದ್ದು ರಾಜ್ಯಾಧ್ಯಕ್ಷರಾಗಿ ಅವರು ಭಾಗವಹಿಸಿ ಕಾರ್ಯಕರ್ತರ, ಮುಖಂಡರ ಜೊತೆ ಸಭೆ ಮಾಡಲಿದ್ದಾಾರೆ ಎಂದು ಶಾಸಕ ಬಸನಗೌಡ ದದ್ದಲ್ ತಿಳಿಸಿದ್ದಾಾರೆ.