ಸುದ್ದಿಮೂಲ ವಾರ್ತೆ ಬೆಂಗಳೂರು, ಅ.18:
ನಿವೇಶನದ ಖಾತೆ ಮಾಡಲು ಲಂಚಕ್ಕೆೆ ಒತ್ತಾಾಯಿಸುತ್ತಿಿದ್ದ ಪಾಲಿಕೆ ಕಂದಾಯ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಹೊರ ವಲಯ ಕೆ.ಆರ್.ಪುರಂನ ಟಿ.ಸಿ.ಪಾಳ್ಯದ ವೆಂಗಯ್ಯ ಪಾರ್ಕ್ನಲ್ಲಿ ಶನಿವಾರ ನಡೆದ ಬೆಂಗಳೂರು ನಡಿಗೆ ಅಭಿಯಾನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ನಾಗರಿಕರು ದೂರು ನೀಡಿದ ಮೇರೆಗೆ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿದರು.
ಖಾತಾ ಮಾಡಿಸಲು ಕಂದಾಯ ಅಧಿಕಾರಿಗಳು ಹೆಚ್ಚು ಲಂಚ ಕೇಳುತ್ತಾಾರೆ. ಈ ವಿಚಾರವಾಗಿ ಬಿಬಿಎಂಪಿ ಆಯುಕ್ತರ ಬಳಿ ದೂರು ನೀಡಿದ್ದೇನೆ ಎಂದು ಸ್ಥಳೀಯ ಮಹಿಳೆ ಸುಲ್ತಾಾನ್ ಮಿರ್ಜಾ ದೂರಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಲಂಚ ಕೇಳುತ್ತಿಿರುವ ಅಧಿಕಾರಿಯ ಹೆಸರನ್ನು ಹೇಳಿ ಸ್ಥಳದಲ್ಲೇ ಅಮಾನತು ಮಾಡುತ್ತೇನೆ ಎಂದರು.
ಆಕೆ ಕಂದಾಯ ಅಧಿಕಾರಿ ಬಸವರಾಜ್ ಎಂಬುವವರು 10ರಿಂದ 15 ಸಾವಿರ ರೂ. ಲಂಚಕ್ಕೆೆ ಬೇಡಿಕೆ ಇಡುತ್ತಿಿದ್ದಾರೆ. ಇದಕ್ಕಾಾಗಿ ನಿವೇಶನ ಖಾತೆ ಮಾಡದೆ ಎರಡು ತಿಂಗಳಿನಿಂದ ಅಲೆದಾಡಿಸುತ್ತಿಿದ್ದಾರೆ. ಹೊರ ಮಾವು ಕಚೇರಿಗೆ ಕಳುಹಿಸುತ್ತಾಾರೆ. ಅಲ್ಲಿಗೆ ತೆರಳಿದರೆ ಅಲ್ಲಿಂದ ವಿಜಿನಾಪುರ ಬಿಬಿಎಂಪಿ ಕಚೇರಿಗೆ ಕಳುಹಿಸುತ್ತಾಾರೆ ಎಂದು ಮಾಹಿತಿ ನೀಡಿದರು.
ಲಂಚಕ್ಕೆೆ ಒತ್ತಾಾಯಿಸುತ್ತಿಿರುವ ಅಧಿಕಾರಿಯ ಮಾಹಿತಿ ಪಡೆದು ಪರಿಶೀಲನೆ ನಡೆಸಿ ಇಂದು ಸಂಜೆಯೊಳಗೆ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತರಿಗೆ ಅವರು ಸೂಚಿಸಿದರು.
ಗೃಹ ಲಕ್ಷ್ಮೀ ಹಣ ಬಂದಿಲ್ಲ ಎಂದು ಸುಳ್ಳು ಹೇಳಿದ ಮಹಿಳೆ: ಬೆಂಗಳೂರು ನಡಿಗೆ ಅಭಿಯಾನದಲ್ಲಿ ಪಾಲ್ಗೊೊಂಡಿದ್ದ ಮಹಿಳೆಯೊಬ್ಬರು ನನಗೆ ಆರು ತಿಂಗಳಿಂದ ಗೃಹ ಲಕ್ಷ್ಮೀ ಹಣ ಬಂದಿಲ್ಲ ಎಂದು ದೂರಿದರು. ಆರು ತಿಂಗಳಿಂದ ಹಣ ಬಾಕಿ ಇಲ್ಲ. ಪರಿಶೀಲಿಸಿ ಎಂದು ಡಿಸಿಎಂ ಡಿಕೆಶಿ ಮಹಿಳೆಗೆ ಹೇಳಿದರು. ಮಹಿಳೆ ಇಲ್ಲ ನನ್ನ ಖಾತೆಗೆ ಹಣ ಬಂದಿಲ್ಲ ಎಂದರು. ಈ ವೇಳೆ ಡಿಕೆಶಿ ತಮ್ಮ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದರು.
ಮಹಿಳೆಯರಿಗೆ ಜುಲೈ ತಿಂಗಳ ಗೃಹ ಲಕ್ಷ್ಮೀ ಹಣ ಈ ತಿಂಗಳು ಸಂದಾಯವಾಗಿದೆ. ದೂರು ನೀಡಿರುವ ಮಹಿಳೆಯ ವಿಚಾರದಲ್ಲಿ ಏನಾದರೂ ಸಮಸ್ಯೆೆಯಾಗಿದ್ದರೆ ಪರಿಶೀಲಿಸಿ ಅದನ್ನು ಬಗೆ ಹರಿಸಲಾಗುವುದು ಎಂದು ಡಿಸಿಎಂ ಹೇಳಿದರು.
ಕೂಡಲೇ ರಾಜೇಂದ್ರ ಪ್ರಸಾದ್ ಮಹಿಳೆಯ ಮೊಬೈಲು ಪಡೆದು ಸಂದೇಶಗಳನ್ನು ಪರಿಶೀಲಿಸಿದರು. ಅಕ್ಟೋೋಬರ್ 3ರಂದು ಜುಲೈ ತಿಂಗಳ ಗೃಹಲಕ್ಷ್ಮೀ ಹಣ ಪಾವತಿಯಾಗಿರುವ ಸಂದೇಶ ಮೊಬೈಲ್ನಲ್ಲಿ ಇತ್ತು. ಈ ಸಂದೇಶವನ್ನು ಡಿಸಿಎಂ ಡಿಕೆಶಿ ಸಾರ್ವಜನಿಕರ ಮುಂದೆಯೇ ಓದಿದರು.
ಈ ಮಹಿಳೆ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ತೀರ್ಮಾನಿಸಿದ್ದೆ. ಸಚಿವೆ ಲಕ್ಷ್ಮೀ ಹೆಬ್ಬಾಾಳ್ಕರ್ ಅವರನ್ನೂ ಪ್ರಶ್ನಿಿಸಿ ತರಾಟೆಗೆ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೆ. ಸದ್ಯ ಅವರು ೆನ್ ಕರೆ ಸ್ವೀಕರಿಸಲಿಲ್ಲ. ಗೃಹ ಲಕ್ಷ್ಮೀ ಹಣ ಆರು ತಿಂಗಳಿಂದ ಪಾವತಿಯಾಗಿಲ್ಲ ಎಂದು ಮಹಿಳೆ ಮಾಡಿರುವ ಆರೋಪ ಸುಳ್ಳು. ಜುಲೈವರೆಗಿನ ಹಣ ಸಂದಾಯವಾಗಿದ್ದು ಆಗಸ್ಟ್ ತಿಂಗಳ ಹಣ ಪಾವತಿ ಪ್ರಕ್ರಿಿಯೆಯಲ್ಲಿದೆ ಎಂದು ತಿಳಿಸಿದರು.
ಬೆದರಿಕೆ ಹಾಕಿದರೆ ಕಾನೂನು ಕ್ರಮ: ವ್ಯಕ್ತಿಿಯೊಬ್ಬರು ಮಾತನಾಡಿ ನಾನು ಎರಡು ವರ್ಷಗಳ ಹಿಂದೆ ನನ್ನ ನಿವೇಶನದಲ್ಲಿ ಮನೆ ಕಟ್ಟಿಿದ್ದೇನೆ. ಆ ಜಾಗವನ್ನು ಖರೀದಿ ಮಾಡಬೇಕು ಎಂದು ನಿವೇಶನದ ನೆರೆಯ ವ್ಯಕ್ತಿಿ ಮಲ್ಲಿಕಾರ್ಜುನ್ ನಿರ್ಧರಿಸಿದ್ದರು. ಆದರೆ ನಾನು ನಿವೇಶನ ನೀಡದೆ ಮನೆ ಕಟ್ಟಿಿದೆ. ಈಗ ಕಟ್ಟಿಿದ ಮನೆಗೆ ಪ್ರವೇಶ ಮಾಡಲು ಬಿಡುತ್ತಿಿಲ್ಲ. 10 ಲಕ್ಷ ರೂ.ಗೆ ಒತ್ತಾಾಯಿಸುತ್ತಿಿದ್ದಾರೆ. ಹಣಕ್ಕಾಾಗಿ ರೌಡಿಗಳನ್ನು ಬಿಟ್ಟು ಹೆದರಿಸುತ್ತಿಿದ್ದಾರೆ ಎಂದು ಎನ್.ಆರ್.ಲೇಔಟ್ನ ನಿವಾಸಿ ವಿಘ್ನೇಶ್ ಅಳುತ್ತಾಾ ಹೇಳಿದರು.
ಅವರು ಯಾವ ಸಂಘಟನೆಯವರೇ ಆಗಲಿ, ಕಾಂಗ್ರೆೆಸ್,ಬಿಜೆಪಿ ದಳದವರೇ ಅಗಿರಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ. ನೀವು ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ಸಂಜೆ ವೇಳೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ. ನೀವು ದೂರು ನೀಡಿದ ನಂತರ ಅದಕ್ಕೆೆ ಬದ್ಧವಾಗಿರಬೇಕು ಎಂದು ಡಿಕೆಶಿ ಹೇಳಿದರು.